ಪುಪ್ಪ ಖಡಕ್ ಲುಕ್ ನಲ್ಲಿ ಜಡ್ಡು

1 min read
Jadeja Saaksha tv

ಪುಪ್ಪ ಖಡಕ್ ಲುಕ್ ನಲ್ಲಿ ಜಡ್ಡು

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ  ಸ್ಟಾರ್ ಆಟಗಾರ ರವೀಂದ್ರ ಜಡೆಜಾ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುತ್ತಾರೆ. ಸದ್ಯ ಜಡೆಜಾ, ಅಲ್ಲು ಅರ್ಜುನ್ ಪುಷ್ಪ ಚಿತ್ರದಲ್ಲಿ ಹಾಕಿದ್ದ ಗೆಟಪ್ ನ್ನು, ಹಾಕಿಕೊಂಡು ಪೋಟೊವನ್ನು ಟ್ವಿಟ್ ಮಾಡಿದ್ದಾರೆ. ಅಲ್ಲು ಅರ್ಜುನ್ ಗೆಟಪ್​ಗೂ ಜಡ್ಡು ಗೆಟಪ್​ಗೂ ವ್ಯತ್ಯಾಸ ಕಾಣದೆ ಇದ್ದದ್ದು ಅವರ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.

ಖಡಕ್ ಲುಕ್ ಶೇರ್ ಮಾಡಿರುವ ಜಡ್ಡು, ಫ್ಯಾನ್ಸ್​​ಗೆ ಎಚ್ಚರಿಕೆ ನೀಡುವುದನ್ನು ಮರೆತಿಲ್ಲ. ‘‘ಪುಷ್ಪ ಅಂದರೆ ಹೂವು ಎಂದುಕೊಂಡಿದ್ದೀರಾ? ಫೈರ್!’’ ಎಂದು ಕ್ಯಾಪ್ಶನ್ ನೀಡಿದ್ದಾರೆ. ಜತೆಗೆ ‘‘ಇದು ಕೇವಲ ಸಾಂಕೇತಿಕ. ಸಿಗರೇಟ್, ಬೀಡಿ, ಟೊಬ್ಯಾಕೊ ಸಂಬಂಧಿತ ಉತ್ಪನ್ನಗಳು ಆರೋಗ್ಯಕ್ಕೆ ಹಾನಿಕಾರಕ. ಅದನ್ನು ಬಳಸಬೇಡಿ’’ ಎಂದು ಜಡೇಜಾ ಎಚ್ಚರಿಕೆ ನೀಡಿದ್ದಾರೆ. ಅಲ್ಲು ಅರ್ಜುನ್ ಜಡೇಜಾ ಪೋಸ್ಟ್​ಗೆ ‘ತಗ್ಗೆದೆಲೆ’ ಎಂದು ಬರೆದು ‘ಫೈರ್’ ಇಮೋಜಿಗಳನ್ನು ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd