ಜಡ್ಡು…, ಚಪ್ಪಾಳೆ ಹೊಡೆಯಲು ಪೂಜಾರ ಅಲ್ಲಿ ನಿಂತಿಲ್ಲ- ಎಮ್‍ಎಸ್‍ಡಿ
ರವೀಂದ್ರ ಜಡೇಜಾ.. ಟೀಮ್ ಇಂಡಿಯಾದ ಅದ್ಭುತ ಆಲ್ ರೌಂಡರ್. ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಹೀಗೆ ಸಮಯೋಜಿತವಾಗಿ ಆಡುವ ರವೀಂದ್ರ ಜಡೇಜಾ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲೇ.
ಆದ್ರೆ ರವೀಂದ್ರ ಜಡೇಜಾ ತಂಡದ ಖಾಯಂ ಆಟಗಾರನಾಗಲೂ ವಿಫಲರಾದ್ರು. ಆಲ್‍ರೌಂಡರ್ ಆಗಿದ್ದರೂ ಕೂಡ ತಂಡಕ್ಕೆ ಬಂದು ಹೋಗುವ ಆತಿಥಿಯಂತಿದ್ದರು. ಹೆಚ್ಚಾಗಿ ಹನ್ನೇರಡನೇ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ 19 ವಯೋಮಿತಿ ವಿಶ್ವಕಪ್‍ನ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2019ರ ವಿಶ್ವಕಪ್ ನಲ್ಲಿ ಧೋನಿ ಜೊತೆಸೇರಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದ್ರೆ ಅದು ಕೊನೆಗೆ ಸಾಧ್ಯವಾಗಲಿಲ್ಲ. ಆದ್ರೆ ಈಗ ಧೋನಿಯ ಕಟ್ಟ ಕಡೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಡೆಯ ಜೊತೆಗಾರನಾಗಿ ಆಡಿದ್ದೇ ಎಂಬುದು ಜಡ್ಡುಗೆ ಹೆಮ್ಮೆಯ ವಿಷಯವಾಗಿದೆ.
ಧೋನಿಯ ನಾಯಕತ್ವದಲ್ಲಿ ಹಲವಾರು ಪಂದ್ಯಗಳನ್ನು ಆಡಿರುವ ಜಡೇಜಾ ಅವರ ಮಿಂಚಿನ ಕ್ಷೇತ್ರ ರಕ್ಷಣೆಯಿಂದಾಗಿ ಅನೇಕ ರನೌಟ್ ಗಳನ್ನು ಧೋನಿ ಮಾಡಿದ್ದಾರೆ. ಧೋನಿಗೆ ಜಡೇಜಾ ಸಾಮಥ್ರ್ಯ ಮತ್ತು ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅದಕ್ಕೆ ತಕ್ಕಂತೆ ಆಟವನ್ನಾಡಿಸುತ್ತಿದ್ದರು. ಹಾಗೇ ಧೋನಿ ಕೈಯಿಂದ ಸಾಕಷ್ಟು ಬಾರಿ ಬೈಸಿಕೊಂಡಿದ್ದು ಉಂಟು ಜಡೇಜಾ.
ಅದು 2014ರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ. ಬ್ರೆಂಡನ್ ಮೆಕಲಂ ಮತ್ತು ಬಿಜೆ ವಾಟ್ಲಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ರವೀಂದ್ರ ಜಡೇಜಾ ಬೌಲಿಂಗ್ ಗೆ ರೆಡಿಯಾಗುತ್ತಿದ್ದರು. ಆಗ ಧೋನಿ ಹೇಳಿದ್ದು ಹೀಗೆ.. ಜಡ್ಡು.. ಆಫ್ ಸ್ಟಂಪ್ ಕಡೆಗೆ ಬೌಲಿಂಗ್ ಮಾಡು. ಪೂಜಾರನನ್ನು ಅಲ್ಲಿ ನಾನು ಚಪ್ಪಾಳೆ ಹೊಡೆಯಲು ನಿಲ್ಲಿಸಿಲ್ಲ ಎಂದು ಹೇಳಿದ್ದರು. ಆಗ ಜಡೇಜಾ ತಕ್ಷಣವೇ ಬೌಲಿಂಗ್ ಲಯವನ್ನು ಬದಲಾವಣೆ ಮಾಡಿಕೊಂಡ್ರು. ಹಾಗೇ ಇನ್ನೊಂದು ಬಾರಿ ಜಡೇಜಾಗೆ ಧೋನಿ ವೀಕ್ಷಕ ವಿವರಣೆಕಾರನಂತೆ ಶಹಬ್ಬಾಸ್ ಗಿರಿ ನೀಡಿದ್ದು. ಭರ್‍ಪೂರ್ ಬೌಲಿಂಗ್ ಕಾ ಪ್ರದರ್ಶನ್ ಕರ್ತೆ ಹು ರವೀಂದ್ರ ಜಡೇಜಾ.. ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಿಯಾ ಎಂದು ಉದ್ಗಾರ ಮಾಡಿದ್ದರು.








