ಕತಾರ್ ನಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಉಪರಾಷ್ಟ್ರಪತಿ ಜಗದೀಪ್ ಧನಕರ್…
ಫಿಪಾ ವಿಶ್ವಕಪ್ ಉದ್ಘಾಟನಾ ಸಮಯದಲ್ಲಿ ಎರಡು ದಿನಗಳ ಕತಾರ್ ಪ್ರವಾಸದಲ್ಲಿರುವ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರು ಇಂದು ಕತಾರ್ ನಲ್ಲಿರುವ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ್ದಾರೆ.
ಭಾರತದ ಸರ್ಕಾರಿ ವ್ಯವಸ್ಥೆ ಇಂದು ಸರಳವಾಗಿದೆ. ನಾಗರಿಕರಿಗಾಗಿ ಆಡಳಿತ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ತರಲಾಗಿದೆ. ಕೋವಿಡ್ ಸಮಯದಲ್ಲಿ ಯಾವುದೇ ರಾಷ್ಟ್ರ ಮಾಡದ ಕಾರ್ಯವನ್ನು ಭಾರತ ಕೈಗೊಂಡಿತ್ತು. ಸುಮಾರು 3 ಕೋವಿಡ್ ಡೋಸ್ ಉತ್ಪಾದಿಸಿ, ವಿದೇಶಗಳಿಗೂ ನೆರವು ನೀಡಿತ್ತು ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ನರೇಂದ್ರ ಮೋದಿ ಸರ್ಕಾರ, 80 ಕೋಟಿ ಜನರಿಗೆ ಉಚಿತ ಪಡಿತರ ವಿತರಣೆ ಆರಂಭಿಸಿದ್ದು, ಇಂದಿಗೂ ಮುಂದುವರಿಯುತ್ತಿದೆ. ಭಾರತ ಬದಲಾಗಿದೆ. ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಯತ್ತ ಹೆಜ್ಜೆ ಹಾಕಿದೆ. ಈ ಪಯಣದಲ್ಲಿ ದೇಶ ಮತ್ತು ವಿಶ್ವದ ಎಲ್ಲೆಡೆ ಇರುವ ಭಾರತೀಯರ ಕೊಡುಗೆಯಿದೆ ಎಂದು ಹೇಳಿದರು.
ಮಾನವೀಯತೆಯ ಶ್ರೇಷ್ಠ ಸಿದ್ಧಾಂತದಲ್ಲಿ ಭಾರತೀಯರ ಸಾಮರ್ಥ್ಯ ಅಡಗಿದೆ. ಜಗತ್ತಿನ ಯಾವುದೇ ಮೂಲೆಯಲ್ಲಿರುವ ಭಾರತೀಯರು ನಮ್ಮ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿನಿಧಿಯಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು.
Jagadeep dhanakar: Vice President who addressed Indians in Qatar…








