ಸ್ಯಾಂಡಲ್ ವುಡ್ ನ ‘ನವರಸನಾಯಕ’ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ..!   

1 min read

ಸ್ಯಾಂಡಲ್ ವುಡ್ ನ ‘ನವರಸನಾಯಕ’ ಜಗ್ಗೇಶ್ ಗೆ ಹುಟ್ಟುಹಬ್ಬದ ಸಂಭ್ರಮ..!

ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿ 40 ವರ್ಷ ಇಂಡಸ್ಟ್ರಿಯಲ್ಲಿ ಮಿಂಚು ಹರಿಸಿ ತಮ್ಮದೇ ಆದ ಒಂದು ವಿಭಿನ್ನ ಇಮೇಜ್, ಫ್ಯಾನ್ ಫಾಲೋವರ್ಸ್ ನ ಹೊಂದಿರುವ  ನವರಸ ನಾಯಕ ಜಗ್ಗೇಶ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನ ಮಾಡಿ ಜನರನ್ನ ನಕ್ಕು ನಲಿಸಿ, ಮನರಂಜಿಸಿರುವ ಜಗ್ಗೇಶ್ ಅವರಿಗೆ ಇಂದು 58ನೇ ವರ್ಷದ ಹುಟ್ಟುಹಬ್ಬ. ಹೀಗಾಗಿ ಅಭಿಮಾನಿಗಳು ಜಾಮಾಜಿಕ ಜಾಲತಾಣಗಳಲ್ಲಿ ಜಗ್ಗೇಶ್ ಅವರಿಗೆ ಹುಟ್ಟುಹಬ್ಬದ ಶುಬಾಷಯಗಳನ್ನ ತಿಳಿಸುತ್ತಿದ್ದಾರೆ.

ಸ್ಯಾಂಡಲ್ ನ ‘ನಟಸಾರ್ವಭೌಮ’, ‘ಯುವರತ್ನ’ನಿಗೆ ಬರ್ತ್ ಡೇ ಸಂಭ್ರಮ..! 

ಅಲ್ಲದೇ ಜಗ್ಗೇಶ್ ಗೆ ಸಿನಿಮಾ ತಾರೆಯರು, ಉದ್ಯಮದವರು, ಖಾಸಗಿ ವಾಹಿನಿಗಳು, ರಾಜಕಾರಣಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ವಿಶಸ್ ತಿಳಿಸಿದ್ದು, ಜಗ್ಗೇಶ್ ಅವರು ಟ್ವೀಟ್ ಗಳನ್ನ ರೀಟ್ವೀಟ್ ಮಾಡುತ್ತಾ ಧನ್ಯವಾದಗಳನ್ನ ತಿಳಿಸುತ್ತಿದ್ದಾರೆ.

ಅಲ್ದೇ ಜಗ್ಗೇಶ್ ಅವರು ತಮ್ಮ ಹಟ್ಟುಹಬ್ಬದ ದಿನದಂದು ಟ್ವೀಟ್ ಮಾಡಿದ್ದು,   ‘ಮಾತೃಪಿತಾಶ್ರೀ ನಂಜಮ್ಮಶಿವಲಿಂಗಪ್ಪ ರವರ ಉದರದಲ್ಲಿ ಜನಿಸಿ 58 ವರ್ಷ. ಕನ್ನಡಿಗರ ಮಡಿಲಲ್ಲಿ 40 ವರ್ಷ. ತಂದೆ-ತಾಯಿ, ರಾಯರು, ಕನ್ನಡಿಗರ ಆಶೀರ್ವಾದ ಹಾಗೂ ಮಾಧ್ಯಮಮಿತ್ರರ ಭುಜತಟ್ಟುವಿಕೆ ಇಲ್ಲಿಯವರೆಗೂ ನಡೆದು ಬಂದಿದ್ದೇನೆ. ನಿಮ್ಮ ಶುಭಹಾರೈಕೆ ನನ್ನ ಶ್ರೀರಕ್ಷೆಯಾಗಿದೆ. ಇಂದು ನಾ ಬಲ್ಲೆ, ನಾಳೆ ರಾಯರು ಬಲ್ಲರು, ಆಶಾದಾಯಕ ಹೆಜ್ಜೆ ಇಡುತ್ತಿರುವೆ’ ಎಂದು ಹೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd