jaggesh
40 ವರ್ಷದ ಕಲಾಸೇವೆ: ಸಿನಿ ಪಯಣ ನೆನೆದು ಭಾವುಕರಾದ ಜಗ್ಗೇಶ್..!
ಚಂದನವನದ ಹಿರಿಯ ನಟ ನವರಸನಾಯಕ ಜಗ್ಗೇಶ್ ಅವರು ಚಿತ್ರರಂಗದಲ್ಲಿ ಸುಧೀರ್ಘ 40 ವರ್ಷಗಳ ಕಾಲ ಕಲಾಸೇವೆ ಸಲ್ಲಿಸಿದ್ದಾರೆ. ನವೆಂಬರ್ 17, 1980ರಲ್ಲಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ ಜಗಣ್ಣ ಬಣ್ಣದ ಜಗತ್ತಿಗೆ ಎಂಟ್ರಿಯಾಗಿ 40 ವರ್ಷಗಳಾಗಿವೆ. ಸಿನಿಪಯಣದಲ್ಲಿ ತಾವು ಅನುಭವಿಸಿದ ಅನುಭವಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಹಂಚಿಕೊಂಡಿರುವ ಜಗಣ್ಣ ಭಾವುಕರಾಗಿದ್ದಾರೆ.
ಆಪ್ತ ಸ್ನೇಹಿತ ಜಾಕ್ ಮಂಜು ಹುಟ್ಟುಹಬ್ಬಕ್ಕೆ ಶುಭಕೋರಿದ ಕಿಚ್ಚ..!
ರೇಣುಕಾಂಬ ಚಿತ್ರಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ಸಿನಿ ಜರ್ನಿಯ ಅನುಭವ ಬಿಚ್ಚಿಟ್ಟ ಜಗ್ಗೇಶ್ ಅವರು , ನಾನು ಯಾರು ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಆಗ ನನ್ನನ್ನು ಗುರುತಿಸಿದ್ದು ಮಾಧ್ಯಮ. ಅಲ್ಲಿಂದ ನನಗೆ ಅವಕಾಶ ಸಿಗೋಕೆ ಆರಂಭ ಆಯ್ತು. ವೀರ ಸ್ವಾಮಿ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಟ್ಟರು. ನನ್ನ ಫೋಟೋ ನೋಡಿ ರಜನಿಕಾಂತ್ ತರ ಕಾಣಿಸ್ತೀಯ ಅಂತ ಹೇಳಿದ್ರು. ಅಮೇಲೆ ರಣಧೀರ ಸಿನಿಮಾ ಆಫರ್ ಸಿಕ್ಕಿತು. ನಂತರ ಮದ್ರಾಸ್ ಗೆ ತೆರಳಿದೆ ಎಂದು ಹೇಳಿಕೊಂಡಿದ್ದಾರೆ.
ನನ್ನನ್ನು ರಾಜಕೀಯಕ್ಕೆ ಕರೆತಂದಿದ್ದು ಡಿ.ಕೆ.ಶಿವಕುಮಾರ್ : ಜಗ್ಗೇಶ್
ಮುಂದುವರೆದು ಮಾತನಾಡಿದ ಜಗಣ್ಣ, ಜೀವನದಲ್ಲಿ ಬಂದ ಎರಡು ಪಾತ್ರ ನನಗೆ ದೊಡ್ಡ ತಿರುವು ಕೊಟ್ಟಿದೆ. ಒಂದು ರಣರಂಗ ಸಿನಿಮಾ, ಮತ್ತೊಂದು ಧ್ವಾರಕೀಶ್ ನೀಡಿದ ಪಾತ್ರ. ಅಂಬರೀಶ್ ಅವರ ರೌಡಿ ಎಮ್ ಎಲ್ ಎ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಬಳಿಕ ಬಂಡ ನನ್ನ ಗಂಡ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡೆ. ಈ ಸಿನಿಮಾ ಬಿಡುಗಡೆ ಮಾಡೋಕೆ ಯಾರು ಮುಂದೆ ಬರಲಿಲ್ಲ. ಆಗ ಅಂಬರೀಶ್ ಅವರ ಸಹಾಯದಿಂದ ಈ ಸಿನಿಮಾ ರಿಲೀಸ್ ಆಗಿ ಉತ್ತಮ ಕಲೆಕ್ಷನ್ ಮಾಡಿತು ಎಂದಿದ್ದಾರೆ. ಇದೇ ವೇಳೆ ಚಿತ್ರರಂಗದಲ್ಲಿ 40 ವರ್ಷದ ಸಿನಿ ಜರ್ನಿಯಲ್ಲಿ ಬೆನ್ನಿಗೆ ನಿಂತ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ.
jaggesh
ಬಾಲಿವುಡ್ ಡ್ರಗ್ಸ್ ಕೇಸ್: ಕಾಮಿಡಿಯನ್ ಭಾರತಿ ಮತ್ತು ಪತಿಗೆ ತಾತ್ಕಾಲಿಕ ರಿಲೀಫ್..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








