ಬೆಂಗಳೂರು: ವೈವಾಹಿಕ ಜೀವನಕ್ಕೆ ಕಾಲಿಟ್ಟ ನಿಖಿಲ್-ರೇವತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ರಾಜಕೀಯ ಗಣ್ಯರು, ಸಿನಿರಂಗದ ಕಲಾವಿದರು ನಿಖಿಲ್ ಗೆ ವಿಶ್ ಮಾಡುತ್ತಿದ್ದಾರೆ.
ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ…ತಂದೆತಾಯಿ ತಾತಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು…ಅದು ಪಡೆದ ಅದೃಷ್ಟವಂತ ನಿಕಿಲ್….
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಜೋಡಿಗೆ ಶುಭಹಾರೈಕೆ…
ನೂರ್ಕಾಲ ಸುಖವಾಗಿ ಬಾಳಿ…godbless..#nikilkumar @hd_kumaraswamy pic.twitter.com/3Ye5i22UdX— ನವರಸನಾಯಕ ಜಗ್ಗೇಶ್ (@Jaggesh2) April 17, 2020
ಅದರಂತೆ ನಟ ಜಗ್ಗೇಶ್ ಟ್ವೀಟ್ ಮೂಲಕ ನವಜೋಡಿಗೆ ಶುಭ ಕೋರಿದ್ದಾರೆ. ನಿಖಿಲ್ ಮಾಂಗಲ್ಯಧಾರಣೆ ಮಾಡುವ ಫೋಟೋ ಶೇರ್ ಮಾಡಿರುವ ನವರಸ ನಾಯಕ, ಮದುವೆ ಸ್ವರ್ಗದಲ್ಲಿ ನಿಶ್ಚಯಿಸಿದ ದೇವರ ನಿಯಮ. ತಂದೆ-ತಾಯಿ, ತಾತ-ಅಜ್ಜಿ ಆಶೀರ್ವಾದ ಪಡೆದು ಮದುವೆ ಆಗುವುದಕ್ಕೆ ವಿಶೇಷ ಯೋಗ ಬೇಕು. ಅದು ಪಡೆದ ಅದೃಷ್ಟವಂತ ನಿಖಿಲ್. ನೀವು ನೂರ್ಕಾಲ ಸುಖವಾಗಿ ಬಾಳಿ ಎಂದು ಶುಭ ಹಾರೈಸಿದ್ದಾರೆ.








