500 ಕೊಟ್ರೆ ಜೈಲಲ್ಲಿ ಇರಲು ಅವಕಾಶ: ಪ್ರವಾಸಿಗರಿಗೆ ಹೊಸ ಅವಕಾಶ
ನಿಮಗೆ ಜೈಲು ವ್ಯವಸ್ಥೆ ಹೇಗಿರುತ್ತೆ ಅಲ್ಲಿ ಒಂದು ದಿನ ಕಾಲ ಕಳೆಯಬೇಕು ಎನ್ನವ ಕುತೂಹಲವಿದ್ದರೆ ನಿಮಗೊಂದು ಸುವರ್ಣಾವಕಾಶವಿದೆ.
ನಿಜವಾದ “ಜೈಲು ಅನುಭವವನ್ನು” ಬಯಸುವ “ಪ್ರವಾಸಿಗರಿಗೆ” ಉತ್ತರಾಖಂಡ್‌ನ ಹಲ್ದ್ವಾನಿ ಆಡಳಿತ ಪ್ರತಿ ರಾತ್ರಿಗೆ ₹ 500 ನಂತೆ ವಸತಿ ಒದಗಿಸಲು ಹಿಂದಿನ ಜೈಲಿನ ಪ್ರದೇಶವನ್ನು ಪ್ರಸ್ತುತ ನವೀಕರಿಸುತ್ತಿದೆ.
ಕೇವಲ ಪ್ರವಾಸಿಗರು ಮಾತ್ರವಲ್ಲ, ನಿಮ್ಮ ಜಾತಕಗಳಲ್ಲಿ ಜೈಲುವಾಸವನ್ನು ಮುನ್ಸೂಚಿಸುವ “ಬಂಧನ ಯೋಗ” ವಿದ್ದರೆ ಅದನ್ನ ತಪ್ಪಿಸುವ ಸಲುವಾಗಿ ಜೈಲಿನಲ್ಲಿ ಸಮಯವನ್ನ ಪೂರೈಸಲು ಜ್ಯೋತಿಷಿಗಳು ಸಲಹೆ ನೀಡಿದ್ದಾರಂತೆ.

ಹಲ್ದ್ವಾನಿ ಕಾರಾಗೃಹವನ್ನು 1903 ರಲ್ಲಿ ನಿರ್ಮಿಸಲಾಗಿದ್ದು, ಅತ್ಯಂತ ಹಳೆಯ ಶಸ್ತ್ರಗಾರವಾಗಿದೆ. ಪ್ರಸ್ತುತ ಇದನ್ನ ಖಾಲಿ ಮಾಡಿ “ಜೈಲು ಅತಿಥಿಗಳಿಗಾಗಿ ” ನವಿಕರಿಸಲಾಗುತ್ತಿದೆ.
“ಶಿಫಾರಸು ಮಾಡಿದ ವ್ಯಕ್ತಿಗಳಿಗೆ” ಜೈಲು ಬ್ಯಾರಕ್‌ನಲ್ಲಿ ಕೆಲವು ಗಂಟೆಗಳ ಕಾಲ ಕಳೆಯಲು ಅವಕಾಶ ನೀಡುವಂತೆ ಜೈಲಿಗೆ ಆಗಾಗ್ಗೆ “ಆದೇಶ” ಬರುತ್ತಿತ್ತು. ಈ “ಪ್ರವಾಸಿ ಕೈದಿಗಳಿಗೆ” ಜೈಲು ಸಮವಸ್ತ್ರ ಮತ್ತು ಜೈಲಿನ ಅಡುಗೆಮನೆಯಲ್ಲಿ ಮಾಡಿದ ಆಹಾರವನ್ನು ನೀಡಲಾಗುತ್ತದೆ” ಎಂದು ಉಪ ಜೈಲು ಅಧೀಕ್ಷಕರಾದ ಜೈಲಿನ ಸತೀಶ್ ಸುಖಿಜಾ ಹೇಳಿದ್ದಾರೆ.
Jail Experience: For ₹ 500 Per Night, Uttarakhand To Offer Real Jail Experience To Tourists: Report








