Jailer : ಶಿವಣ್ಣನ ಬಳಿಕ ರಜನಿಕಾಂತ್ ಚಿತ್ರದಲ್ಲಿ ಸಾಧು ಕೋಕಿಲ ನಟನೆ….
ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಪ್ರಸ್ತುತ ಜೈಲರ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದು , ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಮನ ಹ್ಯಾಟ್ರಿಕ್ ಹೀರೋ ಶಿವಭಣ್ಣ ಕೂಡ ನಟಿಸುತ್ತಿದ್ದಾರೆ.. ಜೊತೆಗೆ ಇತರೇ ಭಾಷೆಗಳ ಪ್ರಮುಖ ನಟರು ಕಾಣಿಸಿಕೊಳ್ತಿದ್ದಾರೆ..
ಇದೀಗ ಈ ಸಿನಿಮಾದಲ್ಲಿ ಚಂದನವನದ ಕಾಮಿಡಿ ಕಿಂಗ್ ಸಾಧು ಕೋಕಿಲ ಕೂಡ ಬಣ್ಣ ಹಚ್ಚಲಿದ್ದಾರೆ ಎನ್ನಲಾಗ್ತಿದೆ.. ಅಷ್ಟೇ ಅಲ್ದೇ ಮಂಗಳೂರಿನಲ್ಲಿ ಶೂಟಿಂಗ್ ನಲ್ಲಿ ಕೂಡ ಭಾಗಿಯಾಗಿದ್ದಾಗಿ ಸುದ್ದಿಯಿದೆ
ರಜನಿಕಾಂತ್ ಈಗಾಗಲೇ ಮೂರು ದಿನಗಳಿಂದ ಮಂಗಳೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಸಿನಿಮಾದ ಶೂಟಿಂಗ್ ಮಂಗಳೂರಿನ ಪಿಲಿಕುಳದ ಗುತ್ತಿನ ಮನೆಯಲ್ಲಿ ನಡೆಯುತ್ತಿದ್ದು, ರಜನಿಕಾಂತ್ , ಶಿವರಾಜ್ ಕುಮಾರ್ ಜೊತೆ ಸಾಧು ಕೋಕಿಲಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗ್ತಿದೆ.
ಪಿಲಿಕುಳದ ಗುತ್ತಿನ ಮನೆಯು ಮಂಗಳೂರು ಹೊರವಲಯದಲ್ಲಿದ್ದು, ಇಲ್ಲಿ ಜೈಲರ್ ಸಿನಿಮಾಗಾಗಿಯೇ ವಿಶೇಷ ಸೆಟ್ ಅನ್ನು ಹಾಕಲಾಗಿದೆ. ಇದು ರಜನಿಕಾಂತ್ ನಟನೆಯ 169ನೇ ಸಿನಿಮಾವಾಗಿದೆ,.. ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
Jailer: Sadhu Kokila acting in Rajinikanth’s film after Shivanna…








