ಇಂಗ್ಲೆಂಡ್ ವಿರುದ್ಧ ನಡೆದ 2ನೇ ಟೆಸ್ಟ್ ನಲ್ಲಿ ದ್ವಿಶತಕ ಸಿಡಿಸಿರುವ ಯಶಸ್ವಿ ಜೈಸ್ವಾಲ್ (Yashasvi Jaiswal) ಅಪರೂಪದ ದಾಖಲೆ ಸರಿಗಟ್ಟಿದ್ದಾರೆ.
ಜೈಸ್ವಾಲ್ ಅವರಿಂದಾಗಿ ಭಾರತ ತಂಡವು 396 ರನ್ ಗಳಿಸಲು ಶಕ್ತವಾಯಿತು. ಆದರೆ, ಇನ್ನುಳಿದ ಆಟಗಾರರು ಬೇಗನೆ ಔಟ್ ಆಗಿದ್ದು, ಏಕಾಂಗಿಯಾಗಿ ಹೋರಾಟ ಮಾಡಿದ್ದಾರೆ. ಜೈಸ್ವಾಲ್ 209 ರನ್ ಕಲೆಹಾಕಿದರೆ, ಇನ್ನುಳಿದ ಬ್ಯಾಟರ್ಗಳಿಂದ ಮೂಡಿಬಂದ ಒಟ್ಟು ಸ್ಕೋರ್ 185 ರನ್ಗಳು. ಶುಭ್ಮನ್ ಗಿಲ್ (34) ರನ್ ಗಳಿಸಿದ್ದು ಬಿಟ್ಟರೆ, ಮಿಕ್ಕವರು ಅದಕ್ಕಿಂತ ಕಡಿಮೆ ರನ್ ಗಳಿಸಿದ್ದಾರೆ.
ಈ ದ್ವಿಶತಕದ ಮೂಲಕ ಜೈಸ್ವಾಲ್, ಬ್ರಿಯಾನ್ ಲಾರಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಬ್ಯಾಟರ್ರೊಬ್ಬರು ದ್ವಿಶತಕ ಬಾರಿಸಿ, ಉಳಿದ ಯಾವುದೇ ಬ್ಯಾಟ್ಸ್ಮನ್ 35 ರನ್ ಕಲೆಹಾಕದಿರುವುದು ಇದು ಎರಡನೇ ಬಾರಿಗೆ. 2005 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಬ್ರಿಯಾನ್ ಲಾರ (226) ದ್ವಿಶತಕ ಬಾರಿಸಿ ಮಿಂಚಿದ್ದರು. ಆಗ ವೆಸ್ಟ್ ಇಂಡೀಸ್ ತಂಡದ ಯಾವುದೇ ಬ್ಯಾಟರ್ 35 ರನ್ ಕಲೆಹಾಕಲು ಸಾಧ್ಯವಾಗಿರಲಿಲ್ಲ. 19 ವರ್ಷಗಳ ನಂತರ ಆ ದಿನ ಮತ್ತೆ ಪುನರಾವರ್ತಿಸಿದ್ದು, ಈ ಬಾರಿ ಜೈಸ್ವಾಲ್ ದ್ವಿಶತಕ ಸಾಧಿಸಿದ್ದಾರೆ.
ಯಶಸ್ವಿ ಜೈಸ್ವಾಲ್ 7 ಭರ್ಜರಿ ಸಿಕ್ಸ್ ಹಾಗೂ 19 ಫೋರ್ಗಳೊಂದಿಗೆ 209 ರನ್ ಗಳಿಸಿದ್ದಾರೆ. ಹೀಗಾಗಿ ಭಾರತ ತಂಡವು ಮೊದಲ ಇನಿಂಗ್ಸ್ನಲ್ಲಿ 396 ರನ್ ಕಲೆಹಾಕಿದೆ.