ಎರಡನೇ ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿರುವ ಭಾರತದ ಆಟಗಾರ ಯಶಸ್ವಿ ಜೈಸ್ವಾಲ್, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಮಾಜಿ ಬ್ಯಾಟ್ಸ್‌ಮನ್ ವಿನೋದ್ ಕಾಂಬ್ಳಿ ಹಾಗೂ ಮಾಜಿ ಕೋಚ್ ರವಿಶಾಸ್ತ್ರಿ ಮಾಡಿರುವ ಸಾಧನೆಯ ಪಟ್ಟಿಗೆ ಸೇರಿದ್ದಾರೆ.
ಯಶಸ್ವಿ ಜೈಸ್ವಾಲ್ಗೆ ತವರಿನಲ್ಲಿ ಇದು ಚೊಚ್ಚಲ ಟೆಸ್ಟ್ ಶತಕವಾಗಿದ್ದು, ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಮೊದಲ ಶತಕ ಸಿಡಿಸಿದ್ದರು. ಈಗ ವಿದೇಶಿ ಹಾಗೂ ತವರು ನೆಲದಲ್ಲಿ ಶತಕ ಪೂರೈಸಿದ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಕೇವಲ 22 ವರ್ಷಗಳಲ್ಲಿ ಈ ಸಾಧನೆ ಮಾಡಿರುವ ಜೈಸ್ವಾಲ್, 23 ವರ್ಷ ತುಂಬುವ ಮುನ್ನವೇ ಟೆಸ್ಟ್ ಶತಕ ಸಿಡಿಸಿದ್ದು, ಇದರೊಂದಿಗೆ ಭಾರತ ದಿಗ್ಗಜ ಬ್ಯಾಟರ್ಗಳ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
23 ನೇ ವರ್ಷಕ್ಕೆ ಕಾಲಿಡುವ ಮೊದಲು ದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪರ ಶತಕ ಸಿಡಿಸಿದ 4 ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಜೈಸ್ವಾಲ ಪಾತ್ರರಾಗಿದ್ದಾರೆ. ಮಾಜಿ ಕೋಚ್ ರವಿಶಾಸ್ತ್ರಿ ಅವರು 23 ವರ್ಷಕ್ಕೆ ಕಾಲಿಡುವ ಮೊದಲೇ ಸ್ವದೇಶ ಮತ್ತು ವಿದೇಶಗಳಲ್ಲಿ ಟೆಸ್ಟ್ ಶತಕಗಳನ್ನು ಸಿಡಿಸಿದ್ದರು. ನಂತರ ಸಚಿನ್ ತೆಂಡೂಲ್ಕರ್ ಹಾಗೂ ಆನಂತರ ವಿನೋದ್ ಕಾಂಬ್ಳಿ ಈ ಸಾಧನೆ ಮಾಡಿದ್ದರು. ಯಶಸ್ವಿ ಜೈಸ್ವಾಲ್ ಇನ್ನಿಂಗ್ಸ್ ಆರಂಭಿಸಿ ಕೇವಲ 74 ಎಸೆತಗಳಲ್ಲಿ 80 ರನ್ ಗಳಿಸಿದರು. ಆ ಇನ್ನಿಂಗ್ಸ್‌ನಲ್ಲಿ ಜೈಸ್ವಾಲ್ 10 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಸಿಡಿಸಿದ್ದರು.
ಜುಲೈ 2023 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ತಮ್ಮ ಟೆಸ್ಟ್ ಚೊಚ್ಚಲ ಪಂದ್ಯವನ್ನಾಡಿದ್ದ ಜೈಸ್ವಾಲ್ ಶತಕ ಸಿಡಿಸಿದಲ್ಲದೆ, 171 ರನ್ಗಳ ಬಿಗ್ ಇನ್ನಿಂಗ್ಸ್ ಆಡಿದ್ದರು. ಸದ್ಯ ಜೈಸ್ವಾಲ್ 179 ರನ್ ಸಿಡಿಸಿ ನಾಳೆಗೆ ಆಟ ಕಾಯ್ದುಕೊಂಡಿದ್ದಾರೆ.