Jalandhara Bandhasana : ಥೈರಾಯ್ಡ್ ಮತ್ತು ಚಯಾಪಚಯ ಕಾರ್ಯವನ್ನನ ಸುಧಾರಿಸುತ್ತೆ ಈ ಆಸನ…
Jalandhara Bandhasana : ಯೋಗ ದೇಹವನ್ನ ಯೌವನವಾಗಿಡುವುದರ ಜೊತೆಗೆ ದೇಹದಲ್ಲಿನ ನರಗಳು ಮತ್ತು ಚಯಾಪಚಯವನ್ನ ಸುಧಾರಿಸಲು ಸಹಕರಿಸುತ್ತದೆ. ಜಲಂಧರ ಬಂಧಾಸನ ಆಸನವನ್ನು ಪ್ರತಿದಿನ ಮಾಡುವುದರಿಂದ ಥೈರಾಯ್ಡ್ ಗ್ರಂಥಿಯ ಕಾರ್ಯವನ್ನ ಸುಧಾರಿಸುತ್ತದೆ ಜೊತೆಗೆ ಚಯಾಪಚಯವು ಪ್ರಕ್ರಿಯೆಯೂ ವೇಗ ಪಡೆದುಕೊಳ್ಳುತ್ತದೆ. ಗಂಟಲಿನ ಸಮಸ್ಯೆಗಳನ್ನು ತಡೆಯುತ್ತದೆ. ಮುಖದ ಸ್ನಾಯುಗಳನ್ನು ಬಲಪಡಿಸುತ್ತದೆ. ಸುಂದರವಾಗಿ ಕಾಣುವಂತೆ ಮಾಡುತ್ತದೆ.
ಗಮನಿಸಿ, ಕುತ್ತಿಗೆ ನೋವು, ತಲೆಸುತ್ತು, ಅಧಿಕ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ಇದನ್ನು ಮಾಡಬಾರದು. ತಜ್ಞರ ಮೇಲ್ವಿಚಾರಣೆಯಲ್ಲಿ ಇದನ್ನ ಮಾಡುವುದು ಉತ್ತಮ.
ಜಲಂಧರ ಬಂಧಾಸನದ ವಿಧಾನ :
ಜಲಂಧರ ಬಂಧಾಸನ ಮಾಡುವ ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಬೇಕು. ಬೆನ್ನು ಮತ್ತು ಕುತ್ತಿಗೆಯನ್ನು ನೇರವಾಗಿ ಇರಿಸಿ. ಅಂಗೈಗಳನ್ನು ಮಡಚಿ ಮೊಣಕಾಲುಗಳ ಮೇಲೆ ಇಡಬೇಕು. ಪೂರ್ಣ ಉಸಿರನ್ನು ತೆಗೆದುಕೊಳ್ಳಿ. ಉಸಿರಾಡಿ ಮತ್ತು ನಿಮ್ಮ ತಲೆಯನ್ನು ಕೆಳಗೆ ಇರಿಸಿ ಮತ್ತು ನಿಮ್ಮ ಗಲ್ಲವನ್ನು ನಿಮ್ಮ ಎದೆಯ ಹತ್ತಿರ ಇರಿಸಿ.
ನಿಮಗೆ ಸಾಧ್ಯವಾದಷ್ಟು ಕಾಲ ಈ ಸ್ಥಿತಿಯಲ್ಲಿರಿ ಮತ್ತು ನಿಮ್ಮ ತಲೆಯನ್ನು ಮೇಲಕ್ಕೆತ್ತಿ ಮತ್ತು ಸಾಮಾನ್ಯ ಸ್ಥಿತಿಗೆ ಹಿಂತಿರುಗಿ. ಹೊಸದಾಗಿ ಪ್ರಾರಂಭಿಸುವವರು ಮೊದಲು ಐದು ಸೆಕೆಂಡುಗಳ ಕಾಲ ಈ ಸ್ಥಿತಿಯಲ್ಲಿ ನಿಲ್ಲಿಸಬೇಕು. ಆನಂತರ ಸಮಯವನ್ನ ಹೆಚ್ಚಿಸಬೇಕು. ಇದೇ ರೀತಿ ನಾಲ್ಕು ಬಾರಿ ಪುನರಾವರ್ತಿಸಿ. ಉಸಿರನ್ನ ಒಳತೆಗೆದುಕೊಳ್ಳುವ ಮತ್ತು ಹೊರಹಾಕುವ ಸಮಯದಲ್ಲಿ ತೋಳುಗಳು ಸ್ವಲ್ಪ ಗಟ್ಟಿಯಾಗಬಹುದು. ಉಸಿರನ್ನು ಒಳಗೆ ಎಳೆದುಕೊಳ್ಳುವಂತೆಯೇ ಉಸಿರನ್ನು ಹೊರಬಿಡಬಹುದು.
Jalandhara Bandhasana : This asana improves thyroid and metabolism…








