Jallikattu : ಹೋರಿ ತಿವಿದು ಬಾಲಕ ಸಾವು
ಚೆನ್ನೈ : ಜಲ್ಲಿ ಕಟ್ಟು ಸ್ಪರ್ಧೆ ವೀಕ್ಷಣೆಗೆ ಬಂದಿದ್ದ 14 ವರ್ಷದ ಬಾಲಕನಿಗೆ ಹೋರಿ ತಿವಿದು ಸಾವನಪ್ಪಿರೋ ಘಟನೆ ತಮಿಳುನಾಡಿನಲ್ಲಿ ನಡೆದಿದೆ..
ಧರ್ಮಪುರಿಯ ತಡಂಗಂ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ.
14 ವರ್ಷದ ಗೋಕುಲ್ ಮೃತ ಬಾಲಕನಾಗಿದ್ದಾನೆ..
ಗೋಕುಲ್ ಸಂಬಂಧಿಕರೊಂದಿಗೆ ತಡಂಗಂ ಗ್ರಾಮದಲ್ಲಿ ನಡೆಯುತ್ತಿದ್ದ ಜಲ್ಲಿಕಟ್ಟು ಸ್ವರ್ಧೆಗೆ ಆಗಮಿಸಿದ್ದ.
ಈ ವೇಳೆ ಸ್ಪರ್ಧೆಯಲ್ಲಿದ್ದ ಹೋರಿಯೊಂದು ಅಲ್ಲೇ ಬದಿಯಲ್ಲಿ ಕೂತಿದ್ದ ಗೋಕುಲ್ ಹೊಟ್ಟೆಗೆ ತಿವಿದಿದೆ.
ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ಗೋಕುಲ್ ನನ್ನು ಧರ್ಮಪುರಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟೋತ್ತಿಗಾಗಲೇ ಬಾಲಕ ಮೃತಪಟ್ಟಿದ್ದ.
ಈ ಬಗ್ಗೆ ಧರ್ಮಪುರಿ ಠಾಣೆ ಪೊಲೀಸರು ಗೋಕುಲ್ ಗಾಯಗೊಂಡ ಬಗ್ಗೆ ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಈ ವರ್ಷ ಜಲ್ಲಿಕಟ್ಟು ಸ್ವರ್ಧೆಗೆ ತಮಿಳುನಾಡಿನಲ್ಲಿ ಈವರೆಗೆ ನಾಲ್ಕು ಜನ ಬಲಿಯಾಗಿದ್ದಾರೆ.
Jallikattu , boy dies by bull during jallikattu