ಪೊಲೀಸ್ ಕಮೀಷನರ್ ಕಚೇರಿಗೆ ಜಮೀರ್ ದಿಢೀರ್ ಭೇಟಿ…!
ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಇತ್ತೀಚೆಗೆ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲೇ ಇದ್ದಾರೆ.. ಬಿಟ್ ಕಾಯಿನ್ ಇರಬಹುದು, ಸಿದ್ದರಾಮಯ್ಯ ಜೊತೆಗಿನ ತಕರಾರರಿರಬಹುದು ಹೀಗೆ ನಾನಾ ಕಾರಣಗಳಿಂದ ಸುದ್ದಿಯಾಗ್ತಾಯಿದ್ದಾರೆ.. ಈ ನಡುವೆ ರಾಜ್ಯದಲ್ಲಿ ಬಿಟ್ ಕಾಯಿನ್ ಹಗರಣ ಕಾವು ಪಡೆದುಕೊಂಡಿದೆ.. ಕಾಂಗ್ರೆಸ್ ಬಿಜೆಪಿ ನಾಯಕರ ಹೆಸರುಗಳು ಹಗರಣದಲ್ಲಿ ಸುತ್ತಿಕೊಂಡಿರುವ ಹೊತ್ತಲ್ಲೇ ಜಮೀರ್ ಅಹ್ಮದ್ ಅವರು ಪೊಲೀಸ್ ಕಮಿಷನರ್ ಕಚೇರಿಗೆ ದಿಢೀರ್ ಭೇಟಿ ನೀಡಿದ್ದಾರೆ.. ಜಮೀರ್ ಅವರ ಈ ನಡೆ ಸಾಕಷ್ಟು ಕುತೂಹಲ ಕೆರಳಿಸಿದೆ..
ಜಮೀರ್ ಯಾವ ಕಾರಣಕ್ಕೆ ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿದ್ರು ಎಂಬ ಪ್ರಶ್ನೆಗಳು ಎದ್ದಿವೆ… ಇತ್ತ ಮಾಧ್ಯಮದವರೊಂದಿಗೆ ಜಮೀರ್ ಮಾತನಾಡಿದ್ರೂ ಸಹ ಭೇಟಿಯ ಕಾರಣವನ್ನ ತಿಳಿಸದೇ ಎರೋದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.. ಕಮಿಷನರ್ ಕಚೇರಿಗೆ ಭೇಟಿ ನೀಡಿದ ಬಳಿಕ ಪ್ರತಿಕ್ರಿಯೆ ನೀಡಿದ ಜಮೀರ್ ಅವರು, ಶಾಸಕನಾಗಿ ಸಹಜವಾಗಿ ಭೇಟಿಯಾಗಿದ್ದೇನೆ. ತಿಂಗಳಿಗೊಮ್ಮೆಯಾದರೂ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡುತ್ತಲೇ ಇರುತ್ತೇನೆ. ಅದೇ ರೀತಿ ಬಂದಿದ್ದೆ (ಶುಕ್ರವಾರ) ಸಂಜೆ 5.30 ಕ್ಕೆ ಬಂದಿದ್ದೆ. ಬರುವಾಗ ಸೌಮೇಂದು ಮುಖರ್ಜಿ ಸಿಕ್ಕಿದ್ದರು, ಅವರನ್ನು ಸಹಜವಾಗಿ ಮಾತನಾಡಿಸಿದೆ ಎಂದು ಹೇಳಿದ್ದಾರೆ.