James Caan : ಹಾಲಿವುಡ್ ನ ಖ್ಯಾತ ನಟ ಜೇಮ್ಸ್ ಕಾನ್ ವಿಧಿವಶ
ಹಾಲಿವುಡ್ ನ ಖ್ಯಾತ ನಟ ಜೇಮ್ಸ್ ಕಾನ್ ಅವರು ವಿಧಿವಶರಾಗಿದ್ದಾರೆ.. ದಿ ಗಾಡ್ ಫಾದರ್ ಜೇಮ್ಸ್ ಎಂದೇ ಇವರು ವಿಶ್ವಾದ್ಯಂತ ಖ್ಯಾತಿ ಗಳಿಸಿದ್ದರು.. ಲೆಕ್ಕವಿಲ್ಲದಷ್ಟು ಅಭಿಮಾನಿಗಳನ್ನ ಹೊಂದಿದ್ದರು..
ನಟನ ಸಾವಿಗೆ ವಿಶ್ವಾದ್ಯಂತ ಗಣ್ಯರು , ಸೆಲೆಬ್ರಿಟಿಗಳು , ಅಭಿಮಾನಿಗಳು , ಆಪ್ತರು ಕಂಬನಿ ಮಿಡಿದಿದ್ದಾರೆ..
6 ದಶಕಗಳ ಕಾಲ ಸಿನಿಮಾ ರಂಗದಲ್ಲಿ ಮಿಂಚಿದ ನಟ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಆರಂಭದಲ್ಲಿ ಟಿವಿಯಲ್ಲಿ ಶೋಗಳನ್ನು ನಡೆಸುತ್ತ ಸಿನಿಮಾ ರಂಗಕ್ಕೆ ಬಂದವರು. 1965ರಲ್ಲಿ ಎಲ್ ಡೊರಾಡೋ ಸಿನಿಮಾ ಮೂಲಕ ನಾಯಕನಾಗಿ ಬಡ್ತಿ ಪಡೆದರು..
ಅವರಿಗೆ ಬ್ರೇಕ್ ತಂದು ಕೊಟ್ಟ ಸಿನಿಮಾ ಅಂದ್ರೆ ಅದು ದಿ ಗಾಡ್ ಫಾದರ್. ಈ ಸಿನಿಮಾದಲ್ಲಿ ಸನ್ನಿ ಕಾರ್ಲಿಯೋನ್ ಪಾತ್ರಕ್ಕಾಗಿ ಅವರು ಆಸ್ಕರ್ ಪ್ರಶಸ್ತಿಗೂ ನಾಮಿನೇಟ್ ಆಗಿದ್ದರು.