ವಿಶ್ವದೆಲ್ಲೆಡೆ ದಾಖಲೆಯ ಮಟ್ಟಕ್ಕೆ ರಿಲೀಸ್ ಆಗಲಿದೆ ಜೇಮ್ಸ್…
ಪುನೀತ್ ರಾಜ ಕುಮಾರ್ ಅವರ ಕೊನೆಯ ಚಿತ್ರವನ್ನ ದಾಖಲೆಯ ಮಟ್ಟಕ್ಕ ಬಿಡುಗಡೆ ಮಾಡಲು ಚಿತ್ರತಂಡ ರೆಡಿಯಾಗಿದೆ. ಅಪ್ಪು ಹುಟ್ಟು ಹಬ್ಬದಂದು ಕೊನೆಯ ಸಿನಿಮಾವಾಗಿ ಜೆಮ್ಸ್ ರಿಲೀಸ್ ಆಗುತ್ತಿದೆ.
ಕನ್ನಡ ಚಿತ್ರವೊಂದು ಹಿಂದೆದೂ ಕಂಡು ಕೇಳರಿಯದ ಮಟ್ಟಕ್ಕೆ ವಿಶ್ವದೆಲ್ಲೆಡೆ ರಿಲೀಸ್ ಆಗುತ್ತಿದೆ. ಹೊರದೇಶಗಳಲ್ಲಿ ಚಿತ್ರ ವಿತರಣೆಯ ಜವಬ್ದಾರಿಯನ್ನ ಕಿರಣ ಭರ್ತೂರು ಅವರು ವಹಿಸಿಕೊಂಡಿದ್ದಾರೆ.
ಅಮೆರಿಕಾದ ಸ್ಯಾಂಡಲ್ ವುಡ್ ಗೆಳೆಯರ ಬಳಗದಿಂದ 32 ರಾಜ್ಯಗಳಲ್ಲಿ ಒಟ್ಟು 100 ಕ್ಕೂ ಪ್ರದರ್ಶನಗಳನ್ನ ಕಾಣಲಿದೆ. ಕೆನಾಡದಲ್ಲಿ 12 ಪ್ರದೇಶಗಳಲ್ಲಿ ಚಿತ್ರ ತೆರಕಾಣಲಿದೆ.
ಉಕ್ರೇನ್ ಮತ್ತು ರಷ್ಯಾ ಬಿಟ್ಟು ಯೂರೋಪ್ ನ ಎಲ್ಲಾ ಕಡೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ. ಬ್ರಿಟನ್ ಅತಿದೊಡ್ಡ ಪ್ರಮಾಣದಲ್ಲಿ ಚಿತ್ರ ತೆರೆಕಾಣಲಿದೆ. ಆಸ್ಟ್ರೇಲಿಯಾದಲ್ಲಿ ಬಿಡುಗೆಯಾಗುವ ಮೊದಲ ಕನ್ನಡ ಸಿನಿಮಾವಾಗಿ ಸೆನ್ಸಾರ್ ಪ್ರಕ್ರಿಯೆಯನ್ನ ಪೂರ್ಣಗೊಳಿಸಿದೆ.
ನೈಜೀರಿಯಾ, ಕೀನ್ಯಾ, ಜಪಾನ್, ಉಗಾಂಡಾ, ಟಾಂಜಾನಿಯಾ ಮೊದಲಾದ ದೇಶಗಳಲ್ಲೂ ಜೇಮ್ಸ್ ರಿಲೀಸ್ ಆಗಲಿದೆ. 25-30 ಜನ ಕನ್ನಡಿಗರಿರುವ ಕಡೆಗಳಲ್ಲೂ ‘ಜೇಮ್ಸ್’ ರಿಲೀಸ್ ಆಗುತ್ತಿದೆ. ಇಷ್ಟೇ ಅಲ್ಲದೇ ವಿಶ್ವಾದ್ಯಂತ ಇರುವ ಅಭಿಮಾನಿಗಳು ಒಟ್ಟಾಗಿ ಖಾಸಗಿ ಪ್ರದರ್ಶನಗಳನ್ನು ಏರ್ಪಡಿಸಲೂ ಮುಂದೆ ಬಂದಿದ್ದಾರೆ ಎಂದು ಕಿರಣ್ ಭರ್ತೂರು ಮಾಹಿತಿ ನೀಡಿದ್ದಾರೆ.