james pre release event ನಲ್ಲಿ ಅಪ್ಪು ನೆನೆದು ಭಾವುಕರಾದ ರಾಘಣ್ಣ , ಶಿವಣ್ಣ
ಮಾರ್ಚ್ 17 ಕ್ಕೆ ಅಪ್ಪು ಬರ್ತ್ ಡೇ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಸಿನಿಮಾ ಜೇಮ್ಸ್ ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಾಣಲಿದೆ.. ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ.. ಸಿನಿಮಾದ pre release event ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮವು ಸಂಪೂರ್ಣ ಅಪ್ಪುಮಯವಾಗಿತ್ತು.. ಬಾಗವಹಿಸಿದವರೆಲಲ್ಲರೂ ಭಾವುಕರಾಗಿದ್ದರು.. ಆಂಕರ್ ಅನುಶ್ರೀ ಸಹ ಭಾವುಕರಾಗಿಯೇ ಕಾರ್ಯಕ್ರಮ ಶುರು ಮಾಡಿದ್ದರು..
ಅದ್ರಲ್ಲೂ ಶಿವರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರನ್ನ ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದು , ಇಡೀ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು.. ರಾಘವೇಂದ್ರ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರು ಆಡಿದ ಮಾತುಗಳು ದೊಡ್ಮನೆ ಕುಟುಂಬದ ಅಭಿಮಾನಿಗಳಿಗೆ ದುಃಖ ಉಮ್ಮಳಿಸುವಂತೆ ಮಾಡಿದವು.
ಮೊದಲಿಗೆ ಮಾತನಾಡಿದ ರಾಘವೇಂದ್ರ ರಾಜ್‌ಕುಮಾರ್ ಅವರು , ನಾನು ನನ್ನ ತಮ್ಮನನ್ನು ಹುಡುಕಿಕೊಂಡು ಹೋಗುತ್ತೇನೆ ಎಂದರು. ಇದನ್ನ ಕೇಳಿ ಸ್ಟೇಜ್ ಕೆಳಗೆ ಕುಳಿತಿದ್ದ ಶಿವಣ್ಣ ಅವರ ಭಾವುಕರಾದರು. ಚೆನ್ನಾಗಿ ಓಡುತ್ತಿದ್ದ ಗಾಡಿಯನ್ನ ದೇವರು ನಿಲ್ಲಿಸಿ ಬಿಟ್ಟ. ಆದರೆ ನಾನು ಕುಂಟ್ಕೊಂಡು ಓಡಾಡಿಕೊಂಡು ಇರುತ್ತೇನೆ. ನನ್ನನ್ನು ದೇವರು ಇನ್ನು ಉಳಿಸಿದ್ದಾನೆ. ಈ ಈವೆಂಟ್ ನೋಡುತ್ತಿದ್ರೆ ನಾನು ಏಕೆ ಬದುಕಿದ್ದೇನೆ ಅನಿಸಿತು..
ನನಗೆ ಹಾರ್ಟ್ ಅಟ್ಯಾಕ್ ಆಗಿ, ಸ್ಟ್ರೋಕ್ ಬಂದ್ರು ದೇವರು ನನ್ನನ್ನು ಬದುಕಿಸಿದ್ದಾನೆ. ನಾನು ಅವನನ್ನು ಹುಡುಕಿಕೊಂಡು ಹೋಗುತ್ತೇನೆ. ಇಲ್ಲ ಅವನು ಇರುವ ಕಡೆ ನಾನೇ ಹೋಗುತ್ತೇನೆ. ನನಗೆ ಇಲ್ಲಿ ಇರುವುದಕ್ಕೆ ಆಗುತ್ತಿಲ್ಲ. ನಾನು ಬರುತ್ತೇನೆ ಎಂದು ಭಾವನ್ಮಾಕವಾಗಿ ಮಾತನಾಡಿದ್ದಾರೆ. ಈ ಮಾತುಗಳನ್ನು ಕೇಳಿ ಶಿವಣ್ಣ ದುಃಖ ತಡೆಯಲಾಗದೆ ಅತ್ತಿದ್ದಾರೆ.. ಜೇಮ್ಸ್ ತಂಡ ನೋಡಿದರೆ ನನಗೆ ಹೊಟ್ಟೆಕಿಚ್ಚಾಗುತ್ತೆ. ಅವನ ಕೊನೆ 3-4 ತಿಂಗಳು ಅವನ ಜೊತೆಯಲ್ಲೇ ಸಮಯ ಕಳೆದಿದ್ದೀರಿ. ನಾನು ಈ ಟೀಮ್ ನಲ್ಲಿಯೇ ಇದ್ದಿದ್ರೆ ಅವನ ಜೊತೆ ಕೆಲಸ ಮಾಡಬಹುದಿತ್ತು ಎಂದು ಅನಿಸುತ್ತೆ ಎಂದಿದ್ದಾರೆ.