James ಪ್ರೀ ರಿಲೀಸ್ ಈವೆಂಟ್ : ಅಪ್ಪು ಅಗಲಿಕೆ ಯಾರಿಗೂ ಅರಗಿಸಿಕೊಳ್ಳಲು ಆಗಿಲ್ಲ : ವೇದಿಕೆ ಮೇಲೆ ಭಾವುಕರಾದ ಶಿವಣ್ಣ
ಮಾರ್ಚ್ 17 ಕ್ಕೆ ಅಪ್ಪು ಬರ್ತ್ ಡೇ ಪ್ರಯುಕ್ತ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಸಸಿನಿಮಾ ಜೇಮ್ಸ್ ಅದ್ಧೂರಿಯಾಗಿ ವಿಶ್ವಾದ್ಯಂತ ತೆರೆಕಾಣಲಿದೆ.. ಸಿನಿಮಾ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗಿದೆ.. ಸಿನಿಮಾದ ಪ್ರೀ ರಿಲೀಸ್ ಈವೆಂಟ್ ಅದ್ಧೂರಿಯಾಗಿ ನೆರವೇರಿದೆ. ಈ ಕಾರ್ಯಕ್ರಮವು ಸಂಪೂರ್ಣ ಅಪ್ಪುಮಯವಾಗಿತ್ತು.. ಬಾಗವಹಿಸಿದವರೆಲಲ್ಲರೂ ಭಾವುಕರಾಗಿದ್ದರು.. ಆಂಕರ್ ಅನುಶ್ರೀ ಸಹ ಭಾವುಕರಾಗಿಯೇ ಕಾರ್ಯಕ್ರಮ ಶುರು ಮಾಡಿದ್ದರು..
ಅದ್ರಲ್ಲೂ ಶಿವರಾಜ್ ಕುಮಾರ್ , ರಾಘವೇಂದ್ರ ರಾಜ್ ಕುಮಾರ್ ಅವರು ಪುನೀತ್ ರಾಜ್ ಕುಮಾರ್ ಅವರನ್ನ ನೆನೆದು ವೇದಿಕೆ ಮೇಲೆಯೇ ಕಣ್ಣೀರಿಟ್ಟಿದ್ದು , ಇಡೀ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರೆಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು.. ವೇದಿಕೆ ಮೇಲೆ ಮೊದಲಿಗೆ ಭಾವುಕರಾಗಿ ಏನೂ ಮಾತನಾಡಲಾಗದೇ ನಿಂತಿದ್ದ ಶಿವಣ್ಣ ಅವರು ನಂತರ ಮಾತನಾಡಿದ ಕಾರ್ಯಕ್ರಮದಲ್ಲಿ ಬಾಗಿಯಾದವರಿಗೆ , ಜೇಮ್ಸ್ ಸಿನಿಮಾದ ನಟರಿಗೆ, ತಂತ್ರಜ್ಞರಿಗೆ ಅಭಿನಂದಿಸಿದರು. ”ರಾಘು ಮಾತನಾಡಿದ್ದು ನೋವು ಜಾಸ್ತಿಯಾಯಿತು. ಇವರು ನನಗಿಂತ ಚಿಕ್ಕವರು. ನಾನು ಹೇಗೆ ಇದನ್ನೆಲ್ಲಾ ನೋಡುತ್ತಾ ಇರಬೇಕು.. ಹೊರಗಿನಿಂದ ನೋಡುವುದಕ್ಕೆ ಚೆನ್ನಾಗಿಯೇ ಇರುತ್ತೇವೆ. ಶೂಟಿಂಗ್ ನಲ್ಲಿ ಭಾಗವಹಿಸುತ್ತೇವೆ, ಹಾಡುತ್ತೇವೆ, ಕುಣಿಯುತ್ತೇವೆ, ಡಬ್ಬಿಂಗ್ ಮಾಡುತ್ತೇವೆ. ಆದರೆ ಆ ನೋವು ಒಳಗಡೆಯೇ ಇದೆ. ಪುನೀತ್ ಅಕಾಲಿಕವಾಗಿ ನಮ್ಮನ್ನು ಬಿಟ್ಟು ಹೋದ, ರಾಘು ಆರೋಗ್ಯ ಹೀಗೆ ಆಯಿತು. ಇವರು ನನಗಿಂತಲೂ ಸಣ್ಣವರು ಇವರನ್ನು ಹೀಗೆಲ್ಲ ನೋಡುವುದು ನನಗೆ ಹೇಗೆ ತಾನೆ ಸಾಧ್ಯ ಎಂದು ಮತ್ತೆ ಭಾವುಕರಾದರು.
ನಾವು ಐದು ಜನ ಸಹೋದರ-ಸಹೋದರಿಯರು ಒಟ್ಟಿಗೆ ಇದ್ದೆವು, ಈಗ ನಮ್ಮ ಜೊತೆ ಒಬ್ಬ ಇಲ್ಲ ಅದರಲ್ಲೂ ಚಿಕ್ಕವನಾಗಿದ್ದ ಅಪ್ಪು ಹೋಗಿದ್ದು ಎಂದೂ ಮಾಸದ ನೋವು. ಅಪ್ಪು ಎಲ್ಲರ ಮುದ್ದಿನ ಮಗನಾಗಿದ್ದ. ಎಲ್ಲರಿಗೂ ಅವನೆಂದರೆ ಅಚ್ಚು-ಮೆಚ್ಚು. ಅವನ ಅಗಲಿಕೆ ಯಾರಿಗೂ ಅರಗಿಸಿಕೊಳ್ಳಲು ಆಗಿಲ್ಲ. ಅಪ್ಪ-ಅಮ್ಮ ನಮ್ಮ ಜೊತೆ ನೂರಾರು ವರುಷ ಇರ್ತಾರೆ ಅಂದುಕೊಂಡಿದ್ದೆ. ಅವರು ಹೋಗಿಬಿಟ್ಟರು. ಆ ದುಃಖದಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಅಪ್ಪು ಹೋಗಿಬಿಟ್ಟ ಎಂದು ಕಣ್ಣೀರಿಟ್ಟಿದ್ದಾರೆ. ಇದೇ ವೇಳೆ ಜೇಮ್ಸ್ ಸಿನಿಮಾಗೆ ಡಬ್ಬಿಂಗ್ ಮಾಡಿದ ಬಗ್ಗೆ ಮಾತನಾಡಿದ ಶಿವಣ್ಣ, ಜೇಮ್ಸ್ ಸಿನಿಮಾಕ್ಕೆ ಡಬ್ಬಿಂಗ್ ಮಾಡಲು ಬಹಳ ಕಷ್ಟವಾಯಿತು. ಯಾವ ನಟನಿಗೂ ಇನ್ನೊಬ್ಬ ವ್ಯಕ್ತಿ ಧ್ವನಿ ನೀಡಲಾಗದು. ಅದರಲ್ಲೂ ಇಂಥಹ ಸನ್ನಿವೇಶದಲ್ಲಿ ಧ್ವನಿ ನೀಡುವುದು ಅದೂ ಸ್ವಂತ ತಮ್ಮನಿಗೆ ಧ್ವನಿ ನೀಡುವುದು ಬಹಳ ನೋವಿನ ಸಂಗತಿ. ಆದರೂ ಡಬ್ಬಿಂಗ್ ಮಾಡಿದ್ದೇನೆ. ಇಬ್ಬರೂ ಸೇರಿ ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ನಮ್ಮ ಬಹು ವರ್ಷಗಳ ಕನಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಕತೆಗಳನ್ನು ಕೇಳುತ್ತಲೇ ಇದ್ದೆವು. ಆದರೆ ಅದು ಸಾಧ್ಯವೇ ಆಗಲಿಲ್ಲ ಎಂದಿದ್ದಾರೆ.
ಅಲ್ಲದೇ ಇದೇ ವೇಳೆ ಒಬ್ಬ ತೆಲುಗು ನಿರ್ದೇಶಕರು ಕತೆ ಹೇಳಿದ್ದಾರೆ. ಆ ಸಿನಿಮಾದಲ್ಲಿ ನನ್ನನ್ನು ಅಪ್ಪುವನ್ನು ನೀವು ಒಟ್ಟಿಗೆ ನೋಡುತ್ತೀರ. ಆ ಸಿನಿಮಾ ನನ್ನ ಕಡೆಯಿಂದ ಅಪ್ಪುಗೆ ಡೆಡಿಕೇಶನ್ ಆಗಿರುತ್ತದೆ ಎಂದು ಹೇಳಿದ್ದಾರೆ. ಇನ್ನೂ ಜೇಮ್ಸ್ ಸಿನಿಮಾದ ಬಿಡುಗಡೆ ದಿನ ನಾನು ಮೈಸೂರಿನಲ್ಲಿರುತ್ತೇನೆ. ಅಲ್ಲಿಯೇ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಸಿನಿಮಾದ 25ನೇ ದಿನಕ್ಕೆ ಹೊಸಪೇಟೆಗೆ ಹೋಗಿ ಅಲ್ಲಿ ಕಾರ್ಯಕ್ರಮ ಮಾಡುವುದಾಗಿಯೂ ಶಿವಣ್ಣ ಹೇಳಿಕೊಂಡಿದ್ದಾರೆ.. ಜೇಮ್ಸ್ ಸಿನಿಮಾ ವಿಶ್ವಾದ್ಯಂತ 15 ಕ್ಕೂ ಹೆಚ್ಚು ದೇಶಗಳಲ್ಲಿ 4000 ಕ್ಕೂ ಅಧಿಕ ಸಿನಿಮಾ ಮಂದಿರಗಳಲ್ಲಿ ರಿಲೀಸ್ ಆಗಲಿದೆ.. ಈಗಾಗಲೇ ಾನ್ ಲೈನ್ ಬುಕಿಂಗ್ ಓಪನ್ ಆಗಿದ್ದು , ಆಲ್ ಮೋಸ್ಟ್ ಎಲ್ಲಾ ಶೋಗಳ ಟಿಕೆಟ್ ಗಳು ಸೋಲ್ಡ್ ಆಗಿದೆ.. ಥಿಯೇಟರ್ ಗಳ ಮುಂದೆ ಅಪ್ಪು ಕಟೌಟ್ ರಾರಾಜಿಸುತ್ತಿವೆ..