#James | ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಬಿಜೆಪಿ ಶಾಸಕರ ಅಡ್ಡಿ, ಸಂಪೂರ್ಣ ಸುಳ್ಳು
ಬೆಂಗಳೂರು : ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆಂಬ ಸುದ್ದಿ ಸಂಪೂರ್ಣ ಸುಳ್ಳು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಬೊಮ್ಮಾಯಿ, ಜೇಮ್ಸ್ ಸಿನಿಮಾ ಪ್ರದರ್ಶನಕ್ಕೆ ಬಿಜೆಪಿ ಶಾಸಕರು ಅಡ್ಡಿಪಡಿಸುತ್ತಿದ್ದಾರೆಂಬ ಸುದ್ದಿ ಸಂಪೂರ್ಣ ಸುಳ್ಳು. ಈ ಬಗ್ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಸ್ಥರೊಡನೆ ಮಾತನಾಡಿ, ಜೇಮ್ಸ್ ಚಲನಚಿತ್ರಕ್ಕೆ ನಮ್ಮ ಬೆಂಬಲವಿದ್ದು, ಚಿತ್ರಪ್ರದರ್ಶನಕ್ಕೆ ನಮ್ಮ ಸರ್ಕಾರ ಸಂಪೂರ್ಣ ಸಹಕರಿಸಲಿದೆ ಎಂದು ತಿಳಿಸಿದ್ದೇನೆ ಎಂದರು.
ಇನ್ನು ಇದೇ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ ಸರಣಿ ಟ್ವೀಟ್ ಗಳ ಮೂಲಕ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದೆ.
ಬಿಜೆಪಿಗೆ #PuneethRajkumar ಅವರ ಬಗ್ಗೆ ಅಪಾರ ಗೌರವವಿದೆ. ಕೋವಿಡ್ ಸಂದರ್ಭದಲ್ಲಿ ಪುನೀತ್ ಅವರ ಮನವಿಗೆ #ಯುವರತ್ನ ಚಿತ್ರಕ್ಕೆ ಬಿಎಸ್‌ವೈ ಅವರು ವಿಶೇಷ ಅವಕಾಶ ಕಲ್ಪಿಸಿದ್ದರು. ಪುನೀತ್ ಅಗಲಿದಾಗ ಸಿಎಂ ಬೊಮ್ಮಾಯಿ ತೋರಿದ ಕಾಳಜಿ ಇಡೀ ರಾಜ್ಯಕ್ಕೆ ತಿಳಿದಿದೆ. ಪುನೀತ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಲು ಕಾಂಗ್ರೆಸ್ ಕಪಟ ನಾಟಕ ಹೆಣೆದಿದೆ.
ಪುನೀತ್ ಅವರ #James ಚಿತ್ರ ಪ್ರದರ್ಶನ ತಡೆಗೆ ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪದೇ ಪದೇ ಪ್ರಸ್ತಾಪಿಸಿದ್ದಾರೆ. ಅಪ್ಪು ಅವರ ಅಭಿಮಾನಿಗಳ ಭಾವನೆ ಕೆಣಕುವುದಕ್ಕೆ ಇಂಥ ಸುಳ್ಳು ಆರೋಪ ಮಾಡಲಾಗಿದೆ. ಸುಳ್ಳು ಆರೋಪದ ಮೂಲಕ ಪರಿಸ್ಥಿತಿಯ ಲಾಭ ಪಡೆಯಲು ಹೊರಟಿರುವುದು ಖಂಡನೀಯ.
ರಾಷ್ಟ್ರಾದ್ಯಂತ #TheKashmirFiles ಯಶಸ್ವಿ ಪ್ರದರ್ಶನಗೊಂಡು, ರಾಷ್ಟ್ರಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಇದೇ ವೇಳೆ ರಾಜ್ಯದ ಖಾಸಗಿ ಟಿವಿ ವಾಹಿನಿ ಸಂಚು ನಡೆಸಿ #PuneethRajkumar ಅಭಿನಯದ #James ಚಿತ್ರದ ಪ್ರದರ್ಶನ ಸ್ಥಗಿತಗೊಳಿಸುವಂತೆ ಬಿಜೆಪಿ ಶಾಸಕರು ಒತ್ತಡ ಹೇರುತ್ತಿದ್ದಾರೆ ಎಂಬ ಸುಳ್ಳು ವರದಿ ಬಿತ್ತರಿಸಿದೆ, ಇದು ಖಂಡನಾರ್ಹ ಎಂದು ಬರೆದುಕೊಂಡಿದೆ. James TheKashmirFiles Basavaraja bommai siddaramaiah