Jammu & Kashmir : ನಿಷೇಧಿತ ಸಂಘಟನೆ ಜಮಾತ್-ಎ-ಇಸ್ಲಾಮಿ (ಜೆಐ) ಗೆ ಸೇರಿದ 90 ಕೋಟಿ ರೂ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು
ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್ಐಎ) ಶನಿವಾರ ದಕ್ಷಿಣ ಕಾಶ್ಮೀರದ ಅನಂತನಾಗ್ನ 11 ಸ್ಥಳಗಳಲ್ಲಿ ದಾಳಿ ನಡೆಸಿ ನಿಷೇಧಿತ ಸಂಘಟನೆ ಜಮಾತ್-ಎ-ಇಸ್ಲಾಮಿ (ಜೆಐ) ಗೆ ಸೇರಿದ ಸುಮಾರು ಅಂದಾಜು 90 ರೂ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲುಮಾಡಿದೆ.
ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಮತ್ತು ಫೆಬ್ರವರಿ 28, 2019 ರಂದು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯದ ಅಧಿಸೂಚನೆ ಸಂಖ್ಯೆ 14017/7/2019 ಅನುಗುಣವಾಗಿ ಅನಂತನಾಗ್ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಸೆಕ್ಷನ್ 8 ರ ಮೂಲಕ ಆದೇಶ ನೀಡಿದರು .
ಪ್ರತ್ಯೇಕತಾವಾದಿ ಚಟುವಟಿಕೆಗಳಿಗೆ ನಿಧಿಯ ಬಳಕೆ ಮೂಲಕ ಭಾರತದ ಸಾರ್ವಭೌಮತೆಗೆ ವಿರುದ್ಧವಾಗಿ ದೇಶ-ವಿರೋಧಿ ಅಂಶಗಳು ಮತ್ತು ಭಯೋತ್ಪಾದಕ ಜಾಲಗಳ ಪರಿಸರ ವ್ಯವಸ್ಥೆಯನ್ನು ಕಿತ್ತುಹಾಕಲು, ನಿಷೇಧಿತ ಜೆಐಗೆ ಸೇರಿದ ಅಥವಾ ಹೊಂದಿರುವ ಆಸ್ತಿಗಳನ್ನು ಜಪ್ತಿ ಮಾಡಲಾಗಿದೆ . ದೇಶವಿರೋಧಿ ಚಟುವಟಿಕೆಗಳಿಗಾಗಿ ಕೇಂದ್ರ ಸರ್ಕಾರವು 2019 ರಲ್ಲಿ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿತ್ತು. ಇದೀಗ ಈ ಸಂಘಟನೆಯ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಬಹಳ ಮಹತ್ವದ ವಿಷಯಗಳನ್ನು ಕಲೆಹಾಕಲಾಗುತಿದೆ.
jammu-and-kashmir-assets-worth-rs-90-crore-belonging-to-banned-outfit-jamaat-e-islami-ji-confiscated