ಲೋಕಸಭೆಯಲ್ಲಿ ಜಮ್ಮು ಕಾಶ್ಮೀರ ಮಸೂದೆಗೆ BSP ಬೆಂಬಲ..! ಕಾಂಗ್ರೆಸ್ ವಿರುದ್ಧ ಆಕ್ರೋಶ..!
ನವದೆಹಲಿ: ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಪುನರ್ ರಚನೆ ಮಸೂದೆಯನ್ನು ಬಿಎಸ್ ಪಿ ಬೆಂಬಲಿಸಿದೆ. ಅಲ್ದೇ ಇದೇ ವೇಳೆ ಸರ್ಕಾರದ ಸುಧಾರಣಾ ಕ್ರಮಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದೆ.
ಬಿಜೆಪಿ ಕಾರ್ಯಕರ್ತರ ಕೊಲೆ ಮಾಡಿದ್ದ ಉಗ್ರನ ಬಂಧನ..!
ಇಂದು ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮಸೂದೆ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಬಿಎಸ್ ಪಿ ಸಂಸದ ಮಲೂಕ್ ನಗರ್ ಅವರು, ನಮ್ಮ ಪಕ್ಷ ಬಡವರು, ದಲಿತರು ಮತ್ತು ಕೇಂದ್ರಾಡಳಿತ ಪ್ರದೇಶದ ಇತರ ವಂಚಿತ ಸಮುದಾಯಗಳ ಪರವಾಗಿದೆ ಎಂದರು.
ಒಂದು ವಿಚಾರಕ್ಕಾಗಿ ನನ್ನ ತಂದೆ, ಅಜ್ಜಿ ಹತ್ಯೆಯಾದ ಬಗ್ಗೆ ನನಗೆ ಹೆಮ್ಮೆಯಿದೆ: ರಾಹುಲ್ ಗಾಂಧಿ
ಕಾಶ್ಮೀರದಲ್ಲಿ 2019ರಲ್ಲಿ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ನಂತರ ರಾಷ್ಟ್ರೀಯ ಮೀಸಲಾತಿಗೆ ಅನುಗುಣವಾಗಿ ಕಾಶ್ಮೀರದಲ್ಲಿ ಗುಜ್ಜರ್ ಮತ್ತು ಬ್ಯಾಕರ್ವಾಲ್ ಸಮುದಾಯಕ್ಕೆ ಮೀಸಲಾತಿ ನೀಡುವ ಮೋದಿ ಸರ್ಕಾರದ ಕ್ರಮವನ್ನು ಉಲ್ಲೇಖಿಸಿದ ವಲೂಕ್ ಅವರು, ಗುಜ್ಜರ್ ಮತ್ತು ಬ್ಯಾಕರ್ವಾಲ್ ನಂತಹ ಹಿಂದುಳಿದ ಸಮುದಾಯಗಳು ಕಾಶ್ಮೀರದಲ್ಲಿ ತಮ್ಮ ಹಕ್ಕುಗಳಿಂದ ವಂಚಿತರಾಗಿದ್ದರು. ಆದರೆ ಈಗ ಅವರು ತಮ್ಮ ಹಕ್ಕುಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಅಹಿಂದ ಹೋರಾಟ ಮಾಡಿದ್ರೆ ನಾನು ಹೋಗ್ತೀನಿ : ರಮೇಶ್ ಜಾರಕಿಹೊಳಿ
ಇದೇ ವೇಳೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಡ ಮನೆಗಳಲ್ಲಿ ಊಟ ಮಾಡುತ್ತಾರೆ. ಆದರೆ ಕೇಂದ್ರದ ಬಡವರ ಪರವಾದ ನೀತಿಗಳನ್ನು ವಿರೋಧಿಸುತ್ತಾರೆ ಎಂದು ವಾಗ್ದಾಳಿ ನಡೆಸಿ ಅಚ್ಚರಿ ಮೂಡಿಸಿದ್ರು.
‘ಸಿಕ್ಕ ಸಿಕ್ಕ ಜಾಗಗಳಲ್ಲಿ ಎಲ್ಲೆಂದರಲ್ಲಿ ಯಾವಾಗ ಬೇಕಿದ್ದರೂ ಪ್ರತಿಭಟನೆ ನಡೆಸೋಹಾಗಿಲ್ಲ’ : ಸುಪ್ರೀಂ ಕೋರ್ಟ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel