ಬಿಜೆಪಿ ಕಾರ್ಯಕರ್ತರ ಕೊಲೆ ಮಾಡಿದ್ದ ಉಗ್ರನ ಬಂಧನ..!
ಜಮ್ಮು: ಕಳೆದ ವರ್ಷ ದಕ್ಷಿಣ ಕಾಶ್ಮೀರದಲ್ಲಿ ಮೂವರು ಬಿಜೆಪಿ ಕಾರ್ಯಕರ್ತರನ್ನು ಹಾಗೂ ಒಬ್ಬ ಪೊಲೀಸ್ ಸಿಬ್ಬಂದಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಪೊಲೀಸರು ಸಾಂಬಾ ಜಿಲ್ಲೆಯಲ್ಲಿ ಬಂಧಿಸಿದ್ದಾರೆ. ಅನಂತನಾಗ್ ಪೊಲೀಸರಿಂದ ದೊರೆತ ಖಚಿತ ಮಾಹಿತಿ ಮೇರೆಗೆ ಜಹೂರ್ ಅಹಮದ್ ಅಲಿಯಾಸ್ ಖಾಲಿದ್ನನ್ನು ಸಾಂಬಾ ಜಿಲ್ಲೆಯ ಮನೆಯೊಂದರಲ್ಲಿ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಲಷ್ಕರ್-ಎ-ತೋಯ್ಬಾ ಭಯೋತ್ಪಾದಕ ಸಂಘಟನೆ ಶಾಖೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಟಿಆರ್ಎಫ್ನ ಮುಖಂಡನಾಗಿ ಖಾಲಿದ್ ಈ ಭಾಗದಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ. ಪಾಕಿಸ್ತಾನದಿಂದ ಬಂದ ಅಕ್ರಮ ಶಸ್ತ್ರಾಸ್ತ್ರಗಳನ್ನು ಪಡೆದುಕೊಳ್ಳಲು ಖಾಲಿದ್ ಸಾಂಬಾಗೆ ಬಂದಿದ್ದು, ಸ್ಥಳೀಯ ಬಾರಿ ಬ್ರಹ್ಮಣಾ ಪ್ರದೇಶದಲ್ಲಿ ಮನೆಯೊಂದನ್ನು ಬಾಡಿಗೆ ಪಡೆದು ವಾಸಿಸುತ್ತಿದ್ದ ಖಚಿತ ಸುಳಿವು ಅನಂತನಾಗ್ ಪೊಲೀಸರಿಗೆ ತಿಳಿದಿದೆ. ಮಾಹಿತಿಯನ್ನು ಸಾಂಬಾ ಪೊಲೀಸರಿಗೆ ವರ್ಗಾಯಿಸಿದ ಅನಂತನಾಗ್ ಪೊಲೀಸರು ಈತನ ಬಂಧನಕ್ಕೆ ಸಹಕಾರ ನೀಡಿದ್ದಾರೆ.
ಒಂದು ವರ್ಷದ ಬಳಿಕ ಟೆಸ್ಟ್ ನಲ್ಲಿ ರೋಹಿತ್ ರೋರಿಂಗ್…!
ತೈಲ ದರ ಏರಿಕೆ ಎಫೆಕ್ಟ್ : ಬಿಎಂಟಿಸಿ ಟಿಕೆಟ್ ದರ ಹೆಚ್ಚಳಕ್ಕೆ ಚಿಂತನೆ..!
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








