Janaspandana | ಇದು ಜನಸ್ಪಂದನ ಅಲ್ಲ ಜನ ಮರ್ದನ
ಬೆಂಗಳೂರು : ಜನಸ್ಪಂದನೆಯಂತೆ ಜನಸ್ಪಂದನ. ಇದು ಜನಸ್ಪಂದನ ಅಲ್ಲ ಜನ ಮರ್ದನ. ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುಸಂಘರ್ಷದಿಂದ ಬಿಜೆಪಿ ಸರ್ಕಾರ ರಾಜ್ಯದ ಜನರ ಮರ್ದನ ಮಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಜನಸ್ಪಂದನ ಕಾರ್ಯಕ್ರಮದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳಲ್ಲಿ ಕಿಡಿಕಾರಿದ್ದು, ಸ್ಪಂದಿಸಲು ಜನರಿಗೆ ಸ್ವಾತಂತ್ರ್ಯ ಎಲ್ಲಿದೆ? ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷಗಳ ಮೇಲೆ ಸಿಬಿಐ, ಇಡಿ, ಐಟಿ ದಾಳಿಗಳಾಗುತ್ತಿವೆ, ಪ್ರಶ್ನಿಸುವ ನಾಗರಿಕರ ಮೇಲೆ ಸುಳ್ಳು ಕೇಸ್ ಗಳನ್ನು ಹಾಕಿ ಜಾಮೀನು ಇಲ್ಲದೆ ಜೈಲಿಗೆ ತಳ್ಳಿಲಾಗುತ್ತಿದೆ. ಜನರ ಸ್ಪಂದನಕ್ಕೆ ಅವಕಾಶ ಎಲ್ಲಿದೆ ಬಿಜೆಪಿ ಎಂದು ಪ್ರಶ್ನಿಸಿದ್ದಾರೆ.
ಜನತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಟ್ಟರೆ ಜನಾಕ್ರೋಶದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾತ್ರವಲ್ಲ ಬಿಜೆಪಿ ಸರ್ಕಾರವೇ ಕೊಚ್ಚಿಹೋಗಬಹುದು.
https://twitter.com/siddaramaiah/status/1568581341155065857?s=20&t=RDneBB23H6UsFk7b7Tp-cw
ರಾಜ್ಯದ ಗುತ್ತಿಗೆದಾರರ ಸಂಘ, ಶಿಕ್ಷಣ ಸಂಸ್ಥೆಗಳ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿ ಗೆ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಪತ್ರ ಬರೆಯುತ್ತಿದ್ದಾರೆ. ರಾಜ್ಯದ ಹೈಕೋರ್ಟ್ ಒಂದಲ್ಲ ಎರಡಲ್ಲ ಹಲವು ಬಾರಿ ನೇರವಾಗಿ ಭ್ರಷ್ಟಾಚಾರಕ್ಕಾಗಿ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇನ್ನು ಯಾವ ಸಾಕ್ಷಿ ಬೇಕು?
ಜನತೆಗೆ ಮುಕ್ತವಾಗಿ ಮಾತನಾಡಲು ಅವಕಾಶ ಕೊಟ್ಟರೆ ಜನಾಕ್ರೋಶದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾತ್ರವಲ್ಲ @BJP4Karnataka ಸರ್ಕಾರವೇ ಕೊಚ್ಚಿಹೋಗಬಹುದು. 3/23#ಜನಮರ್ದನ#ಭ್ರಷ್ಟೋತ್ಸವ
— Siddaramaiah (@siddaramaiah) September 10, 2022
ಹೈಕಮಾಂಡ್ ಗೆ 2000 ಕೋಟಿ ಕೊಟ್ಟರೆ ಬಿಜೆಪಿಯಲ್ಲಿ ಮುಖ್ಯಮಂತ್ರಿಯಾಗಬಹುದು ಎಂದು ಹೇಳಿದ್ದು ಬಿಜೆಪಿ ಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ನಾವಲ್ಲ. ಮಾಜಿ ಮುಖ್ಯಮಂತ್ರಿಗಳ ಮಗ ಲಂಚ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿರುವುದು ಕೂಡಾ ಅದೇ ಶಾಸಕ ಎಂದು ಕಿಡಿಕಾರಿದ್ದಾರೆ.








