ಜಪಾನ್ ನಲ್ಲಿ ಆಡಳಿತರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಗೆ ಭರ್ಜರಿ ಜಯ..!!
ಟೋಕಿಯೋ : ಜಪಾನ್ ( japan) ನಲ್ಲಿ ಒಂದೆಡೆ ದೇಶದ ಜನರು ಮಾಜಿ ಪ್ರಧಾನಿ ಶಿಂಜೋ ಅಬೆ ಅವರ ನಿಧನದ ಶೋಕದಲ್ಲಿದ್ದಾರೆ.. ಮತ್ತೊಂದೆಡೆ ಜಪಾನ್ ಸಂಸತ್ ಮೇಲ್ಮನೆಗೆ ಭಾನುವಾರ ನಡೆದ ಚುನಾವಣೆಯಲ್ಲಿ ಆಡಳಿತರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಭಾರಿ ಜಯ ಗಳಿಸಿದೆ.
ಈ ಗೆಲುವು ಹೌಸ್ ಆಫ್ ರೆಪ್ರೆಸೆಂಟೇಟಿವ್ ಕೌನ್ಸಿಲರ್ಗಳ ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸಾಂವಿಧಾನಿಕ ತಿದ್ದುಪಡಿ ತರಲು ಬೇಕಿರುವ ಮೂರನೆಯ ಎರಡರಷ್ಟು ಬಹುಮತವನ್ನು ಗಳಿಸಿಕೊಟ್ಟಿದೆ. ಸಾರ್ವಜನಿಕ ವಿಶ್ವಾಸ ಉಳಿಸಿಕೊಂಡಿರುವ ಪ್ರಧಾನಿ ಫುಮಿಯೊ ಕಿಶಿಡಾ ಅವರಿಗೆ ಮತದಾರರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ವಿಪರ್ಯಾಸವೆಂದ್ರೆ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸುವಾಗಲೇ ಅಬೆ ಅವರ ಮೇಲೆ ಹಂತಕ ಗುಂಡು ಹಾರಿಸಿದ್ದ..
ಲಿಬರಲ್ ಡೆಮಾಕ್ರಟಿಕ್ ಪಾರ್ಟಿ ಮತ್ತು ಇದರ ಕಿರಿಯ ಮೈತ್ರಿ ಪಾಲುದಾರ ಕೊಮೆಟೊ ಒಟ್ಟಾಗಿ 248 ಸ್ಥಾನಗಳ ಚೇಂಬರ್ನಲ್ಲಿ ತಮ್ಮ ಸ್ಥಾನಗಳನ್ನು 146ಕ್ಕೆ ಹೆಚ್ಚಿಸಿಕೊಂಡಿವೆ. ಕಿಶಿಡಾ ಅವರ ಲಿಬರಲ್ ಡೆಮಾಕ್ರಟಿಕ್ ಪಾರ್ಟಿಗೆ ಈ ಚುನಾವಣೆಯಲ್ಲಿ 63 ಸ್ಥಾನಗಳಲ್ಲಿ ಗೆಲುವು ಸಿಕ್ಕಿದೆ.. ಮೈತ್ರಿ ಪಕ್ಷ ಕೊಮೆಟೊ 13 ಸ್ಥಾನಗಳನ್ನು ಗೆದ್ದುಕೊಂಡಿದೆ.