ಟೆಕ್ನಾಲಜಿಯಲ್ಲಿ ಸಖತ್ ಸ್ಟ್ರಾಂಗ್ ದೇಶ ಜಪಾನ್ ಬಗ್ಗೆ INTERESTING FACTS

1 min read

ಸುಮೋ ರೆಸ್ಲರ್ ಹದೆಶ ಜಪಾನ್ ನಲ್ಲಿ ಜನರ ಫಿಟ್ ನೆಸ್ ಗೆ ಕಾರಣ ಜಿಮ್ ಅಲ್ಲ, ಡಯೇಟ್ ಕೂಡ ಅಲ್ಲ ಹಾಗಾದ್ರೆ ಬೇರೇನು..!

ಇಂದಿನ ಜೆನರೇಷನ್ ನಲ್ಲಿ ಯಾರ್ ನೋಡಿದ್ರೂ ಫಿಟ್ ನೆಸ್ ಫಿಟ್ ನೆಸ್ ಜಪ ಮಾಡ್ತರ‍್ತಾರೆ. ಝೀರೋ ಸೈಜ್ ಗೋಸ್ಕರ್ ಯೇನೆಲ್ಲಾ ಕಷ್ಟ ಪಡ್ತಾರೆ. ಜಿಮ್, ಯೋಗ, ವರ್ಕೌಟ್, ಜುಂಬಾ, ಡ್ಯಾನ್ಸ್ ಡಯೇಟ್ ಹೀಗೆ ನಾನಾ ಪ್ರಯತ್ನಗಳನ್ನ ಮಾಡುದ್ರೂ ಸಾಕಷ್ಟು ಜನರಿಗೆ ತಾವು ಅಂದ್ಕೊAಡ ರಿಸಲ್ಟ್ ಸಿಗೋದಿಲ್ಲ. ಒಂದೆಡೆ ಹುಡುಗರು ಬಾಡಿ ಬ್ಯುಲ್ಡ್ ಮಾಡೋ ಕ್ರೇಜ್ ಗೆ ಬಿದ್ದಿದ್ರೆ ಹುಡುಗಿಯರು ಸ್ಲಿಮ್ ಬಾಡಿಗೋಸ್ಕರ ಕಷ್ಟ ಪಡ್ತಾರೆ. ಊಟ ಬಿಡ್ತಾರೆ, ಬೆಳಿಗ್ಗೆ 4 ಗಂಟಗೆ ಜಾಗಿಂಗ್ ವಾಕಿಂಗ್ ಅಬ್ಬಬ್ಬಾ ಏನೆಲ್ಲಾ ಮಾಡ್ತಾರೆ.

ಇಷೆಲ್ಲಾ ಮಾಡುದ್ರು ಏನ್ ಪ್ರಯೋಜನ, ಸಂಜೆಯಾದ್ರೆ ಫ್ರೆಂಡ್ಸ್ ಫ್ಯಾಮಿಲಿ ಜೊತೆ ಬರ್ಗರ್ ಕಿಂಗ್ ಮೆಕ್ ಡೌಲೆನ್ಸ್ ಅಂತ ಹೋಗಿ ಬಾಡಿಗೆ ಫ್ಯಾಟ್ ಗೈನ್ ಮಾಡ್ಕೊಂಡು ಅಮೇಲೆ ಪಶ್ಚಾತಾಪ ಪಡೋದು. ವಾಟ್… ಬಟ್ ನಿಜ ಅಲ್ವಾ. ಆದ್ರೆ ಈ ಒಂದು ದೇಶದ ಜನರು ವಾವ್ ಸಿಕ್ಕಾಪಟ್ಟೆ ಹೆಲ್ದಿ , ಬೇರೆ ದೇಶಗಳಿಗೆ ಕಂಪೇರ್ ಮಾಡಿದ್ರೆ ಇಲ್ಲಿನ ಬಹುತೇಕ ಜನರು ಸ್ಲಿಮ್ ಆಗರ‍್ತಾರೆ. ಸೂಪರ್ ಫಿಟ್ ಆಗಿರುತ್ತಾರೆ. ಈ ದೇಶ ಯಾವುದು ಅಂತ ಬಹುರೇಕರಿಗೆ ಗೊತ್ತೇ ಇರುತ್ತೆ. ಈ ದೇಶದಲ್ಲಿ ಫ್ಯಾಟ್ ಗೇನಿಂಗ್ ರ‍್ಸಂಟೇಜ್ 5 ರ‍್ಸೆಂಟ್ ಗಿಂತಲೂ ತುಂಬಾನೆ ಕಡಿಮೆಯಿದೆ. ಎಸ್ ಅದೇ ಸುಮೋ ರೆಸ್ಲರ್ ದೇಶ. ಜಪಾನ್.

ಹೌದು ಜಪಾನ್ …. ಎಸ್ ಎಸ್ ಜಪಾನ್… ಈ ದೇಶದಲ್ಲಿ ಸುಮೋ ರೆಸ್ಲರ್ ಗಳನ್ನ ಬಿಟ್ರೆ ಬೇರೆ ಯಾರೂ ಸಹ ಓವರ್ ವೇಯಿಟ್ ಅರ್ಥಾತ್ ಮಿತಿ ಮೀರಿ ದಪ್ಪಗೆ ಇರುವವರು ಕಾಣಲಿಕ್ಕೆ ಸಿಗೋದೇ ಇಲ್ಲ.. ನೋ ಚಾನ್ಸ್. ಅಂಡ್ ಇದು 100 ಕ್ಕೆ 100 ರ‍್ಸೆಂಟ್ ನಿಜ. ಇನ್ ಫ್ಯಾಕ್ಟ್ ಇಲ್ಲಿನ ಜನರ ಫಿಟ್ ನೆಸ್ ನಿಂದಾಗಿ ವೃದ್ಧರು ಕೂಡ ಯಂಗ್ ಸ್ರ‍್ಸ್ ಟೀನೇರ‍್ಸ್ ರೀತಿಯಲ್ಲೇ ಕಾಣ್ತಾರೆ.

ಪ್ರಪಂಚದಲ್ಲಿ ಪ್ರತಿ ಗಂಟಗೆ ಜನರ 1 ಕೆಜಿ ತೂಕ ಹೆಚ್ಚಾಗ್ತಿರೋವಾಗ ಹೇಗೆ ಜಪಾನ್ ನ ಜನರು ಇಷ್ಟು ಫಿಟ್ ಆಗಿದ್ದಾರೆ. ಅವರ ಫಿಟ್ ನೆಸ್ ನ ಸೀಕ್ರೇಟ್ ಏನು ಈ ಪ್ರಶ್ನೆ ಕಾಡೋದು ಎಲ್ರಿಗೂ ಸಹಜನೇ. ಅದ್ರಲ್ಲೂ ಯಾವುದೇ ಯೋಗ, ಜಾಗಿಂಗ್, ಅಭ್ಯಾಸ ಮಾಡದೇ ಹೇಗ್ ಸಾಧ್ಯ. ಅಷ್ಟಕ್ಕೂ ಇದರ ಹಿಂದಿನ ರಹಸ್ಯ ಏನು. ಈ ರೀತಿಯಾದ ಎಲ್ಲಾ ಪ್ರಶ್ನೆಗಳು ಅನೇಕರ ತಲೆಯಲ್ಲಿ ಓಡಾಡದೇ ಇರೋದಿಲ್ಲ. ಅದನ್ನೇ ನಾವವಿತ್ತೂ ತಿಳಿಯೋಣ.

ಜಪಾನಿಗರ ಸ್ಲಿಮ್ , ಫಿಟ್ ನೆಸ್ ನ ರಹಸ್ಯವೇನು..?
ನಿಮ್ಮ ಪ್ರಕಾರ ಫಿಟ್ ನೆಸ್ ಗೆ ಮುಖ್ಯವಾಗಿ ಬೇಕಾಗಿರೋದು ಪ್ರಾಪರ್ ಡಯೇಟ್ ರೈಟ್…!
ಫ್ಯಾಟ್ ಗೇನ್ ಆಗೋಕೆ ಮುಖ್ಯ ಕಾರಣ ವೆಸ್ಟರ್ನ್ ಪಾಶ್ಚಾತ್ಯ ಶೈಲಿಯ ಫುಡ್ ಅಡಿಕ್ಟ್. ಈ ಆಹಾರ ಪೊದ್ದತಿಗೆ ನಾವೆಲ್ಲಾ ಎಷ್ಟರ ಮಟ್ಟಿಗೆ ಅಡಿಕ್ಟ್ ಆಗ್ಬಿಟ್ಟಿರುತ್ತೇವೆಂದ್ರೆ ಕೆಲವೊಮ್ಮೆ ಮನೆಯ ಊಟವನ್ನೇ ಮಾಡಬೇಕು ಅನ್ನಿಸೋದಿಲ್ಲ. ಪಾರಂಪರಿಕ ಆಹಾರವನ್ನ ಮರೆತೇ ಬಿಟ್ಟಿರುತ್ತೇವೆ.

ಆದ್ರೆ ಜಪಾನ್ ನಂತಹ ಮುಂದುವರೆದ ರಾಷ್ಟದಲ್ಲಿ ಜನರು ಪಾಶ್ಚಾತ್ಯ ಆಹಾರಗಳಿಗಿಂತಲೂ ಹೆಚ್ಚು ಒಲವು ತಮ್ಮ ಟ್ರೆಡಿಶನಲ್ ಆಹಾರದ ಮೇಲೆಯೇ ಇರುತ್ತೆ. ಎಸ್ ಫ್ರೆಂಡ್ಸ್ ಜಪಾನಿಗರು ತಮ್ಮ ಪಾರಂಪರಿಕ ಆಹಾರ ಪದ್ದತಿಯನ್ನ ನಿಷ್ಠೆಯಿಂದ ಚಾಚೂ ತಪ್ಪದೇ ಫಾಲೋ ಮಾಡ್ತಾರೆ. ಅಲ್ಲಿನ ಜನರಿಗೆ, ಬರ್ಗರ್ ಪಿಜ್ಜಾಗಿಂತ ಹೆಚ್ಚು ಪ್ರೀತಿ ತಮ್ಮ ಪಾರಂಪಕರಿಕ ಡಿಶಸ್ ಮೇಲೆ ಇರುv
ಸಹಜವಾಗಿ ಜಪೊಆನ್ ನ ಜನರ ಡಿನ್ನರ್ ನಲ್ಲಿ ಕೇವಲ ಒಂದೋ ಅಥವಾ 2 ಆಹಾರಗಳಿರೋದಿಲ್ಲ ಕನಿಷ್ಠ 7-8 ವೆರೈಟಿ ಡಿಶಸ್ ಇರುತ್ವೆ. ಕಾಮನ್ ಆಗಿ , ಸೂಶಿ ಇರಬಹುದು , ಪಿಶ್, ಸೂಪ್, ತರಕಾರಿಗಳು, ಅನ್ನ ನೂಡಲ್ಸ್, ಡೆಸರ್ಟ್ ಇದ್ದೇ ಇರುತ್ತೆ. ಆದ್ರೂ ಇಷ್ಟೆಲ್ಲಾ ತಿಂದ್ರೂ ಹೇಗೆ ಇಲ್ಲಿನ ಜನ ಸ್ಲಿಮ್ ಆಗಿರುತ್ತಾರೆ ಅನ್ನೋ ಪ್ರಶ್ನೆ ಈಗ ಎಲ್ರನಗನೂ ಕಾಡೋದು ಸಹಜ.
ಆದ್ರೆ ಇಲ್ಲಿ ವ್ಯತ್ಯಾಸ ಅವರು ಹೇಗೆ ತಿನ್ನುತ್ತಾರೆ ಅನ್ನೋದು. ಇಲ್ಲಿನ ಜನರು ಎಷ್ಟು ತಿನ್ನುತ್ತಾರೆ ಮುಖ್ಯ ಅಲ್ಲ. ಆದ್ರೆ ಕ್ವಾಂಟಿಟಿ ಮುಖ್ಯ. ಡಿಶಸ್ , ವೆರೈಟೀಸ್ ಎಷ್ಟೆ ಇದ್ರು, ಕಡಿಮೆ ಕ್ವಾಂಟಿಟಿಯಲ್ಲೇ ಅವರು ತಿಂತಾರೆ. ಎಸ್ ಅಂದ್ರೆ ಅವರು ಎಷ್ಟೇ ಬಗೆಬಗೆಯ ಆಹಾರ ತಿಂದ್ರೂ ಅದರ ಕ್ವಾಂಟಿಟಿ ತುಂಬಾನೆ ಕಡಿಮೆಯಿರುತ್ತೆ.

ಜಪಾನ್ ನಲ್ಲಿ ವಿಶ್ವದ ಅತಿ ಹೆಚ್ಚು ವೆಂಡಿAಗ್ ಮಷೀನ್ಸ್ ಇದೆ. ಆದ್ರೂ ಇಲ್ಲಿನ ಸ್ನಾಕ್ ಕಲ್ಚರ್ ತುಂಬಾನೇ ವೀಕ್. ಜಪಾನಿನ ಜನರು ದಿನದಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಪ್ರಮಾಣದಲ್ಲಿ 3 ಬಾರಿಯ ಊಟವನ್ನ ಸರಿಯಾದ ರೀತಿಯಲ್ಲಿ ಸೇವನೆ ಮಾಡ್ತಾರೆ. ಇದನ್ನೇ ಕರೆಕ್ಟ್ ಆಗಿ ಫಾಲೋ ಕೂಡ ಮಾಡ್ತಾರೆ. ಎಲ್ಲದಕ್ಕಿಂತ ಮೀರಿದ್ದು, ಇಲ್ಲಿನ ಜನರ ಡಿಸಿಪ್ಲೆöÊನ್ ಪಂಕ್ಚುಯಾಲಿಟಿ. ಇಲ್ಲಿನ ಜನರು ಸರಿಯಾದ ಪ್ರಾಪರ್ ಟೈಮ್ ಗೆ ಸರಿಯಾಗಿಯೇ ಆಹಾರ ಸೇವನೆ ಮಾಡ್ತಾರೆ. ಇದೇ ಕಾರಣಕ್ಕೆ ಜಪಾನೀಸ್ ಜನರಿಗೆ ಯಾವಾಗಂದ್ರೆ ಅವಾಹ ಹಸಿವಾಗೋದಿಲ್ಲ. ಊಟದ ಸರಿಯಾದ ಟೈಮಿಂಗ್ಸ್ ಫಾಲೋ ಮಾಡ್ತಾರೆ. ಮತ್ತೆ ಒಂದ್ ವೇಳೆ ಹಸಿವಾದ್ರೂ ಕೂಡ ಅಂತಹ ಸಂರ‍್ಭದಲ್ಲಿ ಹಣ್ಣು ಹಂಪಲು, ರೈಸ್ ಕೇಕ್ಸ್ ನಂತಹ ವೆರಿ ಲೋ ಫ್ಯಾಟ್ ಮತ್ತು ಆರೋಗ್ಯಕರ ಪದಾರ್ಥಗಳ ಸೇವನೆ ಮಾಡ್ತಾರೆ. ಇದೇ ಕಾಋನಕ್ಕೆ ಇಲ್ಲಿನ ಜನರು ಬೇಗನೇ ಮುದುಕರಾಗಲ್ಲ. ದೀಗಾಯುಷ್ಯ ಹೊಂದಿರುತ್ತಾರೆ ಅನ್ನೋ ಮಾತಿದೆ.

ಜಪಾನಿಗರು ಮನೆಯೂಟವನ್ನೇ ಹೆಚ್ಚಾಗಿ ಇಷ್ಟ ಪಟ್ರೂ, ಕೂಡ ಇಲ್ಲಿ ಫಾಸ್ಟ್ ಫುಡ್ ಅನಿವಾರ್ಯತೆ ಇರುತ್ತೆ. ಯಾಕಂದ್ರೆ ಜಪಾನ್ ವಿಶ್ವದ ಬ್ಯುಸಿಯೆಸ್ಟ್ ದೇಶಗಳಲ್ಲಿ ಒಂದು ಅನ್ನೋ ವಿಚಾರ ಎಲ್ರಿಗೂ ಗೊತ್ತಿದೆ. ಹೀಗಿರುವಾಗ ಫಾಸ್ಟ್ ಫುಡ್ ನ ಅನಿವಾರ್ಯತೆ ಬಂದೇ ಬರುತ್ತೆ. ಸಾಕಷ್ಟು ಸಲ ಮನೆಯಲ್ಲಿ ಅಡುಗೆ ಮಾಡೋಕೆ ಸಮಯ ಸಿಗೋದು ಇಲ್ಲ. ಇಂತಹ ಸಂದರ್ಭಗಳು ಬಂದಾಗ ಜಪಾನೀಸ್ ಜನರು ಹೇಗೆ ಫಾಸ್ಟ್ ಫುಡ್ ಅಥವ ಅನ್ ಹೆಲ್ದಿ ಫುಡ್ ನಿಂದ ದೂರ ಇರುತ್ತಾರೆ. ಇದಕ್ಕೆ ಉತ್ತರ ತುಂಬಾನೆ ಸಿಂಪಲ್. ಜಪಾನ್ ನ ಫಾಸ್ಟ್ ಫುಡ್ ಹಾಗೂ ಮನೆಯ ಅಡುಗೆಗಳಲ್ಲಿ ಬಹುತೇಕ 95 % ಸ್ವಾಮ್ಯತೆ ಇರುತ್ತೆ. ಅಷ್ಟಾಗಿ ಏನೂ ವ್ಯತ್ಯಾಸ ಇರೋದಿಲ್ಲ. ಜಪಾನ್ ಅಬಿವೃದ್ಧಿ ಹೊಂದಿದ ರಾಷ್ಟç. ಇಲ್ಲಿ ಫಾಸ್ಟ್ ಫುಡ್ ರೆಸ್ಟೋರೆಂಟ್ ಚೈನ್ ಇವೆ,. ಆದ್ರೂ ಇಲ್ಲಿ ಜಪಾನ್ ನ ಫಾಸ್ಟ್ ಫುಡ್ ಸಿಕ್ಕಾಪಟ್ಟೆ ಫೇಮಸ್. ಈ ಫಾಸ್ಟ್ ಫುಡ್ ಚೈನ್ ನಲ್ಲಿ ಒಬ್ಬ ಜಪಾನೀಸ್ ಮನೆಯಲ್ಲಿ ಸಿಗುವ ಟ್ರೆಡಿಶನಲ್ ಡಿಶಸ್ ಎಲ್ಲವೂ ಸಿಗುತ್ತದೆ. ಎಸ್ ಹೀಗೆ ಮನೆಯೂಟವನ್ನೇ ಹೊರಗಡೆಯೂ ತಿಂದ್ರೆ ಅಲ್ಲಿನ ಜನರು ಅನ್ ಹೆಲ್ದಿ ಆಗಿರೋ ಚಾನ್ಸೇ ಬರೋದಿಲ್ಲ.

ಮತ್ತೆ ಜಪಾನೀಸ್ ಸ್ಲಿಮ್ ಆಗಿರೋದಕ್ಕೆ ಬಹುಮುಖ್ಯ ಕಾರಣ ಅವರ ಪ್ರಾಪರ್ ಟೀ ಟೈಮ್ ಕೂಡ. ಹಾಗಂತ ನಾವು ನೀವೆಲ್ರೂ ಇಷ್ಟ ಪಡುವ ಹಾಲಿನಲ್ಲಿ ಟೀ ಪೌಡರ್ ಸಕ್ಕರೆ ಹಾಕಿ ಮಾಡುವ ಟೀ ಅಲ್ಲ. ಜಪಾನ್ ನಲ್ಲಿ ಗ್ರೀನ್ ಟೀ ಸಿಕ್ಕಾಪಟ್ಟೆ ಪೇಮಸ್. ಜನರು ಇಲ್ಲಿ ಕುಡಿಯೋದೆ ಗ್ರೀನ್ ಟೀ ಇಲ್ಲ ಬ್ಲಾಕ್ ಕಾಫಿ. ಅಂದ್ರೆ ಫ್ಯಾಟ್ ಹಾಲಿನಿಂದ ದೂರ ಇರುತ್ತಾರೆ ಅಂತಾಯ್ತು. ಮತ್ತೊಂದು ವಿಚಾರ ಜಪಾನಿಗಳಿಗೆ ಗ್ರೀನ್ ಟೀ ರತುಂಬ ತುಂಬ ತುಂಬಾನೆ ಇಂಪರ‍್ಟೆAಟ್ ಆಗಿರುತ್ತೆ. ಸ್ಕಿಪ್ ಮಾಡೋ ಚಾನ್ಸೇ ಇಲ್ಲ. ಮಿಲ್ಕ್ ಟೀ ಹಾಟ್ , ಸ್ಪೆಷಲ್ ಬೇವರೇಜಸ್, ಕೂಲ್ ಡ್ರಿಂಕ್ಸ್ ಕೋ ಕೋ ಕೋಲಾ ಇವೆಲ್ಲವೂ ಜಪಾನಿಗರಿಗೆ ಗ್ರೀನ್ ಟೀ ಮುಂದೆ ನಿಲ್. ಅಲ್ದೇ ನೀರು ಮತ್ತೆ ಗ್ರೀನ್ ಟೀ ಹೊರತಾಗಿ ಬೇರೆ ಯಾವುದೇ ಬೇವರೇರ‍್ಸ್ ಸೇವನೆ ಮಾಡೋದು ತುಂಬಾನೆ ಅಂದ್ರೆ ತುಂಬಾನೆ ಕಡಿಮೆ.
ಗ್ರೀನ್ ಟೀನಿಂದ ಂಯಾವೆಲ್ಲಾ ಆರೋಗ್ಯ ಪ್ರಯೋಜನೆಗಳಿಲ್ಲಾ, ಸ್ಕಿನ್ ಗೆ ಒಳ್ಳೇದು, ಮೆಟಪಾಲಿಸಮ್ ಬೂಸ್ಟ್ ಮಾಡುತ್ತೆ. ವೇಯಿಟ್ ಲಾಸ್ ಗೆ ಗ್ರೇಟ್. ಜಪಾನಿಗರ ಮನೆಯಲ್ಲಿ ಊಟಕ್ಕೂ ಮುಂಚೆ ಗ್ರೀನ್ ಟೀ ಸೇವನೆ ಮಾಡಲಾಗುತ್ತೆ. ಅದರಂತೆಯೇ ಹೋಟೆಲ್ ಗಳಲ್ಲಿ ಮೀಲ್ಸ್ ಗೂ ಮುನ್ನ ಗ್ರೀನ್ ಟೀ ಅದು ಕೂಡ ಫ್ರೀ ಆಗಿ ಸರ್ವ್ ಮಾಡಲಾಗುತ್ತೆ. ನೀವೂ ಕೂಡ ಕೆವಲು ದಿನಗಳ ವರೆಗೂ ಕೋಲ್ಡ್ ಡ್ರಿಂಕ್ಸ್ ನಿಮ್ಮ ಫೇವರೇಟ್ ಬೇವರೇರ‍್ಸ್ ನ ಮರೆತು ಗ್ರೀನ್ ಟೀ ಕುಡಿದು ನೋಡಿ ವ್ಯತ್ಯಾಸ ಗೊತ್ತಾಗುತ್ತೆ.

ಎಕ್ಸರ್ಸೈಸ್ , ಫಿಟ್ ನೆಸ್ ಬಗ್ಗೆ ಮಾತನಾಡೋದಾದ್ರೆ ಜಪಾನ್ ಅತ್ಯಂತ್ ಬ್ಯುಸಿಯೆಸ್ಟ್ ಆಕ್ಟೀವ್ ದೇಶ. ಇಲ್ಲಿ ಜನರು ಸದಾ ಬ್ಯುಸಿಯಾಗಿರುತ್ತಾರೆ. ಕಾಲಹರಣ ಮಾಡೋದು ತುಂಬಾನೆ ಕಡಿಮೆ. ಮತ್ತೆ ಇಲ್ಲಿನ ಜನರು ಪ್ರೆöÊವೇಟ್ ಅಂದ್ರೆ ಖಾಸಗಿ ವಾಹನಗಳಲ್ಲಿ ಓಡಾಡುವುದಕ್ಕಿಂತ ಹೆಚ್ಚು ಪ್ರಾಮುಖ್ಯತೆ ಸಾರ್ವಜನಿಕ ಸಾರಿಗೆಗೆ ಕೊಡ್ತಾರೆ. ಇನ್ನೂ ಮ,ತ್ತೊಂದು ವಿಚಾರ ಅಂದ್ರೆ ಇಲ್ಲಿನ ಜನರು ಹೆಚ್ಚಾಗಿ ಆಫೀಸ್ಮ, ಕಾಲೇಜ್ ಇತರೇ ಸ್ಥಳಗಳಿಗೆ ಓಡಾಡಲು ಹೆಚ್ಚಾಗಿ ಸೈಕಲ್ ಗಳನ್ನ ಬಳಸುತ್ತಾರೆ. ಇಲ್ಲ ನಡಿಯೋದು ತುಂಬಾನೆ ಕಾಮನ್. ವೃದ್ಧರಿಂದ ಹಿಡಿದು ಮಕ್ಕಳ ವರೆಗೂ ಹೆಚ್ಚು ಜನ ಖಾಸಗಿ ವಾಹನಗಳಿಗಿಂತ ನಡೆಯೋದನ್ನ ಇಷ್ಟ ಪಡ್ತಾರೆ. ಇದ್ರಿಂದ ವಾಯು ಮಾಲಿನ್ಯ ಶಬ್ಧ ಮಾಲಿನ್ಯ ಕಡಿಮೆ, ಟ್ರಾಫಿಕ್ ಸಮಸ್ಯೆ ಕಡಿಮೆಯಿರುತ್ತೆ. ಜೊತೆಗೆ ಸೈಕಲ್ ಇಲ್ಲವಾಕಿಂಗ್ ಮಾಡೋದರಿಂದ ಎಕ್ಸಸೈಸ್ ಕೂಡ ಆಗುತ್ತೆ. ಬುಲೆಟ್ ಟ್ರೆನ್ ಗಳ ಬಳಕೆ ಇಲ್ಲಿ ಹೆಚ್ಚಿದೆ. ಆದ್ರೆ ರೈಲ್ವೇ ಸ್ಟೇಷನ್ ವರೆಗೂ ನಡೆಕೊಂಡೇ ಬರುತ್ತಾರೆ. ಹಾಗಂತ ಜಪಾನಿಗರ ಬಳಿ ಕಾರು ತುಂಬಾ ಕಡಿಮೆಯಿದೆಯಂತಲ್ಲಾ. ಕಾರಿದ್ದರು ಅದರ ಬಳಕೆ ತುಂಬಾನೆ ಕಡಿಮೆ.

ಹೀಗಿರೋವಾಗ, ಇಷ್ಟೊಮದು, ಓಡಾಟ , ಆಕ್ಟೀವ್, ಬ್ಯುಸಿಯಾಗಿರೋವ ಜಿಮ್ ಗೆ ಹೋಗೋ ಅವಶ್ಯತೆಯೇ ಇರೋದಿಲ್ಲ. ನಮ್ಮಲ್ಲಿ ಶ್ರೀಮಂತರ ಮನೆಗಳಲ್ಲಿ ಮನೆ ಕೆಲಸದವರು ಬಂದು ಕೆಲಸಗಳನ್ನ ಮಾಡಿಕೊಡ್ತಾರೆ. ಆದ್ರೆ ಜಪಾನ್ ನಲ್ಲಿ ಮೇಡ್ ಸಿಸ್ಟಮ್ ಇಲ್ವೇ ಇಲ್ಲ. ಇಲ್ಲಿ ಅವರ ಕೆಲಸಗಳನ್ನ ಅವರೇ ಮಾಡ್ತಾರೆ. ವಾಷಿಂಗ್ ಮಷೀನ್ ಬಳಕೆ ಕೂಡ ಬಹುತೇಕ ಮಮದಿ ಮಾಡೋದಿಲ್ಲ. ಎಸ್ ಕೈಯಲ್ಲೇ ಬಟ್ಟೆ ಒಗೆಯೋದು, ಪಾತ್ರೆ ತೊಳೆಯೋದು ಹೀಗೆ ಎಲ್ಲಾ ಕೆಲಗಳನ್ನ ಶ್ರಮದಿಂದ ಮಾಡ್ತಾರೆ. ಈಗ ಇದ್ರಕಲ್ಲೇನಿದೆ ವಿಶೇಷ ನಾವು ಕೈಯಲ್ಲೇ ಅಲ್ವ ಕೆಲಸ ಮಾಡ್ತೇವೆ ಅನ್ನಿಸಬಹುದು. ಆದ್ರೆ eಪಾನ್ ಮುಂದುವರೆದ ರಾಷ್ಟç. ಯುಕೆ ಎಸ್ ನಂತಹ ರಾಷ್ಟçಗಳ ಮಾದರಿಯಲ್ಲೇ ಡಿಶ್ ವಾಶರ್ ಪ್ರತಿ ಕೆಲಸಕ್ಕೂ ಮಷೀನ್ ಗಳ ಬಳಕೆ ಮಾಡ್ಬೋದು. ಆದ್ರೆ ಜಪಾನಿಗರು ಈ ಎಲ್ಲಾ ಕೆಲಸವನ್ನ ಕೈಯಲ್ಲೇ ಮಾಡೋದಕ್ಕೆ ಇಷ್ಟ ಪಡ್ತಾರೆ.

ಪ್ರಮುಖವಾಗಿ ಜಪಾನ್ ನ ಸರ್ಕಾರ ಜನರ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೆ. ಜಪಾನಿಗರು ಸರ್ಕಾರ ಬಿಡುಗಡೆ ಮಾಡುವ ಆಹಾರ ಪದ್ಧತಿಯನ್ನ ಮಾರ್ಗಚೂಚಿಯನ್ನ ಚಾಚೂ ತಪ್ಪದೇ ಫಾಲೋ ಮಾಡ್ತಾರೆ. ಪ್ರತಿ ನಾಗರಿಕರಿಗೂ ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯವನ್ನೂ ಸಹ ಒದಗಿಸಿದೆ. ಸೋ ಇದು ಸುಮನೋ ರೆಸ್ಲರ್ ಗಳ ರಾಷ್ಟçದ ಫಿಟ್ ನೆಸ್ ಸೀಕ್ರೆಟ್.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd