Bumrah | ಐಪಿಎಲ್ ನಲ್ಲಿ ಆ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಬೂಮ್ರಾ
ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ ಪ್ರೀತ್ ಬುಮ್ರಾ ಐಪಿಎಲ್ ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಶನಿವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬುಮ್ರಾ 4 ಓವರ್ಗಳಲ್ಲಿ 25 ರನ್ ನೀಡಿ ಮೂರು ಪ್ರಮುಖ ವಿಕೆಟ್ಗಳನ್ನು ಕಬಳಿಸಿದರು.
ಈ ಮೂಲಕ ಅವರು ಐಪಿಎಲ್ 2022 ರ ಋತುವಿನಲ್ಲಿ 15 ವಿಕೆಟ್ಗಳನ್ನು ಪಡೆದರು. ಬುಮ್ರಾ ಐಪಿಎಲ್ನಲ್ಲಿ ಸತತ ಏಳು ಸೀಸನ್ಗಳಲ್ಲಿ 15 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎನಿಸಿಕೊಂಡರು.
ವಾಸ್ತವವಾಗಿ ಬುಮ್ರಾ ಋತುವಿನ ಆರಂಭದಲ್ಲಿ ಹೆಚ್ಚು ಪ್ರಭಾವ ಬೀರಲಿಲ್ಲ. ಆರಂಭದಲ್ಲಿ, ಬುಮ್ರಾ ಡೆತ್ ಓವರ್ಗಳಲ್ಲಿ ಯಾರ್ಕರ್ಗಳೊಂದಿಗೆ ವಿಕೆಟ್ಗಳನ್ನು ಪಡೆಯುವುದನ್ನು ನಾವು ನೋಡಲಿಲ್ಲ.
ಮೊದಲ ಹಂತದಲ್ಲಿ ಅವರು ಸಾಮಾನ್ಯ ಬೌಲರ್ ಆಗಿ ಕಾಣಿಸಿಕೊಂಡಿದ್ದರು. ಆದ್ರೆ ಎರಡನೇ ದ್ವಿತೀಯಾರ್ಧದಲ್ಲಿ ತಮ್ಮ ಹಳೆಯ ಬೌಲಿಂಗ್ ಖದರ್ ತೋರಿಸಿದರು.
ಅಲ್ಲದೇ ಒಂದೇ ಪಂದ್ಯದಲ್ಲಿ ಐದು ವಿಕೆಟ್ ಪಡೆದು ಐ ಯಾಮ್ ಬ್ಯಾಕ್ ಎಂದು ಸಾರಿ ಹೇಳಿದರು.
ಪಂದ್ಯಗಳ ವಿಷಯಕ್ಕೆ ಬಂದರೇ, ಮುಂಬೈ ಇಂಡಿಯನ್ಸ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದು ವಿಕೆಟ್ಗಳ ಜಯದೊಂದಿಗೆ ಋತುವನ್ನು ಕೊನೆಗೊಳಿಸಿದೆ.
ಮತ್ತೊಂದೆಡೆ, ಮುಂಬೈ ವಿರುದ್ಧದ ಸೋಲಿನೊಂದಿಗೆ ಪ್ಲೇ ಆಫ್ ಅವಕಾಶವನ್ನು ಕಳೆದುಕೊಂಡ ಡೆಲ್ಲಿ ಕ್ಯಾಪಿಟಲ್ಸ್ ನಿರಾಸೆಯಿಂದ ಮನೆಗೆ ಮರಳಿದೆ.
jasprit-bumrah-1st-indian-bowler-15-wickets-7-consecutive-season