Jasprit Bumrah | ಬುಮ್ರಾ ಸ್ಥಾನವನ್ನು ತುಂಬುವವರು ಯಾರು ?
ಇಂದೊರ್ ಅಂಗಳದಲ್ಲಿ ನಡೆದ ಕೊನೆಯ ಪಂದ್ಯ ಟಿ 20 ಪಂದ್ಯದಲ್ಲಿ ಆಫ್ರಿಕಾ ತಂಡ ಗೆಲುವು ಸಾಧಿಸಿದೆ.
ಟೀಂ ಇಂಡಿಯಾ 49 ರನ್ ಗಳ ಅಂತರದಲ್ಲಿ ಸೋಲು ಕಂಡಿದೆ. ಆದ್ರೂ ಮೂರು ಪಂದ್ಯಗಳ ಸರಣಿಯನ್ನು ಭಾರತ ಗೆದ್ದುಕೊಂಡಿದೆ.
ಇದು ಹೀಗಿದ್ದರೇ ಟಿ 20 ವಿಶ್ವಕಪ್ ಗಾಗಿ ಭಾರತ ಕ್ರಿಕೆಟ್ ತಂಡ ಅಕ್ಟೋಬರ್ ಆರರಂದು ಆಸ್ಟ್ರೇಲಿಯಾಗೆ ಪಯಣಿಸಲಿದೆ.
ಟೀಂ ಇಂಡಿಯಾದ ಸ್ಟಾರ್ ವೇಗಿ ಜಸ್ ಪ್ರಿತ್ ಬುಮ್ರಾ ಟಿ 20 ವಿಶ್ವಕಪ್ ಗೆ ದೂರವಾಗಿರುವುದು ಗೊತ್ತಿರುವ ವಿಚಾರವೇ.
ಈ ಕ್ರಮದಲ್ಲಿ ಬುಮ್ರಾ ಸ್ಥಾನವನ್ನು ಯಾರು ಭರ್ತಿ ಮಾಡಲಿದ್ದಾರೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಹುಟ್ಟುಕೊಂಡಿದೆ.
ಇದೇ ವಿಷಯದ ಬಗ್ಗೆ ಟೀಂ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತನಾಡಿದ್ದಾರೆ.

ದಕ್ಷಿಣ ಆಪ್ರಿಕಾ ಪಂದ್ಯದ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ನಮ್ಮ ಪ್ರಧಾನ ಬೌಲರ್ ಜಸ್ ಪ್ರಿತ್ ಬುಮ್ರಾ ವಿಶ್ವಕಪ್ ಗೆ ದೂರವಾಗಿದ್ದಾರೆ.
ಆದ್ದರಿಂದ ಆಸ್ಟ್ರೇಲಿಯಾ ಪಿಚ್ ಗಳ ಮೇಲೆ ಬೌಲಿಂಗ್ ಮಾಡಿದ ಅನುಭವ ಇರುವ ಬೌಲರ್ ಬೇಕು.
ಆ ಬೌಲರ್ ಯಾರು ಎನ್ನುವುದರ ಬಗ್ಗೆ ನಮಗೆ ಸ್ಪಷ್ಟತೆ ಇಲ್ಲ.
ನಾವು ಆಸ್ಟ್ರೇಲಿಯಾಗೆ ಹೋದ ಬಳಿಕ ಬೌಲರ್ ಅನ್ನು ಆಯ್ಕೆ ಮಾಡುವ ಸಾಧ್ಯತೆಗಳಿವೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಅಂದಹಾಗೆ ಬುಮ್ರಾ ಸ್ಥಾನದಲ್ಲಿ ಸಿನಿಯರ್ ಪ್ಲೇಯರ್ ಮೊಹ್ಮದ್ ಶಮಿ ಅವರನ್ನ ಆಯ್ಕೆ ಮಾಡುವ ಸಾಧ್ಯತೆಗಳಿವೆ.
ಆದ್ರೆ ಅದಕ್ಕೂ ಮುನ್ನಾ ಶಮಿ ಫಿಟ್ ನೆಸ್ ಪರೀಕ್ಷೆ ಎದುರಿಸಬೇಕಾಗಿದೆ. ಈ ವಾರದಲ್ಲಿ ಈ ಪರೀಕ್ಷೆ ನಡೆಯಲಿದೆ.