ಅಲ್ಲಿರೋದು ಬುಮ್ ಬುಮ್ ಬುಮ್ರಾ.. ಕೆಣಕಿದ್ರೆ ಸುಮ್ನೆ ಬಿಡ್ತಾನಾ..?
ಕೇಪ್ಟೌನ್ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ ನಲ್ಲಿ ಕುತೂಹಲಕಾರಿ ಘಟನೆಯೊಂದು ನಡೆದಿದೆ.
ಆಫ್ರಿಕಾ ಬ್ಯಾಸ್ಟ್ ಮನ್ ಮಾರ್ಕೊ ಜಾನ್ಸನ್, ಬುಮ್ರಾ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇದರಲ್ಲಿ ಏನಪ್ಪಾ ವಿಶೇಷತೆ ಅಂತಿರಾ… ಮುಂದೆ ಓದಿ..
ಜೋಹಾನ್ಸ್ಬರ್ಗ್ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ ಮತ್ತು ಮಾರ್ಕೊ ಜಾನ್ಸೆನ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಟೀಂ ಇಂಡಿಯಾ ಬ್ಯಾಟಿಂಗ್ ವೇಳೆ ಬುಮ್ರಾಗೆ ಜಾನ್ಸನ್ ಬ್ಯಾಕ್ ಟು ಬ್ಯಾಟ್ ಬೌನ್ಸರ್ ಗಳನ್ನು ಎಸೆದರು.
ಅಲ್ಲದೇ ತಾಳ್ಮೆಯಿಂದ ಇದ್ದ ಬುಮ್ರಾ ಅವರನ್ನ ಜಾನ್ಸೆನ್ ಮಾತಿನಿಂದ ಕೆಣಕಿದ್ರು. ಇದರಿಂದ ಕೋಪಗೊಂಡ ಬುಮ್ರಾ ಜಾನ್ಸನ್ ಕಡೆ ಬಂದ್ರು. ಇದನ್ನು ಕಂಡ ಅಂಪೈರ್ಗಳು ಮಧ್ಯಪ್ರವೇಶಿಸಿ ಇಬ್ಬರ ವಾಕ್ ಸಮರವನ್ನು ಕೊನೆಗೊಳಿಸಿದರು.
ಇದನ್ನ ಮನಸ್ಸಿನಲ್ಲಿಟ್ಟುಕೊಂಡಿದ್ದ ಬುಮ್ರಾ ಮೂರನೇ ಟೆಸ್ಟ್ನಲ್ಲಿ ಮಾರ್ಕೊ ಜಾನ್ಸೆನ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ್ರು.
ಎರಡನೇ ದಿನದ ಚಹಾ ವಿರಾಮದ ನಂತರ, ಬುಮ್ರಾ ಓವರ್ನಲ್ಲಿ ಬೌನ್ಸರ್ಗಳ ಮೂಲಕ ಜಾನ್ಸೆನ್ಗೆ ಸವಾಲ್ ಎಸೆದರು.
ಬುಮ್ರಾರ ದಾಳಿಗೆ ಕಮ್ಮಕ್ ಕಿಮ್ಮಕ್ ಎನ್ನದ ಜಾನ್ಸನ್ ಗಪ್ ಚುಪ್ ಆಗಿದ್ದರು. ಇದೇ ಓವರ್ ನಲ್ಲಿ ಬುಮ್ರಾ ಜಾನ್ಸನ್ ವಿಕೆಟ್ ಪಡೆದರು.
ಆ ಮೂಲಕ ಜಾನ್ಸನ್ ಗೆ ಮುಟ್ಟಿನೋಡಿಕೊಳ್ಳುವಂತಹ ತಿರುಗೇಟು ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.