ADVERTISEMENT
Saturday, May 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೋವ್ಯಾಕ್ಸಿನ್‌ ಲಸಿಕೆ ದರದಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಲು ಜಯನಗರ ಯುನೈಟೆಡ್‌ ಆಸ್ಪತ್ರೆ ಘೋಷಣೆ

Mahesh M Dhandu by Mahesh M Dhandu
August 11, 2021
in Newsbeat, State, ರಾಜ್ಯ
covaccine vaccine saaksha tv
Share on FacebookShare on TwitterShare on WhatsappShare on Telegram

ಕೋವ್ಯಾಕ್ಸಿನ್‌ ಲಸಿಕೆ ದರದಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಲು ಜಯನಗರ ಯುನೈಟೆಡ್‌ ಆಸ್ಪತ್ರೆ ಘೋಷಣೆ

ಬೆಂಗಳೂರು : ಸುಮಾರು 20 ಸಾವಿರಕ್ಕೂ ಹೆಚ್ಚು ಡೋಸ್‌ ಕೋವ್ಯಾಕ್ಸಿನ್‌ ಲಸಿಕೆಯನ್ನು ಹೊಂದಿರುವ ಜಯನಗರದ ಯುನೈಟೆಡ್‌ ಆಸ್ಪತ್ರೆ, ಸರಕಾರ ನಿಗದಿಪಡಿಸಿರುವ ದರದಲ್ಲಿ (As per Cowin App Rate 1410-210=1200) 210 ರೂಪಾಯಿ ರಿಯಾಯಿತಿ ನೀಡಲಿದೆ. ಸಾಮಾಜಿಕ ಕಾಳಜಿಯಿಂದ ಹಾಗೂ ನಮ್ಮ ಬಳಿ ಇರುವ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ಹೇಳಿದ್ದಾರೆ.

Related posts

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

May 30, 2026
ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

May 30, 2026

ಬೆಂಗಳೂರು ನಗರದಲ್ಲೆಡೆ ಲಸಿಕೆಗಳ ಲಭ್ಯತೆಯಲ್ಲಿ ಕೊರತೆ ಕಂಡುಬರುತ್ತಿದೆ. ಅದರಲ್ಲೂ ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್‌ ವೇರಿಯಂಟ್‌ ವಿರುದ್ದ ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್‌ ಲಸಿಕೆಯ ಕೊರತೆ ಹೆಚ್ಚಾಗಿದೆ. ನಮ್ಮ ಆಸ್ಪತ್ರೆಯ ಮಂಡಳಿಯ ವತಿಯಿಂದ ನಾವುಗಳು ಎರಡು ತಿಂಗಳ ಹಿಂದೆ ಕೋವ್ಯಾಕ್ಸಿನ್‌ ಹಾಗೂ ಇತರೆ ಲಸಿಕೆಗಳಿಗೆ ಮುಂಗಡ ಹಣವನ್ನು ನೀಡಿ ಖರೀದಿಸಿದ್ದೇವು. ಇತ್ತೀಚಿಗೆ ನಮ್ಮ ಆಸ್ಪತ್ರೆಗೆ 20,000 ಡೋಸ್‌ ನಷ್ಟು ಕೋವ್ಯಾಕ್ಸಿನ್‌ ಲಸಿಕೆ ಸರಬರಾಜು ಆಗಿದೆ. ಇದರಲ್ಲಿ 5000 ಡೋಸ್‌ ಗಳನ್ನು ನಾವು ಕರೋನಾ ಎರಡನೇ ಅಲೆಯಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಿದ ನಮ್ಮ ಕಲಬುರ್ಗಿಯ ಆಸ್ಪತ್ರೆಯಲ್ಲಿ ಬಳಸಲಿದ್ದೇವೆ ಎಂದು ಹೇಳಿದರು.

ಇನ್ನುಳಿದ 15 ಸಾವಿರ ಡೋಸ್‌ ಗಳನ್ನು ನಮ್ಮ 15 ಸಹಯೋಗಿ ಆಸ್ಪತ್ರೆಯ ಮತ್ತು ಕ್ಲಿನಿಕ್‌ಗಳ ಮುಖಾಂತರ ಬೆಂಗಳೂರಿನಲ್ಲಿ ಬಳಸಲಿದ್ದು, ಸರಕಾರ ನಿಗದಿ ಪಡಿಸಿರುವ 1410 ರೂಪಾಯಿಗಳಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಿ 1200 ರೂಪಾಯಿ ದರದಲ್ಲಿ ನೀಡಲು ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಎರಡನೇ ಡೋಸ್‌ ಕೋವ್ಯಾಕ್ಸಿನ್‌ ದೊರೆಕದೆ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆಯನ್ನು ರೂಪಿಸಿದ್ದೇವೆ ಎಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

covaccine vaccine saaksha tv

ಜಯನಗರದ ಯುನೈಟೆಡ್‌ ಆಸ್ಪತ್ರೆಯನ್ನು ಕೋವಿಡ್‌ ಲಸಿಕೆ ನೀಡುವ ಸಲುವಾಗಿಯೇ ಕಾಯ್ದಿರಿಸಲಾಗಿದ್ದು. ಇದನ್ನು ಲಸಿಕೆ ನೀಡುವ ಸ್ಪೇಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರಿಂದಾಗಿ ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಈ ಆಸ್ಪತ್ರೆಯನ್ನು ಲಸಿಕೆ ಪಡೆಯುವವರಿಗೆ ಸೇಫ್‌ ಜೋನ್‌ ಎನ್ನಬಹುದೆಂದು ಯುನೈಟೆಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ ವಿಕ್ರಮ್‌ ಸಿದ್ದಾರೆಡ್ಡಿ ತಿಳಿಸಿದರು.

ಯುನೈಟೆಡ್‌ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಶಾಂತಕುಮಾರ್‌ ಮುರುಡಾ ಮಾತನಾಡಿ*, ಐಸಿಎಂಆರ್‌ ಸಂಸ್ಥೆಯ ವತಿಯಿಂದ ನಡೆಸಲಾದ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್‌ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್‌ ವೇರಿಯೆಂಟ್‌ ವಿರುದ್ದ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ನಮ್ಮ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕರೋನಾ ಮಹಾಮಾರಿಯ ವಿರುದ್ದ ರಕ್ಷಣೆ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಈ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಹಯೋಗಿ ಆಸ್ಪತ್ರೆಗಳ ಮೂಲಕವೂ ಲಸಿಕೆಯನ್ನು ಸಾರ್ವಜನಿಕರಿಗೆ ದೊರಕಿಸಿಕೊಡಲಿದ್ದೇವೆ.

ಆಸ್ಪತ್ರೆಯ ವತಿಯಿಂದ ಕಡಿಮೆ ದರದಲ್ಲಿ ಸದಸ್ಯತ್ವ ಕಾರ್ಡನ್ನೂ ಪಡೆದುಕೊಳ್ಳುವ ಮೂಲಕ ಎರಡನೇ ಡೋಸ್‌ ಕೋವ್ಯಾಕ್ಸಿನನ್ನು ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ನಮ್ಮ ಆಸ್ಪತ್ರೆಯ ವತಿಯಿಂದ 4 ಸಾವಿರಕ್ಕೂ ಹೆಚ್ಚು ಸ್ಪುಟ್ನಿಕ್‌-ವಿ ಲಸಿಕೆಯ ಎರಡೂ ಡೋಸನ್ನು ನೀಡಲಾಗಿದ್ದು, ಇನ್ನೂ 12 ಸಾವಿರ ಡೋಸ್‌ಗೆ ಆರ್ಡರ್‌ ನೀಡಿದ್ದೇವೆ ಎಂದು ಹೇಳಿದರು.

ಬೆಂಗಳೂರಿನ ಜಯನಗರದ ಮಾಧವ ಪಾರ್ಕ್‌ನಲ್ಲಿರುವ ಯುನೈಟೆಡ್‌ ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ವಾಟ್ಸಾಪ್‌ ಮೂಲಕ ಸುಲಭವಾಗಿ ಸ್ಲಾಟ್‌ ಬುಕ್‌ ಮಾಡುವ ಸೌಲಭ್ಯ – ವಾಟ್ಸಾಪ್‌ ನಂ: 99169 77777

Tags: #Saaksha TVCorona Viruscovaccine vaccinejayanagara
ShareTweetSendShare
Join us on:

Related Posts

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

ಸೆಕ್ಸ್ ವರ್ಕರ್‌ಗಳ ವಿರುದ್ಧ ಕ್ರಿಮಿನಲ್ ಕೇಸ್‌ಗಳು ಕಾನೂನುಬಾಹಿರ: ಸುಪ್ರೀಂ ಕೋರ್ಟ್

by Shwetha
May 30, 2026
0

ಸ್ವಯಂಪ್ರೇರಿತವಾಗಿ ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ ವಯಸ್ಕ ಮಹಿಳೆಯರ ವಿರುದ್ಧ ದಾಳಿ ನಡೆಸುವುದು ಅಥವಾ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ....

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

ಸಿದ್ದರಾಮಯ್ಯ ನಿರ್ಗಮನದ ಹಿಂದೆ ದಿಲ್ಲಿ ಒಪ್ಪಂದದ ರಹಸ್ಯ: ಅಹಿಂದ ವರ್ಗಕ್ಕೆ ಸತೀಶ್ ಜಾರಕಿಹೊಳಿ ಹೊಸ ಸಾರಥಿ

by Shwetha
May 30, 2026
0

ಬೆಂಗಳೂರು: ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ಬೆನ್ನಲ್ಲೇ, ಮಾಜಿ ಸಚಿವ ಸತೀಶ್ ಜಾರಕಿಹೊಳಿ ಅವರು ಹಲವು ಸ್ಫೋಟಕ ಮತ್ತು...

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

ಸಚಿವ ಸಂಪುಟದ ಫೈನಲ್ ಲಿಸ್ಟ್ ಸಿದ್ಧ? ಕೃಷ್ಣ ಬೈರೇಗೌಡರಿಂದ ದಿನೇಶ್ ಗುಂಡುರಾವ್ ವರೆಗೆ ಯಾರಿಗೆ ಸಿಗಲಿದೆ ಚಾನ್ಸ್?

by Shwetha
May 30, 2026
0

ರಾಜ್ಯ ರಾಜಕಾರಣದಲ್ಲಿ ಇದೀಗ ನೂತನ ಸಚಿವ ಸಂಪುಟ ರಚನೆಯದ್ದೇ ಬಹುದೊಡ್ಡ ಸದ್ದು. ಕಾಂಗ್ರೆಸ್ ವಲಯದಲ್ಲಿ ಸಚಿವ ಸ್ಥಾನಕ್ಕಾಗಿ ಬಿರುಸಿನ ಚಟುವಟಿಕೆಗಳು ಹಾಗೂ ಭಾರೀ ಕಸರತ್ತುಗಳು ತೆರೆಮರೆಯಲ್ಲಿ ನಡೆಯುತ್ತಿವೆ....

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

ದೆಹಲಿಯಲ್ಲಿ ಸಿದ್ದರಾಮಯ್ಯ ನಾಯಕತ್ವಕ್ಕೆ ಖರ್ಗೆ ಮೆಚ್ಚುಗೆ

by Shwetha
May 30, 2026
0

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ದೆಹಲಿಯಲ್ಲಿ ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಅವರ ದೀರ್ಘ ಸಾರ್ವಜನಿಕ ಜೀವನದ ಸೇವೆಯನ್ನು ಶ್ಲಾಘಿಸಿದರು. ಸಾಮಾಜಿಕ ನ್ಯಾಯ,...

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

ರಾಜಕಾರಣವೇ ಬೇಡ ಎನಿಸುವಷ್ಟು ನೋವು ಕೊಟ್ಟರು:ಪತ್ನಿಯ ವಿರುದ್ಧವೂ ಸುಳ್ಳು ಆರೋಪ ಮಾಡಿ ಮಾನಸಿಕ ಹಿಂಸೆ ನೀಡಿದರು; ಸಿದ್ದರಾಮಯ್ಯ ಕಣ್ಣೀರಿನ ವಿದಾಯದ ನುಡಿ

by Shwetha
May 30, 2026
0

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಸಿದ್ದರಾಮಯ್ಯ ಅವರು ಹೊರಹಾಕಿರುವ ಮಾತುಗಳು ಕೇವಲ ರಾಜಕೀಯ ಹೇಳಿಕೆಗಳಲ್ಲ, ಅವು ಹತ್ತಾರು ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿದ್ದ ಒಬ್ಬ ನಾಯಕನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram