Jaydev Unadkat : ಹ್ಯಾಟ್ರಿಕ್ ವಿಕೆಟ್ ಪಡೆದ ಜಯದೇವ್ ಉನಾದ್ಕತ್
ವೇಗಿ ಜಯದೇವ್ ಉನಾದ್ಕತ್ ರಣಜಿ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದಾರೆ.
ಮಂಗಳವಾರ ಸೌರಾಷ್ಟ್ರ ಕ್ರಿಕೆಟ್ ಮೈದಾನದಲ್ಲಿ ಡೆಲ್ಲಿ ವಿರುದ್ಧ ಆರಂಭವಾದ ರಣಜಿ ಟೂರ್ನಿಯ ಮೊದಲ ಓವರ್ನಲ್ಲೆ ಹ್ಯಾಟ್ರಿಕ್ ವಿಕೆಟ್ ಪಡೆದು ಕಮಾಲ್ ಮಾಡಿದ್ದಾರೆ.
ಒಟ್ಟು 6 ವಿಕೆಟ್ ಪಡೆದು ಡೆಲ್ಲಿ ತಂಡಕ್ಕೆ ಆರಂಭಿಕ ಆಘಾತ ನೀಡಿದ್ದಾರೆ.
ಮೊದಲ ಒಂದು ಗಂಟೆಯಲ್ಲಿ ಡೆಲ್ಲಿ ತಂಡ ಕೇಲವ 5 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ಕೇವಲ 2 ಓವರ್ ಅಂತರದಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದರೊಂದಿಗೆ 21ನೇ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಮೊದಲ ಅವಧಿಯ ವೇಳೆಗೆ 6 ವಿಕೆಟ್ ಪಡೆದಿದ್ದರು.
ಡೆಲ್ಲಿ ತಂಡದ ನಾಯಕ ಯಶ್ ಧೂಲ್,ಧ್ರುವ್ ಶೋರೆ, ವೈಭವ್ ರಾವಲ್ ಹಾಗೂ ಲಲಿತ್ ಯಾದವ್ ಶೂನ್ಯಕ್ಕೆ ಔಟಾದರು.
ಎಡಗೈ ವೇಗಿ ಜಯದೇವ್ ಉನಾದ್ಕಟತ್ ಇತ್ತೀಚೆಗ ಬಾಂಗ್ಲಾ ವಿರುದ್ಧ ಟೀಮ್ ಇಂಡಿಯಾದಲ್ಲಿ ಆಡಿದ್ದರು.