“ಸರ್ವಾಧಿಕಾರಿ ಕೇಂದ್ರ” : ಮೋದಿ, ಶಾ ವಿರುದ್ಧ ಸಿಡಿದ್ರಾ ಮಾಧುಸ್ವಾಮಿ..?!
ಬೆಂಗಳೂರು : “ಕೇಂದ್ರ ಸರ್ಕಾರ ರಾಜ್ಯಗಳ ವಿಚಾರದಲ್ಲಿ ಅತಿಕ್ರಮಣ ಮಾಡಿ ಹಸ್ತಕ್ಷೇಪ ನಡೆಸುತ್ತಿದೆ. ಕೇಂದ್ರದ ನಡೆಯಿಂದ ಒಕ್ಕೂಟ ವ್ಯವಸ್ಥೆಗೆ ಧಕ್ಕೆಯಾಗುವ ಆತಂಕ ಎದುರಾಗಿದೆ” ಹೀಗೆ ಹೇಳಿರೋದು ಯಾವುದೋ ವಿರೋಧ ಪಕ್ಷದ ನಾಯಕ, ಮುಖಂಡರಲ್ಲ. ಬದಲಾಗಿ ರಾಜ್ಯ ಬಿಜೆಪಿ ಸರ್ಕಾರದ ಸಚಿವ ಜೆ.ಸಿ.ಮಾಧುಸ್ವಾಮಿ..!!
ಹೌದು..! ‘ರಾಷ್ಟ್ರೀಯ ಏಕತೆ ಮತ್ತು ಪ್ರಾದೇಶಿಕ ಸ್ವಾತಂತ್ರ್ಯ’ ವಿಚಾರ ಸಂಕೀರ್ಣದಲ್ಲಿ ಮಾತನಾಡಿದ ಮಾಧುಸ್ವಾಮಿ, ಕೇಂದ್ರದ ಸರ್ವಾಧಿಕಾರಿ ಧೋರಣೆ ಹೆಚ್ಚುತ್ತಿದ್ದು, ಅಧಿಕಾರದ ಕೇಂದ್ರೀಕರಣಕ್ಕೆ ಮುಂದಾಗಿದೆ. ಈ ಧೋರಣೆಯಿಂದಲೇ ಪ್ರಾದೇಶಿಕ ಭಾವನೆ ಬೆಳೆಯುತ್ತಿದೆ. ಎಲ್ಲೋ ಕುಳಿತು ನಮ್ಮನ್ನು ಆಳುವವರ ಸರ್ವಾಧಿಕಾರಿ ಧೋರಣೆಯನ್ನು ನಿಗ್ರಹ ಮಾಡದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮೋದಿ, ಶಾ ವಿರುದ್ಧ ಸಿಡಿದ ಮಾಧುಸ್ವಾಮಿ..!!
ಈ ಮೇಲಿನ ಹೇಳಿಕೆಯನ್ನ ಬೇರೆ ಯಾವುದೋ ಪಕ್ಷದ ನಾಯಕರು ಹೇಳಿದ್ದರೇ ಇದೊಂದು ರಾಜಕೀಯ ಹೇಳಿಕೆ ಅಂತ ಪರಿಗಣಿಸಬಹುದಿತ್ತು. ಆದ್ರೆ ಬಿಜೆಪಿಯ ಮಾಧುಸ್ವಾಮಿಯೇ ಈ ಹೇಳಿಕೆ ನೀಡಿರುವುದು ತುಸು ಯೋಚಿಸಬೇಕಾದ ವಿಷಯವೇ..a
ಯಾಕೆಂದ್ರೆ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಯಾರೂ ಕೂಡ ಮೋದಿ, ಅಮಿತ್ ಶಾ ವಿರುದ್ಧ ಮಾತನಾಡುವ ಧೈರ್ಯ ಮಾಡೋದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮಾಧುಸ್ವಾಮಿ ಕೇಂದ್ರದ ನಡೆಯನ್ನ ತೀಷ್ಣವಾಗಿ ಟೀಕಿಸಿರುವುದು ಅಚ್ಚರಿಗೆ ಕಾರಣವಾಗಿದೆ. ಅಲ್ಲದೆ ಮಾಧುಸ್ವಾಮಿ ಮೋದಿ, ಅಮಿತ್ ಶಾ ವಿರುದ್ಧ ತಿರುಗಿ ಬಿದ್ರಾ ಅನ್ನೋ ಅನುಮಾನಕ್ಕೂ ಕಾರಣವಾಗಿದೆ.
