ಕಾಂಗ್ರೆಸ್ ಪಾದಯಾತ್ರೆಯಿಂದ ಜೆಡಿಎಸ್, ಬಿಜೆಪಿಯವರ ಮೈಯ್ಯಲ್ಲಿ ಇರುವೆ ಹರಿದಾಡುತ್ತಿವೆ
ಬೆಂಗಳೂರು : ಕಾಂಗ್ರೆಸ್ ಪಾದಯಾತ್ರೆಯಿಂದ ಜೆಡಿಎಸ್, ಬಿಜೆಪಿಯವರ ಮೈಯ್ಯಲ್ಲಿ ಇರುವೆ ಹರಿದಾಡುತ್ತಿವೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ. Congress saakshatv
ಜೆಡಿಎಸ್- ಬಿಜೆಪಿ ವಿರುದ್ಧ ಟ್ವಿಟ್ಟರ್ ನಲ್ಲಿ ಕುಟುಕಿರುವ ಕಾಂಗ್ರೆಸ್, 25 ಸಂಸದರು ಬಿಜೆಪಿಯವರು, ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ, ಹೀಗಿದ್ದೂ ಮೇಕೆದಾಟು ಯೋಜನೆ ಜಾರಿ ವಿಚಾರದಲ್ಲಿ ಪ್ರಗತಿ ಇಲ್ಲದಿರುವುದು ಬಿಜೆಪಿಯ ಬದ್ಧತೆಯ ಕೊರತೆಯಿಂದ ಅಲ್ಲವೇ? ಬಿಜೆಪಿ ಸರ್ಕಾರ ಬಂದಮೇಲೆ ಪ್ರಗತಿ ಏನು, ಕೇಂದ್ರ ಪರಿಸರ ಇಲಾಖೆಯ ಅನುಮತಿ ಪಡೆಯಲಾಗಲಿಲ್ಲವೇಕೆ? ಉತ್ತರಿಸುವ ಶಕ್ತಿ ಇದೆಯೇ ಬಿಜೆಪಿ.
2019ರಲ್ಲಿ ಜಲ ಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್ ಅವರ ಇಚ್ಛಾಶಕ್ತಿ, ಬದ್ಧತೆಯಿಂದ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ TOR ಸಲ್ಲಿಸಲಾಗಿತ್ತು. ನಂತರದ ಪ್ರಗತಿಯ ಬಗ್ಗೆ ಬಿಜೆಪಿ ಉತ್ತರಿಸುವ ಧೈರ್ಯ ತೋರುವುದೇ? ಈಗ ‘ಡಬಲ್ ಇಂಜಿನ್ ಸರ್ಕಾರ’ ನಮ್ಮದು ಎಂದುಕೊಳ್ಳುವ ಬಿಜೆಪಿಗೆ ಕೇಂದ್ರದ ಅನುಮತಿ ಪಡೆಯುವ ಶಕ್ತಿ ಇಲ್ಲವೇ?
ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ನ ಬದ್ಧತೆಯ ಪಾದಯಾತ್ರೆಯಿಂದ ಹತಾಶರಾದ ಜೆಡಿಎಸ್ ಹಾಗೂ ಬಿಜೆಪಿಯವರ ಮೈಯ್ಯಲ್ಲಿ ಇರುವೆ ಹರಿದಾಡುತ್ತಿವೆ! ಕಾವೇರಿ ನ್ಯಾಯಾಧಿಕರಣ ರಾಜ್ಯಕ್ಕೆ 270 ಟಿಎಂಸಿ ನೀರನ್ನು ಹಂಚಿಕೆ ಮಾಡಿದಾಗ ಸುಪ್ರೀಂನಲ್ಲಿ ಪ್ರಶ್ನಿಸಿ ಹೆಚ್ಚುವರಿ 14.75 ಟಿಎಂಸಿ ನೀರು ಪಡೆಯಲು ಶ್ರಮಿಸಿದ್ದು ಕಾಂಗ್ರೆಸ್ ಸರ್ಕಾರ ಎಂದು ಬರೆದುಕೊಂಡಿದೆ.