JDS : ಸರ್ಕಾರದ ಆಡಳಿತವನ್ನು ದಲ್ಲಾಳಿಗಳು ನಡೆಸುತ್ತಿದ್ದಾರೆ – ಹೆಚ್ ಡಿಕೆ
ಬೀದರ್ : ಎರಡನೇ ಹಂತದಲ್ಲಿ ಪಂಚರತ್ನ ರಥಯಾತ್ರೆ ನಾಲ್ಕನೇ ದಿನದ ಪ್ರವಾಸ ಉತ್ತಮ ವಾತವಾರಣವಿದೆ.
ಜನ್ರ ಸ್ಪಂದನೆ ಅತ್ಯುತ್ತಮವಾಗಿ ಸಿಕ್ಕಿದೆ.
ಮಹಿಳೆಯರು ಹಾಗೂ ರೈತರು ನಾವು ಉಳಿಯಬೇಕಾದ್ರೆ ನಿಮ್ಮ ಸರ್ಕಾರ ಬರಬೇಕು ಎಂಬ ನೀರಿಕ್ಷೆಯಲ್ಲಿದ್ದಾರೆ ಎಂದು ರಾಜೇಶ್ವರದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ..
ಜನರು ತಮ್ಮ ತಮ್ಮ ಸಮಸ್ಯೆಗಳನ್ನು ಎಳೆ ಎಳೆಯಾಗಿ ಮನಬಿಚ್ಚಿ ಹೇಳುತ್ತಿದ್ದಾರೆ.
ಭಾರತದ ನಿಜವಾದ ಚಿತ್ರಣದ ಬಗ್ಗೆ ಯಾರೂ ಮಾತನಾಡುತ್ತಿಲ್ಲ.
ಜನ್ರರಿಗೆ ಹೊಟ್ಟೆಗೆ ಅನ್ನ ಸಿಗುತ್ತಿಲ್ಲ ಗಂಜಿ ಸೇವಿಸಿ ಜೀವನ ಸಾಗಿಸುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅಲ್ಲದೇ ಸ್ಯಾಂಟ್ರೋ ರವಿ ಬಗ್ಗೆ ಯಾರು ಮಾತನಾಡಬೇಡಿ ಎಂಬ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡುತ್ತಾ .
ಸ್ಯಾಂಟ್ರೋ ರವಿ ಅಂಥಾ ವ್ಯಕ್ತಿಗಳ ಮುಖಾಂತರ ಟ್ರಾನ್ಸಫರ್ ದಂಧೆ ನಡೆಯುತ್ತಿರೋ ಬಗ್ಗೆ ಮಾತಾಡಿದ್ದೇನೆ ಅಷ್ಟೇ.
ಯಾರ ಬಗ್ಗೆಯೂ ವೈಯಕ್ತಿಕವಾಗಿ ನಾನು ಮಾತಾಡಿಲ್ಲ.
ಆರಗ ಜ್ಞಾನೇಂದ್ರರನ್ನು ಭೇಟಿ ಮಾಡಿದ್ದಾನೆ ದುಡ್ಡು ಎಣಿಸುವ ವಿಡಿಯೋ ಇದೆ ಒಬ್ಬ ಅಧಿಕಾರಿ ನೀಡಿದ ಮುಂಗಡ ಹಣ ಇದು.
ವರ್ಗಾವಣೆ ಬಗ್ಗೆ ಸ್ಯಾಂಟ್ರೋ ರವಿ ಎಸ್ ಟಿ ಸೋಮಶೇಖರ್ ಜೊತೆ ಮಾತನಾಡುವ ವಿಡಿಯೋ ಹೊರಗೆ ಬಂದಿದೆ.
ಸ್ಟೇ ವೇಕೆಟ್ ಆದ್ರೆ ವಿಡಿಯೋ ಬೀಡೋರು ಬೀಡ್ತಾರೆ.
ಸರ್ಕಾರದ ಆಡಳಿತವನ್ನು ದಲ್ಲಾಳಿಗಳು ನಡೆಸುತ್ತಿದ್ದಾರೆ.
ನಿಮ್ಮ ಮಂತ್ರಿಗಳೆ ಹೇಳುತ್ತಿದ್ದಾರೆ ಹಣಪಡೆದು ಕೆಲಸ ಮಾಡಿಕೊಡುತ್ತಿದ್ದಾರೆ.
ದೇವರಾಜ ನಾಯಕರನ್ನು ಯಾಕೆ ಅಮಾನತು ಮಾಡಿದ್ರೆ, ಜಗದೀಶ ಅವರನ್ನು ತೆಗೆದು ಹಾಕಿದ್ದಾರೆ.
ಇವರು ಮಾಡುವ ಕೆಲಸವನ್ನು ಜನ್ರ ಮುಂದೆ ಸರ್ಕಾರ ಹೇಳಬೇಕಿದೆ.
ಬಸವರಾಜ್ ಬೊಮ್ಮಾಯಿ ನಿಮ್ಮ ತಂದೆಯವರಂತೆ ಆಡಳಿತ ಮಾಡಿ.
ನೀವು ಬಲಹೀನರಾ ಕುಮಾರ ಕೃಪಾದ ಅದರದೆ ಆದ ಮರ್ಯಾದೆ ಇದೆ.
ರಾಜ್ಯದ ಮುಖ್ಯಮಂತ್ರಿ ಬಗ್ಗೆ ಲಘುವಾಗಿ ಮಾತನಾಡಿದ್ರೂ ಯಾಕೆ ಬಂಧನ ಮಾಡುತ್ತಿಲ್ಲ.
ಬೀದಿ ಬೀದಿ ಹರಿದಾಡುತ್ತಿದೆ ಇವರ ವಿಡಿಯೋಗಳು ಐಪೋನ್ ಗೆ ಬರುತ್ತಿವೆ.
ಅಡ್ವಾನ್ಸ್ ಅಡ್ವಾನ್ಸ್ ಅಂತಾ ಎಲ್ಲಿ ಏನೇ ಮಾತನಾಡಿದ್ರೂ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಾರೆ.
ಸರ್ಕಾರದ ಹಲವು ಇಲಾಖೆಗಳಲ್ಲಿ ಎಫ್ ಡಿ ಇಟ್ಟ ದುಡ್ಡು ಸ್ವಚ್ಚೆಚಾರವಾಗಿ ಲೂಟಿ ಯಾಗುತ್ತಿದೆ.
ರಾಜ್ಯದಲ್ಲಿ ಕ್ರೈಂ ರೇಟ್ ಹೆಚ್ಚಾಗುತ್ತಿರುವ ವಿಷಯ.
ಹಣ ತೆಗೆದುಕೊಂಡು ಟ್ರಾನ್ಸಪರ್ ಮಾಡಿದ್ರೆ ಇನ್ನೆನ್ನೂ ಕ್ರೈಂ ರೇಟ್ ಹೆಚ್ಚಾಗುತ್ತದೆ.
ರಾಜ್ಯದಲ್ಲಿ ಕೊಮುಗಲಬೆ ಹೆಚ್ಚಾಗುತ್ತಿರುವ.
ಎಲ್ಲಾ ಸಮಾಜದ ಯುವಕರು ಶಾಂತಿಯಿಂದ ಇರಿ.
ಕೆಲವೊಂದು ಬಾವನೆಗಳನ್ನು ತುರುಕಿ ಪ್ರಚೋದನೆ ಮಾಡ್ತಾರೆ, ಉದ್ರೆಕಕ್ಕೆ ಒಳಗಾಗಬೇಡಿ…
ಯಾರ ಮಾತು ಕೇಳಿ ಕಾನೂನು ಕೈಗೆತ್ತಿಕೊಳ್ಳಬೇಡಿ ಎಂದು ರಾಜ್ಯದ ಯುವಕರಲ್ಲಿ ಹೆಚ್ ಡಿಕೆ ಮನವಿ ಮಾಡಿಕೊಂಡಿದ್ದಾರೆ.