Tumkur | ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಸ್ಪೀಕರ್ ಗೆ ದೂರು : ಗುಬ್ಬಿ ಶಾಸಕರು ಹೇಳಿದ್ದೇನು..?
ತುಮಕೂರು : ಜೆಡಿಎಸ್ ಉಚ್ಛಾಟಿತ ಶಾಸಕ ಎಸ್ ಆರ್ ಶ್ರೀನಿವಾಸ್ ವಿರುದ್ದ ಶಿಸ್ತು ಕ್ರಮಕ್ಕೆ ಒತ್ತಾಯಿಸಿ ಸಭಾಪತಿಗಳಿಗೆ ಜೆಡಿಎಸ್ ಮನವಿ ಸಲ್ಲಿಸಿದೆ.
ಈ ಬಗ್ಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ತುಮಕೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದು, ಇದು ವಿಷಾದನೀಯ ಸಂಗತಿ.
ನಾನು ಅಡ್ಡಮತದಾನ ಮಾಡಿರುವ ಬಗ್ಗೆ ಅವರಿಗೆ ಸ್ಪಷ್ಟತೆ ಇಲ. ಅವರು ಏನಂತ ದೂರು ಕೊಡುತ್ತಾರೆ ಎಂದು ಪ್ರಶ್ನಿಸಿದರು.
ಅಲ್ಲದೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆ ಕೊಡುತ್ತಾರೆ.

ಮುಂದೆ ಕುಮಾರಸ್ವಾಮಿ ಸಿಎಂ ಆಗಬಾರದು ಎಂದು ನಾವೇನು ಸ್ಟೇ ತಂದಿದೆವಾ ಎಂದು ಪ್ರಶ್ನಿಸಿದ ಶ್ರೀನಿವಾಸ್, ಕುಮಾರಸ್ವಾಮಿ ನಾನೇ ಮುಂದಿನ ಸಿಎಂ ಅನ್ನಲಿ ಬಿಡಿ ಎಂದರು.
ಇದೇ ವೇಳೆ ಸಿದ್ದರಾಮೋತ್ಸವ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಆ ಕಾರ್ಯಕ್ರಮಕ್ಕೆ ನನಗೆ ಯಾವುದೇ ಆಹ್ವಾನವಿಲ್ಲ.
ಅದು ಕಾಂಗ್ರೆಸ್ ಸಮಾವೇಶ. ನಾನಿನ್ನು ಜನತಾದಳದಲ್ಲಿ ಇದ್ದೇನೆ.. ನನಗೆ ಅವರು ಅಮಾನತು ಮಾಡಿದ್ದಾರೆ ಅಷ್ಟೆ.
ನಾನು ಸರ್ವ ಸ್ವತಂತ್ರ – ಡಿಸೆಂಬರ್ ನಂತರ ಆಲೋಚನೆ ಮಾಡುತ್ತೇನೆ.
ಅವರು ಪುನಃ ನನ್ನನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಾರೆ ಎಂದು ನಾನು ತಿಳಿದರೇ ನನ್ನಷ್ಟು ಮೂರ್ಖ ಯಾರೂ ಇಲ್ಲ ಎಂದು ಹೇಳಿದರು.