ಬೆಂಗಳೂರು : ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಹತ್ತಿರವಾಗುತ್ತಿದಂತೆ ರಾಜ್ಯ ರಾಜಕೀಯದಲ್ಲಿ ರಾಜಕೀಯ ಚಟುವಟಿಕೆಗಳು ಗದಿಗೆದರಿವೆ. ಹಾಗಾಗಿ ರಾಜ್ಯದ ಮೂರು ಪ್ರಮುಖ ಪಕ್ಷಗಳು ತಮ್ಮದೆ ಆದ ದಾಳ ಉರುಳಿಸಲು ಸಜ್ಜಾಗುತ್ತಿವೆ. ಅದರ ಭಾಗವಾಗಿ ಇಂದು ಜೆಡಿಎಸ್ ಪಕ್ಷ ತನ್ನ ಶಾಸಕಾಂಗ ಸಭೆ ಕರೆದಿದೆ.
ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಜೆಡಿಎಸ್ ಶಾಸಕಾಂಗ ಸಭೆ ಕರೆದಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ನಡೆಯುವ ಸಭೆಗೆ ಜೆಡಿಎಸ್ ವರಿಷ್ಠರು ಸೇರಿದಂತೆ ಜೆಡಿಎಸ್ ನ ಎಲ್ಲಾ ಶಾಸಕರು ಭಾಗಿಯಾಗುವ ಸಾಧ್ಯತೆಯಿದೆ. ಅಲ್ಲದೆ ಸಭೆಯ ಪ್ರಮುಖ ಚರ್ಚೆ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಯಾರು ಅಭ್ಯರ್ಥಿ ಆಗಬೇಕು ಎಂಬುದಾಗಿದೆ. ಇನ್ನೊಂದೆಡೆ ರಾಜ್ಯಸಭೆಗೆ ಹೆಚ್.ಡಿ.ದೇವೇಗೌಡರು ಸ್ಪರ್ಧಿಸಬೇಕು ಎಂದು ಜೆಡಿಎಸ್ ಶಾಸಕರು ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಪಡೆಯಬೇಕಾದರೆ ಜೆಡಿಎಸ್ ಗೆ 48 ಮತಗಳು ಬೇಕು. ಆದರೆ 34 ಶಾಸಕರ ಬೆಂಬಲ ಮಾತ್ರ ಜೆಡಿಎಸ್ ಗೆ ಇದೆ. ಆದ್ದರಿಂದ ದೇವೇಗೌಡರು ಬಿಟ್ಟು ಬೇರೆ ಯಾರೇ ಸ್ಪರ್ಧಿ ಮಾಡಿದರೂ ಸ್ಥಾನವನ್ನು ಕಳೆದಯಕೊಳ್ಳುತ್ತೇವೆ ಎಂಬ ಆತಂಕ ಜೆಡಿಎಸ್ ವಲಯದಲ್ಲಿ ಇದೆ.
ಒಂದು ವೇಳೆ ದೇವೇಗೌಡರು ಸ್ಪರ್ಧೆ ಮಾಡಿದರೆ ಕಾಂಗ್ರೆಸ್ ಬೆಂಬಲ ಸಿಗಲಿದೆ. ಕಾಂಗ್ರೆಸ್ ನ 14 ಶಾಸಕರ ಬೆಂಬಲ ಸಿಕ್ಕರೇ ದೇವೇಗೌಡರು ಸುಲಭವಾಗಿ ರಾಜ್ಯಸಭೆ ಪ್ರವೇಶ ಮಾಡಬಹುದು ಎಂಬ ಲೆಕ್ಕಚಾರ ಜೆಡಿಎಸ್ ವಲಯದಲ್ಲಿದೆ. ಅಲ್ಲದೆ ದೇವೇಗೌಡರು ಸ್ಪರ್ಧೆ ಮಾಡಿದರೆ ಯಾರು ಅಡ್ಡಿಪಡಿಸಲು ಎಂಬುದು ಈಗಾಗಲೇ ಖಚಿತವಾಗಿದೆ.