ಚುನಾವಣೆಯಲ್ಲಿ ಜೆಡಿಎಸ್ ನಮ್ಮ ಎದುರಾಳಿ ಅಲ್ಲ : ಆರ್.ಅಶೋಕ್ R. Ashok saaksha tv
ಚಾಮರಾಜನಗರ : ಕುಟುಂಬ ರಾಜಕಾರಣದಿಂದ ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ ಎಂದು ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಕಂದಾಯ ಸಚಿವ ಆರ್ ಅಶೋಕ್ ಟಾಂಗ್ ನೀಡಿದ್ದಾರೆ.
ಮಳೆಯಿಂದ ರೈತರು ಸಂಕಷ್ಟದಲ್ಲಿರುವಾಗ ಬಿಜೆಪಿ ಜನಸ್ವರಾಜ್ ಸಮಾವೇಶ ಮಾಡುವುದು ಸರಿಯಲ್ಲ ಎಂಬ ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಚಾಮರಾಜನಗರದಲ್ಲಿ ಆರ್.ಅಶೋಕ್, ಕುಟುಂಬ ರಾಜಕಾರಣದಿಂದ ರಾಜ್ಯದಲ್ಲಿ ಜೆಡಿಎಸ್ ಮಾಯವಾಗಿದೆ.
ಮೇಲ್ಮನೆ ಚುನಾವಣೆಯಲ್ಲಿ ನಮ್ಮ ಎದುರಾಳಿ ಕಾಂಗ್ರೆಸ್ ಮಾತ್ರ ಎಂದು ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಅವರು ಸಮಾವೇಶ ಏಕೆ ಮಾಡುತ್ತಿದೀರಿ ಎಂದು ಕೇಳಿದ್ದಾರೆ.
ನಾವು ಸಮಾವೇಶ ಮಾಡಿದ್ರೆ ಜನ ಸೇರ್ತಾರೆ ಅದಕ್ಕೆ ಮಾಡುತ್ತಿದ್ದೇವೆ.
ನೀವು ಮಾಡಿದರೆ ಸಭೆ ಖಾಲಿ ಹೊಡೆಯಲಿದೆ ಎಂದು ಹೆಚ್ ಡಿಕೆ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಆರ್.ಅಶೋಕ್, ನಾನು ಎಲ್ಲಾ ಭಾಗ್ಯಗಳನ್ನು ಕೊಟ್ಟೆ ಎಂದು ಸಿದ್ದರಾಮಯ್ಯ ಬೀಗುತ್ತಾರೆ.
ಆದರೆ, ಜನಪರ ಆಡಳಿತ ಕೊಟ್ಡಿದ್ದರೇ ಜನ ಯಾಕೆ ತಿರಸ್ಕರಿಸುತ್ತಿದ್ದರು ಎಂದು ಕುಟುಕಿದ್ದಾರೆ.









