ರಾಜ್ಯಸಭಾ ಚುನಾವಣೆ : JDS ಗೆ ಶಾಕ್ ನೀಡಿದ ಶ್ರೀನಿವಾಸ್ ಗೌಡ ಮತ್ತು ಗುಬ್ಬಿ ಶ್ರೀನಿವಾಸ್
ಇಂದಿನ ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ ನಾಯಕರಿಗೆ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸ ಗೌಡ ಮತ್ತು ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ಶಾಕ್ ಕೊಟ್ಟಿದ್ದಾರೆ. ಶ್ರೀನಿವಾಸ ಗೌಡ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ್ದು, ಶ್ರೀನಿವಾಸ್ ಖಾಲಿ ಪೇಪರ್ ಅನ್ನು ಬ್ಯಾಲೆಟ್ ಬಾಕ್ಸ್‌ಗೆ ಹಾಕಿ ಸಂಚಲನ ಮೂಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಶ್ರೀನಿವಾಸಗೌಡ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಹೇಳಿದ್ದೆ. ಎಸ್‌ಆರ್ ಶ್ರೀನಿವಾಸ್ ಕೂಡ ಜೆಡಿಎಸ್‌ಗೆ ಮತ ಹಾಕಿಲ್ಲ. ಕಾಂಗ್ರೆಸ್ ಇಂದು ತನ್ನ ನಿಜವಾದ ಮುಖವನ್ನು ತೋರಿಸಿದೆ. ಬಿಜೆಪಿಯ ‘ಬಿ’ ಟೀಂ ಕಾಂಗ್ರೆಸ್. ದೇಶದಲ್ಲಿ ಬಿಜೆಪಿ ಬೆಳೆಯಲು ಅವರೇ ಮುಖ್ಯ ಕಾರಣಕರ್ತರು
ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಪೇಪರ್ ಹಾಕಿದ್ದಾರೆ. ಸಾಯಂಕಾಲ ಇವರ ಹಣೆಬರಹ ಗೊತ್ತಾಗುತ್ತದೆ. ನಮ್ಮ ಪಕ್ಷದಲ್ಲಿ ನಿಂತು ನಮಗೆ ದ್ರೋಹ ಮಾಡಿದ್ದಾರೆ. ಇವರಿಗೆ ನೈತಿಕತೆ ಇದ್ದರೆ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
#WATCH | I have voted for Congress because I love it: K Srinivasa Gowda, Karnataka JD(S) leader on Rajya Sabha elections pic.twitter.com/oMSkdlYSuQ
— ANI (@ANI) June 10, 2022
ಮತದಾನ ಮಾಡಿ ಹೊರಬಂದ ಬಳಿಕ ತಮ್ಮ ಸುತ್ತ ನೆರೆದಿದ್ದ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಗೌಡ್ರು ನಾನು ಈ ಹಿಂದೆ ಕಾಂಗ್ರೆಸ್ ನಲ್ಲಿದ್ದಾಗ ಸಚಿವನಾಗಿದ್ದೆ. ಕುಮಾರಸ್ವಾಮಿ ಸಿಟ್ಟಾದ್ರೆ ಆಗಲಿ ಬಿಡಿ, ರಾಜಕೀಯದಲ್ಲಿ ಇವೆಲ್ಲಾ ಕಾಮನ್, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದ್ದಾರೆ.
ಗುಬ್ಬಿ ಶ್ರೀನಿವಾಸ್ ಅವರು ಖಾಲಿ ಬ್ಯಾಲೆಟ್ ಹಾಕಿದ್ದಾರೋ ಇಲ್ಲವೋ ಎನ್ನುವುದು ಇನ್ನೂ ಅಧಿಕೃತವಾಗಿ ತಿಳಿದು ಬಂದಿಲ್ಲ. ಒಂದು ವೇಳೆ ಯಾರಿಗೂ ಮತ ಹಾಕದೇ ಖಾಲಿ ಬ್ಯಾಲೆಟ್ ಹಾಕಿದರೆ ಮತ ತಿರಸ್ಕೃತವಾಗಲಿದೆ. ಸಂಜೆ ಚುನಾವಣಾ ಎಣಿಕೆಯ ವೇಳೆ ಎಲ್ಲವೂ ಸ್ಪಷ್ಟವಾಗಲಿದೆ.