ಜೆಡಿಎಸ್ ಕಾರ್ಯಗಾರ | ಒಗ್ಗಟ್ಟಿನ ಮಂತ್ರ ಜಪಿಸಿದ ನಿಖಿಲ್-ಪ್ರಜ್ವಲ್

1 min read

ಜೆಡಿಎಸ್ ಕಾರ್ಯಗಾರ | ಒಗ್ಗಟ್ಟಿನ ಮಂತ್ರ ಜಪಿಸಿದ ನಿಖಿಲ್-ಪ್ರಜ್ವಲ್ Nikhil Kumaraswamy saaksha tv

ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ಬಿಡದಿ ತೋಟದಲ್ಲಿ ನಡೆಯುತ್ತಿರುವ ಜನತಾ ಪರ್ವ 1.0 ಹಾಗೂ ಮಿಷನ್ 123 ಜೆಡಿಎಸ್ ಕಾರ್ಯಗಾರದಲ್ಲಿ ಇಂದು ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ.

ಕಾರ್ಯಾಗಾರದಲ್ಲಿ ಮೊದಲು ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಅಣ್ಣ-ತಮ್ಮಂದಿರಾಗಿ ನಾವು ಯಾವತ್ತಿಗೂ ಒಂದೇ.

ರಾಜ್ಯದಲ್ಲಿ ಪಕ್ಷ ಕಟ್ಟಲು ನಾವಿಬ್ಬರು ಒಂದಾಗಿ ಇದ್ದೇವೆ ಎಂದು ಘೋಷಿಸಿದರು.

Nikhil Kumaraswamy saaksha tv

ಜೊತೆಗೆ ಮೈಸೂರಿನಿಂದ ಯುವಕರನ್ನು ಒಗ್ಗೂಡಿಸುವ ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದರು.

ಇದಾದ ಬಳಿಕ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನಾನು ಪ್ರಜ್ವಲ್, ಇವತ್ತು ಜೊತೆಯಲ್ಲಿದ್ದೇವೆ. ಯಾವತ್ತೂ ಇರುತ್ತೇವೆ. ಅನುಮಾನವೇ ಬೇಡ ಎಂದ್ರು.

ಹಾಗೇ 2023 ನಮ್ಮದೇ ಎಂಬ ಸಂಕಲ್ಪ ಬಲದಿಂದ ಮುಂದೆ ಹೋಗೋಣ. ನಮ್ಮ ಪಕ್ಷದ ಸರ್ಕಾರ ಬರಲು ಎಲ್ಲ ಶ್ರಮವನ್ನು ಹಾಕೋಣ ಎಂದು ಕಾರ್ಯಕರ್ತರಿಗೆ ಕರೆಕೊಟ್ಟರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd