ವಿಡಿಯೋ ಬಿಡುಗಡೆ ಮಾಡಿ ಸುಮಲತಾಗೆ ಶರವಣ ತಿರುಗೇಟು
ಬೆಂಗಳೂರು : ಅಂಬರೀಶ್ ಅಂತ್ಯಸಂಸ್ಕಾರ ಮಾಡಿದ ನಂತರ ಕುಮಾರಸ್ವಾಮಿ ಹಾಗೂ ದೇವೇಗೌಡರಿಗೆ ಧನ್ಯವಾದ ತಿಳಿಸಿದ ಸಂಸದೆ ಸುಮಲತಾ ಅಂಬರೀಶ್ ವಿಡಿಯೋ ಬಿಡುಗಡೆ ಮಾಡಿ ಜೆಡಿಎಸ್ ಮುಖಂಡ ಶರವಣ ತಿರುಗೇಟು ನೀಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸುಮಲತಾ, ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ ಕಿಡಿಕಾರುತ್ತಿರುವ ಬಗ್ಗೆ ಇಂದು ಶರವಣ ಅವರು ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಕೆಲವೊಂದು ವಿಡಿಯೋಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ನೀವು ಬೇಡ ಬೇಡ ಅಂದ್ರು ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡ್ತಾರೆ. ನೀವು ಕ್ಷಮೆ ಕೇಳುವ ವರೆಗೂ ನಮ್ಮ ಹೋರಾಟ ನಿಲ್ಲಲ್ಲ. ದೊಡ್ಡಣ್ಣ ಅವರ ಮುಖದ ಮೇಲೆ ಪೇಪರ್ ಎಸೆದರು ಅಂತ ಹೇಳ್ತಾ ಇದ್ದಾರೆ. ನೀವು ರಾಜಕೀಯ ಮಾತಾಡಬೇಡಿ. ನಿಮ್ಮ ಅಳಿಯನಿಗೆ ಚಿತ್ರದುರ್ಗದಲ್ಲಿ ಟಿಕೆಟ್ ಕೊಟ್ಟಾಗ ಕುಮಾರಸ್ವಾಮಿ ಇಂದ್ರ ಚಂದ್ರ ಅಂತ ದೊಡ್ಡಣ್ಣ ಹೊಗಳಿದ್ರೀ. ಆಗ ಸರಿ ಇತ್ತು. ಈಗ ಸರಿ ಇಲ್ವಾ ಎಂದು ಪ್ರಶ್ನಿಸಿದರು.
ಇನ್ನು ನೀವು ಕಲಾವಿದರು. ಸಿನೆಮಾದಲ್ಲಿ ಕಲಾವಿದರಾಗಿ, ರಾಜಕೀಯ ಕ್ಕೆ ಬಂದು ಟೀಕೆ ಮಾಡಿ. ನಿಮ್ಮಂತ ಹಿರಿಯರು ಈ ರೀತಿಯ ತಪ್ಪು ಹೇಳಿಕೆ ಕೊಡಬೇಡಿ. ನಿಮ್ಮ ಬಳಿ ಕುಮಾರಸ್ವಾಮಿ ಪೇಪರ್ ಎಸೆದ ಬಗ್ಗೆ ದಾಖಲೆ ಇದ್ದರೆ ಬಹಿರಂಗ ಪಡಿಸಿ ಎಂದು ದೊಡ್ಡಣ್ಣ ಅವರಿಗೆ ಟಿ ಎ ಶರವಣ್ ಸವಾಲು ಹಾಕಿದರು.
ಮುಂದುವರೆದು ಸಂಸದೆ ಸುಮಲತಾ ವಿರುದ್ಧ ಆಕ್ರೋಶ ಹೊರಹಾಕಿದ ಶರವಣ, ನಿಮ್ಮ ವೈಯುಕ್ತಿಕ ವಿಚಾರದ ಬಗ್ಗೆ ಮಾತನಾಡಲ್ಲ. ನೀವು ಎಲ್ಲಿ ಬಡ್ಡಿ ಕೊಡ್ತೀರಾ..? ತೆಗೆದುಕೊಳ್ತೀರ ಹೇಳಲ್ಲ. ನೀವು ಯಾವ ಎಪಿಸೋಡು ಬೇಕಾದರು ಮಾಡಿ. ದಾಖಲೆ ಇಲ್ಲದೆ ಕುಮಾರಣ್ಣ ಮಾತನಾಡಲ್ಲ. ಯಾವ ಟೈಮಲ್ಲಿ ಬಿಡಬೇಕೋ ಆಗ ಬಿಡ್ತಾರೆ ಎಂದು ಎಚ್ಚರಿಕೆ ನೀಡಿದರು.
ಇನ್ನು ಭಾಷೆ, ಸಂಸ್ಕøತಿ, ಸಂಸ್ಕಾರ ಎಲ್ಲವೂ ಕುಮಾರಸ್ವಾಮಿಗೆ ಗೊತ್ತಿದೆ. ನೀವು ಕ್ಷಮೆಯಾಚಿಸಬೇಕು ಎಂದು ಸಂಸದೆ ಸುಮಲತಾ, ರಾಕ್ ಲೈನ್ ಗೆ ಶರವಣ ಆಗ್ರಹಿಸಿದರು.