‘ಜೀವ್ನಾನೇ ನಾಟ್ಕ ಸ್ವಾಮಿ’ 4 ಆನ್ ಲೈನ್ ಚಿತ್ರೋತ್ಸವಗಳಿಗೆ ಆಯ್ಕೆ ..!
ವಿಭಿನ್ನ ಟೈಟಲ್ ನಿಂದಲೇ ಕನ್ನಡ ಸಿನಿಪ್ರಿಯರ ಗಮನ ಸೆಳೆಯುತ್ತಿರುವ ಸ್ಯಾಂಡಲ್ ವುಡ್ ನ ಹೊಸ ಸಿನಿಮಾ ಜೀವನಾನೇ ನಾಟ್ಕ ಸ್ವಾಮಿ. ರಾಜು ಭಂಡಾರಿ ರಾಜಾವರ್ತ ನಿರ್ದೇಶನದಲ್ಲಿ ಮೂಡಿಬಂದಿರುವ ಸಿನಿಮಾ ಬಿಡುಗಡೆ ಹೊಸ್ತಿಲ್ಲಿದೆ. ಅನೇಕ ವಿಶೇಷತೆಗಳಿಂದ ಕೂಡಿರುವ ಈ ಚಿತ್ರ 4 ಆನ್ ಲೈನ್ ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ.
ಇನ್ನೂ ಇತ್ತೀಚೆಗಷ್ಟೇ ಸಿನಿಮಾದ ಟೀಸರ್ ಅನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ರಿಲೀಸ್ ಮಾಡಿ ಸಿನಿತಂಡಕ್ಕೆ ಶುಭಹಾರೈಸಿದ್ದಾರೆ. ಇದೀಗ ಟೀಸರ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.
ಇದೀಗ ಈ ಸಿನಿಮಾ ಒಟ್ಟು ನಾಲ್ಕು ಆನ್ ಲೈನ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಅಂದ್ಹಾಗೆ ಕೊಲ್ಕತ್ತಾದಲ್ಲಿ ಆಯೋಜಿಸಲಾಗಿದ್ದ ಕಲ್ಟ್ ಕ್ರಿಕೆಟ್ ಅಂತರಾಷ್ಟ್ರೀಯ ಚಿತ್ರೋತ್ಸವ , ರಬೀಂದ್ರನಾಥ್ ಟಾಗೋರ್ ಅಂತರಾಷ್ಟ್ರೀಯ ಚಿತ್ರೋತ್ಸವ, ಲಂಡನ್ ನಲ್ಲಿ ನಡೆದ ಲಿಫ್ಟ್ ಆಫ್ ಆನ್ ಲೈನ್ ಚಿತ್ರೋತ್ಸವ, ಅಮೆರಿಕಾದ ಮಿಯಾಮಿ ಅಂತಾರಾಷ್ಟ್ರೀಯ ಆನ್ ಲೈನ್ ಚಿತ್ರೋತ್ಸವದಲ್ಲೂ ಆಯ್ಕೆಯಾಗಿ ಪ್ರದರ್ಶನಗೊಂಡಿದೆ.
ಜೀನ್ಸ್ ಹಾಕಲ್ಲ.. ಕುಣಿಯಲ್ಲ ಎಂದ ಪತ್ನಿಗೆ ತಲಾಖ್ ಕೊಟ್ಟ ಪತಿ ಮುಂದೇನ್ ಮಾಡ್ದ ನೋಡಿ..!
ಇನ್ನೂ ಕಲ್ಟ್ ಕ್ರಿಕೆಟ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಔಟ್ ಸ್ಟ್ಯಾಂಡಿಂಗ್ ಅಚೀವ್ ಮೆಂಟ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ ಸಿನಿಮಾ ತಂಡ. ಇತ್ತ ರಬೀಂದ್ರನಾಥ್ ಟಾಗೋರ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲೂ ಔಟ್ ಸ್ಟ್ಯಾಂಡಿಂಗ್ ಅಚೀವ್ ಮೆಂಟ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. ಇನ್ನೂ ಲಂಡನ್ ನಲ್ಲಿ ನಡೆದ ಲಿಫ್ಟ್ ಆಫ್ ಆನ್ ಲೈನ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪೈನಲ್ಸ್ ತಲುಪಿತ್ತು.
ಇನ್ನೂ ಈ ಚಿತ್ರದಲ್ಲಿ ಕನ್ನಡತಿ ಧಾರವಾಹಿಯಲ್ಲಿ ಮಿಂಚಿ ಮನೆಮಾತಾಗಿದ್ದ ನಟ ಕಿರಣ್ ರಾಜ್ ಹಾಗೂ ಸರಿಗಮಪ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಶ್ರೀ ಹರ್ಷ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ ಅನಿಕಾ ರಮ್ಯಾ, ಪವಿತ್ರಾ ಕೋಟ್ಯಾನ್ ಸೇರಿದಂತೆ ಹಲವರ ತಾರಾಬಳಗ ಚಿತ್ರದಲ್ಲಿದೆ. ಅತೀಶಯ ವೇದಾಂತ್ ಜೈನ್ ಅವರ ಸಂಗೀತ ಚಿತ್ರಕ್ಕಿದೆ. ಆರ್ಯ ಎಂಟರ್ ಟೈನ್ ಮೆಂಟ್ ಬ್ಯಾನರ್ ಅರ್ಪಿಸುವ ಸಿನಿಮಾಗೆ ಲಲಿತಾ ರಾಜಶೇಖರ್ ಶಿರಹಟ್ಟಿ ಅವರು ಬಂಡವಾಳ ಹೂಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel