ಜೀನ್ಸ್ ಹಾಕಲ್ಲ.. ಕುಣಿಯಲ್ಲ ಎಂದ ಪತ್ನಿಗೆ ತಲಾಖ್ ಕೊಟ್ಟ ಪತಿ ಮುಂದೇನ್ ಮಾಡ್ದ ನೋಡಿ..!
ಉತ್ತರಪ್ರದೇಶ: ಅನೈತಿಕ ಸಂಬಂಧ, ಆರ್ಥಿಕವಾಗಿ ಕಲಹ ಹೀಗೆ ನಾನಾ ಕಾರಣಗಳಿಂದಾಗಿ ಪತಿ ಪತ್ನಿ ಮಧ್ಯೆ ಡೈವೋರ್ಸ್ ಆಗುವಂತಹ ಪ್ರಕರಣಗಳು ಬೆಳಕಿಗೆ ಬಂದಿವೆ. ಆದ್ರೆ ಉತ್ತರಪ್ರದೇಶದ ಮೀರತ್ ನಲ್ಲಿ ಪತಿಯೋರ್ವ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ. ತ್ರಿವಳಿ ತಲಾಖ್ ಪದ್ದತಿ ರದ್ದಾಗಿದ್ರು ಅಲ್ಲಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆದ್ರೆ ಈತ ಪತ್ನಿಗೆ ತಲಾಖ್ ಕೊಟ್ಟ ಕಾರಣ ನಿಜಕ್ಕೂ ಆಶ್ಚರ್ಯವೆನ್ನಿಸುತ್ತೆ. ಇನ್ನೂ ತಲಾಖ್ ನೀಡಿದೋನೆ ಮನೆಗೆ ತೆರಳಿ ತನಗೆ ತಾನು ಬೆಂಕಿ ಹಚ್ಚಿಕೊಂಡಿದ್ದಾನೆ. ಕುಟುಂಬಸ್ಥರು ಮತ್ತು ಸ್ಥಳೀಯರು ಆತನನ್ನು ಬೆಂಕಿಯಿಂದ ಕಾಪಾಡಿ, ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತೊಂದು ಗುಜರಾತ್ ಆಗಲ್ಲ : ದೀದಿ ಗುಡುಗು..!
ಪತ್ನಿ ಜೀನ್ಸ್ ಹಾಕುವುದಿಲ್ಲ, ಮಾಡರ್ನ್ ಆಗಿ ಇರೋದಿಲ್ಲ, ಪಾರ್ಟಿಯಲ್ಲಿ ಡ್ಯಾನ್ಸ್ ಮಾಡುವುದಿಲ್ಲ ಅನ್ನೋ ಕಾರಣಕ್ಕೆ ಈತ ತಲಾಖ್ ನೀಡಿದ್ದಾನೆ. 8 ವರ್ಷಗಳ ಹಿಂದೆ ಆಕೆಯನ್ನ ಅನಾಸ್ ಮದುವೆಯಾಗಿದ್ದ. ಪ್ರತಿ ನಿತ್ಯ ಆಕೆಗೆ ಡ್ಯಾನ್ಸ್ ಮಾಡಲು, ಹಾಡಲು ಒತ್ತಾಯ ಮಾಡುತ್ತಿದ್ದ. ಆದರೆ, ಸಂಪ್ರದಾಯಸ್ಥ ಮುಸ್ಲಿಂ ಕುಟುಂಬದಿಂದ ಬಂದ ಆಕೆಗೆ ಇದೆಲ್ಲ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಇಬ್ಬರಿಗೂ ಮನಸ್ತಾಪ ಉಂಟಾಗಿತ್ತು. ಇನ್ನೂ ಹಾಡಲು, ಡ್ಯಾನ್ಸ್ ಮಾಡಲು, ಪಾರ್ಟಿಗಳಿಗೆ ತುಂಡುಡುಗೆ ಹಾಕಲು ಒತ್ತಾಯ ಮಾಡುತ್ತಾನೆಂದು ಅನಾಸ್ ವಿರುದ್ಧ ಪತ್ನಿ ಅನೇಕ ಬಾರಿ ಕುಟುಂಬದವರ ಮುಂದೆ ದೂರಿಟ್ಟಿದ್ದಳು. ಪಂಚಾಯತ್ನಲ್ಲೂ ನ್ಯಾಯ ಕೇಳಿದ್ದಳು. ಆದರೆ, ಏನೂ ಪ್ರಯೋಜನವಾಗಿರಲಿಲ್ಲ. ಕಡೆಗೆ ಈ ಮನಸ್ತಾಪವೇ ವಿಕೋಪಕ್ಕೆ ತಿರುಗಿ ತ್ರಿವಳಿ ತಲಾಖ್ ನೀಡಿ, ಬಳಿಕ ತನ್ನ ಮನೆಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದ. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








