ಜಾರ್ಖಂಡ್ ರೋಪ್ ವೇ ದುರಂತ – ವಾಯುಪಡೆ ಹೆಲಿಕಾಪ್ಟರ್ ಮೂಲಕ ರಕ್ಷಣೆ
ಜಾರ್ಖಂಡ್‌ನಲ್ಲಿ, ರಾಮನವಮಿ ಸಂದರ್ಭದಲ್ಲಿ ಸಂಭವಿಸಿದ ದಿಯೋಘರ್ ಜಿಲ್ಲೆಯ ತ್ರಿಕುಟ್ ಪರ್ವತ ರೋಪ್‌ವೇ ಅಪಘಾತದಲ್ಲಿ ಇನ್ನೂ ಅನೇಕ ಭಕ್ತರು ಸಿಕ್ಕಿಬಿದ್ದಿದ್ದರೆ, ಒಬ್ಬ ಮಹಿಳೆ ಸಾವನ್ನಪ್ಪಿದ್ದು,ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೋಪ್‌ವೇಯಲ್ಲಿ ಇನ್ನೂ ಸಿಲುಕಿರುವ ಭಕ್ತರು ಮತ್ತು ಪ್ರಯಾಣಿಕರನ್ನು ರಕ್ಷಿಸುವ ಪ್ರಯತ್ನಗಳನ್ನು ಸೇನೆ, ಭಾರತೀಯ ವಾಯುಪಡೆ ಮತ್ತು ಎನ್‌ಡಿಆರ್‌ಎಫ್ ತಂಡಗಳು ಜಂಟಿಯಾಗಿ ನಡೆಸುತ್ತಿವೆ.
NDRF ಮತ್ತು ಸ್ಥಳೀಯ ಆಡಳಿತ ಜಂಟಿಯಾಗಿ ರಾತ್ರಿಯಿಂದ ಸಿಕ್ಕಿಬಿದ್ದ ಪ್ರಯಾಣಿಕರನ್ನು ರಕ್ಷಿಸಲು ಪರಿಹಾರ ಕಾರ್ಯವನ್ನು ನಡೆಸುತ್ತಿದೆ. ಹೆಲಿಕಾಪ್ಟರ್ ಮೂಲಕ ಸಿಕ್ಕಿಬಿದ್ದ ಭಕ್ತರನ್ನು ಕರೆತರುವ ಮೂಲಕ ವಾಯುಪಡೆ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸ್ಥಳೀಯ ಸಂಸದ ನಿಶಿಕಾಂತ್ ದುಬೆ, ಜಿಲ್ಲಾಧಿಕಾರಿ ಮಂಜುನಾಥ ಭಜಂತ್ರಿ, ಪೊಲೀಸ್ ವರಿಷ್ಠಾಧಿಕಾರಿ ಸುಭಾಷ್ ಚಂದ್ರ ಲತ್ ಉಪಸ್ಥಿತರಿದ್ದಾರೆ.
ದಿಯೋಘರ್ ಜಿಲ್ಲೆಯ ತ್ರಿಕೂಟ ಪರ್ವತದ ರೋಪ್‌ವೇ ತಂತಿ ತುಂಡಾಗಿ ಉಂಟಾದ ಅವಘಡದ ಬಗ್ಗೆ ಮುಖ್ಯಮಂತ್ರಿ ಹೇಮಂತ್ ಸೊರೆನ್ ದುಃಖ ಮತ್ತು ಕಳವಳ ವ್ಯಕ್ತಪಡಿಸಿದ್ದಾರೆ. ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಯುದ್ಧದ ಆಧಾರದ ಮೇಲೆ ನಡೆಸಲಾಗುತ್ತಿದೆ ಎಂದು ಶ್ರೀ ಸೋರೆನ್ ಹೇಳಿದರು.