ವಿಜಯಪುರ: ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ತಮ್ಮ ಕನಸಿನ ಮನೆಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ರಾಜಕೀಯ ಗುರುಗಳ ಹೆಸರಿಟ್ಟು ಅಭಿಮಾನ ಮೆರೆದಿದ್ದಾರೆ.
ವಿಜಯಪುರ ನಗರ ಹೊರವಲಯದಲ್ಲಿ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ನೂತನ ಮನೆ ನಿರ್ಮಿಸಿದ್ದಾರೆ. ಈ ನಿವಾಸಕ್ಕೆ ತಮ್ಮ ರಾಜಕೀಯ ಗುರುಗಳಾದ ದಿ. ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್ ಪಟೇಲ್ ಅವರ ಹೆಸರನ್ನು ಇಟ್ಟಿದ್ದಾರೆ.
ಇಂದು(ಆ.29) ದಿ.ರಾಮಕೃಷ್ಣ ಹೆಗಡೆ ಅವರ ಜನ್ಮದಿನ. ಹಾಗಾಗಿ ಆ ನಾಯಕರ ಸ್ಮರಣಾರ್ಥ ತಮ್ಮ ಮನೆಗೆ ಅವರ ಹೆಸರನ್ನೇ ನಾಮಕರಣ ಮಾಡಿದ್ದಾರೆ.
ಗೃಹ, ಕಂದಾಯ, ಅಬಕಾರಿ, ಸಮಾಜ ಕಲ್ಯಾಣ ಸೇರಿದಂತೆ ನಾನಾ ಇಲಾಖೆಯ ಸಚಿವರಾಗಿದ್ದ ರಮೇಶ ಜಿಗಜಿಣಗಿ, ತಮ್ಮ ಮನೆಗೆ ರಾಜಕೀಯ ಗುರುಗಳ ಹೆಸರಿಡುವ ಮೂಲಕ ವಿನೂತನ ಹೆಜ್ಜೆ ಇಟ್ಟಿರುವುದು ಪ್ರಶಂಸೆಗೆ ಪಾತ್ರವಾಗಿದೆ.