ಜೂನ್ ತಿಂಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ನೀಡಿಕೆಯಲ್ಲಿ ಜಿಯೋಗೆ ಅಗ್ರ ಸ್ಥಾನ
ನವದೆಹಲಿ: ಕಳೆದ ಜೂನ್ ತಿಂಗಳಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ನೀಡಿಕೆಯಲ್ಲಿ ಜಿಯೋ ಅಗ್ರ ಸ್ಥಾನ ಪಡೆದಿದೆ. ಹೌದು ರಿಲಯನ್ಸ್ ಒಡೆತನದ ಜಿಯೋ ಪ್ರತಿ ಸೆಕೆಂಡ್‌ಗೆ ಸರಾಸರಿ 21.9 ಮೆಗಾಬೈಟ್ ಡೌನ್‌ಲೋಡ್ ವೇಗ ಕಾಯ್ದುಕೊಳ್ಳುವ ಮೂಲಕ 4ಜಿ ವಿಭಾಗದಲ್ಲಿ ಜೂನ್ ತಿಂಗಳಲ್ಲಿಯೂ ರಿಲಯನ್ಸ್ ಜಿಯೋ ತನ್ನ ಪಾರಮ್ಯ ಮೆರೆದಿದೆ.
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಬಿಡುಗಡೆ ಮಾಡಿರುವ ಇತ್ತೀಚಿನ ವರದಿಯಲ್ಲಿ, 4ಜಿ ವಿಭಾಗದಲ್ಲಿ ಜಿಯೋ ತನ್ನ ನಾಯಕತ್ವವನ್ನು ಮುಂದುವರಿಸಿದೆ. ಇನ್ನು 6.2 ಎಂಬಿಪಿಎಸ್ ಡೇಟಾ ವೇಗ ಹೊಂದಿರುವ ವೊಡಾಫೋನ್ ಐಡಿಯಾ ಅಪ್‌ಲೋಡ್ ವಿಭಾಗದಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ.
ಗಂಟೆಗೆ 16 ಲಕ್ಷ ಕಿ.ಮೀ ವೇಗದಲ್ಲಿ ಬರ್ತಿದೆ ಸೌರ ತೂಫಾನ್
ರಿಲಯನ್ಸ್ ಜಿಯೋದ 4ಜಿ ನೆಟ್‌ವರ್ಕ್ ವೇಗ ಅಲ್ಪಮಟ್ಟದಲ್ಲಿ ಹೆಚ್ಚಳ ಕಂಡಿದೆ. ಇದು ತನ್ನ ಅತಿ ಸಮೀಪದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ವೊಡಾಫೋನ್ ಐಡಿಯಾ ಜೂನ್ ತಿಂಗಳಲ್ಲಿ ಸರಾಸರಿ 6.5 ಎಂಬಿಪಿಎಸ್ ಡೌನ್‌ಲೋಡ್ ವೇಗ ಪ್ರದರ್ಶಿಸಿದೆ. ಏರ್ಟೆಲ್ 4ಜಿಯ ವೇಗ ಕೊಂಚಮಟ್ಟಿಗೆ ಸುಧಾರಣೆಯಾಗಿದೆ. ಆದರೆ ಅದು 5 ಎಂಬಿಪಿಎಸ್ ವೇಗದೊಂದಿಗೆ ಅತ್ಯಂತ ಕೆಳಗಿನ ಸ್ಥಾನದಲ್ಲಿಯೇ ಉಳಿದುಕೊಂಡಿದೆ ಎಂದು ಟ್ರಾಯ್ ಗುರುವಾರ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ಇನ್ನೂ ಟ್ರಾಯ್ ಪ್ರಕಾರ, 4.8 ಎಂಬಿಪಿಎಸ್ ವೇಗ ಇರುವ ರಿಲಯನ್ಸ್ ಜಿಯೋ ನಂತರದ ಸ್ಥಾನದಲ್ಲಿದ್ದರೆ, ವೊಡಾಫೋನ್ ಐಡಿಯಾ 6.2 ಎಂಬಿಪಿಎಸ್ ಸರಾಸರಿ ಅಪ್‌ಲೋಡ್ ವೇಗ ಹೊಂದಿದೆ. ಭಾರ್ತಿ ಏರ್‌ಟೆಲ್ 3.9 ಎಂಬಿಪಿಎಸ್ ವೇಗದೊಂದಿಗೆ ಕೊನೆಯ ಸ್ಥಾನದಲ್ಲಿದೆ. ಸರ್ಕಾರಿ ಸ್ವಾಮ್ಯದ ದೂರಸಂರ್ಪಕ ಸಂಸ್ಥೆ ಬಿಎಸ್‌ಎನ್‌ಎಲ್, ಆಯ್ದ ಪ್ರದೇಶಗಳಲ್ಲಿ 4ಜಿ ಸಂಪರ್ಕವನ್ನು ಕಲ್ಪಿಸಿದೆ. ಆದರೆ, ಅದರ ನೆಟ್‌ವರ್ಕ್ ವೇಗವನ್ನು ಟ್ರಾಯ್ ಚಾರ್ಟ್‌ನಲ್ಲಿ ನಮೂದಿಸಿಲ್ಲ.