ಜಿಯೋ ಹೊಸ ರೀಚಾರ್ಜ್ ಪ್ಲಾನ್ – 333 ರೂ ನೊಂದಿಗೆ 3 ತಿಂಗಳ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ…
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೊಸ ಪ್ರಿ-ಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ, ಈ ಹೊಸ ಪ್ಲಾನ್ ನೊಂದಿಗೆ 3 ತಿಂಗಳ ವರೆಗೆ ಡಿಸ್ನಿ + ಹಾಟ್‌ಸ್ಟಾರ್‌ನ ಈ ಚಂದಾದಾರಿಕೆ ಪಡೆಯಬಹುದು. ಜಿಯೋ ಹೊಸ ಪ್ಲಾನ್ ನ ಬೆಲೆ ರೂ 333, ಇದರೊಂದಿಗೆ ನೀವು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನ ಪಡೆಯುತ್ತೀರಿ.
ಜಿಯೋನ ಪ್ಲಾನ್ ಮಾನ್ಯತೆ 28 ದಿನಗಳವರೆಗೆ ಇದ್ದು ಪ್ರತಿದಿನ 1.5 GB ಡೇಟಾವನ್ನು ಪಡೆಯಬಹುದು. 333 ರೂಗಳ ಪ್ಲಾನ್ ಹೊರತುಪಡಿಸಿ, ಜಿಯೋ 583 ಮತ್ತು 783 ರೂ ಗಳ ಎರಡು ಯೋಜನೆಗಳನ್ನು ಪರಿಚಯಿಸಿದೆ. ಈ ಯೋಜನೆಗಳು ಕ್ರಮವಾಗಿ 56 ಮತ್ತು 84 ದಿನಗಳ ವ್ಯಾಲಿಡಿಟಿಯಲ್ಲಿ ಲಭ್ಯವಿರುತ್ತದೆ.
ಜಿಯೋ ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿ ಜಿಯೋ ಸಂಖ್ಯೆಯೊಂದಿಗೆ ಲಾಗಿನ್ ಮಾಡಬೇಕು. ಜಿಯೋ ನಂಬರ್‌ನಲ್ಲಿ OTP ಯೊಂದಿಗೆ ಲಾಗ್ ಇನ್ ಮಾಡಿದ ನಂತರ, ಗ್ರಾಹಕರು Disney + Hotstar ಅನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ರೀಚಾರ್ಜ್ ಪ್ಲಾನ್ ವ್ಯಾಲಿಡಿಟಿ 28 ದಿನಗಳು ಆದರೆ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯು ಮೂರು ತಿಂಗಳವರೆಗೆ ಇರುತ್ತದೆ.
ಕೆಲವು ದಿನಗಳ ಹಿಂದೆ ಬಂದ ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ (TRAI) ನ ಹೊಸ ವರದಿಯ ಪ್ರಕಾರ, ಫೆಬ್ರವರಿ 2022 ರಲ್ಲಿ ರಿಲಯನ್ಸ್ ಜಿಯೋ 4G ಡೌನ್‌ಲೋಡ್ ವೇಗದ ಸ್ಪರ್ಧೆಯಲ್ಲಿ ಗೆದ್ದಿದೆ. ಆದರೆ ಗ್ರಾಹಕರ ವಿಷಯದಲ್ಲಿ, ಜಿಯೋ ಈ ಬಾರಿಯೂ ನಷ್ಟ ಅನುಭವಿಸಿದೆ. . TRAI ವರದಿಯ ಪ್ರಕಾರ, ಫೆಬ್ರವರಿ 2022 ರಲ್ಲಿ 36.6 ಲಕ್ಷ ಗ್ರಾಹಕರು ಜಿಯೋವನ್ನು ತೊರೆದಿದ್ದಾರೆ, ಆದರೆ ಜಿಯೋಗೆ ಹೋಲಿಸಿದರೆ ಏರ್‌ಟೆಲ್ ಬಹಳಷ್ಟು ಪ್ರಯೋಜನವನ್ನು ಪಡೆದುಕೊಂಡಿದೆ.