ADVERTISEMENT
Monday, October 26, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಜಿಯೋ ಪ್ಲಾಟ್‌ಫಾರ್ಮ್ಸ್ ಐಪಿಒ ಮೊದಲ ದಿನವೇ ದಾಖಲೆ: ಸಾಂಸ್ಥಿಕ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ

admin by admin
October 26, 2026
in National, Newsbeat, ದೇಶ - ವಿದೇಶ
jio-platforms-ipo-record-first-day-demand-3-2-lakh-crore-2026

jio-platforms-ipo-record-first-day-demand-3-2-lakh-crore-2026

Share on FacebookShare on TwitterShare on WhatsappShare on Telegram

* ಭಾರತದ ಇದುವರೆಗಿನ ಅತಿ ದೊಡ್ಡ ಐಪಿಒ (₹30,213 ಕೋಟಿ)
* ಅತಿ ಕಡಿಮೆ ಸಮಯದಲ್ಲಿ ಸಂಪೂರ್ಣ ಭರ್ತಿಯಾದ ಐಪಿಒ
* ಮೊದಲ ದಿನವೇ ₹6,900 ಕೋಟಿಗೂ ಅಧಿಕ ಹೂಡಿಕೆಯೊಂದಿಗೆ ಸಾರ್ವಕಾಲಿಕ ದಾಖಲೆ ಬರೆದ ಚಿಲ್ಲರೆ (ರೀಟೇಲ್) ಹೂಡಿಕೆದಾರರು
* ಕ್ಯೂ ಐಬಿ, ಎಚ್‌ ಎನ್‌ ಐ ನೌಕರರು ಮತ್ತು ಷೇರುದಾರರ ಎಲ್ಲಾ ವಿಭಾಗಗಳೂ ನಿರೀಕ್ಷೆಗಿಂತ ಹೆಚ್ಚು ಭರ್ತಿ
* ಆಂಕರ್ ಹೂಡಿಕೆದಾರರಿಂದ 30 ಪಟ್ಟು ಹೆಚ್ಚು ಬೇಡಿಕೆ
* ಆಂಕರ್ ಬುಕ್ ಸೇರಿ ಈ ಐಪಿಒಗೆ ಒಟ್ಟು ಬೇಡಿಕೆ ₹3.2 ಲಕ್ಷ ಕೋಟಿ ತಲುಪಿದೆ

ಮುಂಬಯಿ: ಭಾರತದ ಬಂಡವಾಳ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸುತ್ತಿರುವ, ದೇಶದ ಅತಿ ದೊಡ್ಡ ಸಾರ್ವಜನಿಕ ಕೊಡುಗೆಯಾದ ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್ (ಜೆಪಿಎಲ್) ಐಪಿಒ ತನ್ನ ಮೊದಲ ದಿನವೇ ಹಲವು ದಾಖಲೆಗಳನ್ನು ಸೃಷ್ಟಿಸಿದೆ. ಸಾಂಸ್ಥಿಕ ಹೂಡಿಕೆದಾರರ ಭಾರಿ ಬೇಡಿಕೆಯಿಂದಾಗಿ ಇದು 3.2 ಪಟ್ಟು ಅಧಿಕ ಭರ್ತಿಯಾಗಿದೆ.

Related posts

marco-rubio-sergio-gore-visit-reliance-jamnagar-refinery-mukesh-ambani

ಜಾಮ್ ನಗರದಲ್ಲಿನ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಭೇಟಿ

October 26, 2026
jio-platforms-ipo-day-one-subscription-20-lakh-applications-2026

ದೇಶದ ಅತಿ ದೊಡ್ಡ ‘ಜಿಯೋ ಐಪಿಒ’ ಅಬ್ಬರದ ಆರಂಭ: ಕೇವಲ 4 ಗಂಟೆಗಳಲ್ಲಿ 1.66 ಪಟ್ಟು ಮುಂಗಡ, 20 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ!

October 26, 2026

ಬಿಡ್ಡಿಂಗ್ ಶುರುವಾದ ಕೇವಲ 100 ನಿಮಿಷಗಳಲ್ಲಿಯೇ 100% ಪೂರ್ಣಗೊಂಡಿದ್ದು, ಇದು ದಲಾಲ್ ಸ್ಟ್ರೀಟ್ ಇತಿಹಾಸದಲ್ಲೇ ಅತ್ಯಂತ ವೇಗವಾಗಿ ಸಂಪೂರ್ಣ ಭರ್ತಿಯಾದ ಮೆಗಾ IPO ಎನಿಸಿದೆ. ಅರ್ಹ ಸಾಂಸ್ಥಿಕ ಹೂಡಿಕೆದಾರರ (QIB) ವಿಭಾಗದಲ್ಲಿ ಮೊದಲ ದಿನದ ಅಂತ್ಯಕ್ಕೆ 9.42 ಪಟ್ಟು ಹೆಚ್ಚು ಬಿಡ್‌ಗಳು ಬಂದಿವೆ. ಜಾಗತಿಕ ಮತ್ತು ದೇಶೀಯ ಮ್ಯೂಚುಯಲ್ ಫಂಡ್‌ಗಳು ಮುಗಿಬಿದ್ದ ಪರಿಣಾಮ, ಆಂಕರ್ ಹೂಡಿಕೆದಾರರ ವಿಭಾಗದಲ್ಲೂ 30 ಪಟ್ಟು ಅಧಿಕ ಬೇಡಿಕೆ ಕಂಡುಬಂದಿತ್ತು. ಚಿಲ್ಲರೆ ಹೂಡಿಕೆದಾರರ ವಿಭಾಗವೊಂದರಲ್ಲೇ ₹6,900 ಕೋಟಿಗೂ ಅಧಿಕ ಬಿಡ್‌ಗಳು ಬಂದಿದ್ದು, ಭಾರತದ ಮಾರುಕಟ್ಟೆ ಇತಿಹಾಸದಲ್ಲಿ ಮೊದಲ ದಿನವೇ ಬಂದ ಅತಿ ದೊಡ್ಡ ಚಿಲ್ಲರೆ ಹೂಡಿಕೆ ಇದಾಗಿದೆ.

ಇತರ ದೊಡ್ಡ IPOಗಳಿಗಿಂತ ಜಿಯೋ ವೇಗ ಹೇಗಿದೆ?
ಇತರ ಮೆಗಾ IPOಗಳಿಗೆ ಹೋಲಿಸಿದರೆ ಜಿಯೋ ಪ್ಲಾಟ್‌ಫಾರ್ಮ್ಸ್ ತೋರಿಸಿದ ವೇಗ ಅಸಾಧಾರಣವಾಗಿದೆ.

ಜಿಯೋ ಪ್ಲಾಟ್‌ಫಾರ್ಮ್ಸ್: 100 ನಿಮಿಷಗಳಲ್ಲಿ 100% ಭರ್ತಿ.
ಬಜಾಜ್ ಹೌಸಿಂಗ್ ಫೈನಾನ್ಸ್: ಮೊದಲ ದಿನ ಮಧ್ಯಾಹ್ನ 2:00 ಗಂಟೆಗೆ ಪೂರ್ಣಗೊಂಡಿತ್ತು.
ಎಲ್‌ಜಿ ಎಲೆಕ್ಟ್ರಾನಿಕ್ಸ್: ಮೊದಲ ದಿನದ ಕೊನೆಗೆ ಪೂರ್ಣಗೊಂಡಿತು.
ಹುಂಡೈ ಮೋಟರ್ ಇಂಡಿಯಾ: ಮೊದಲ ದಿನದ ಕೊನೆಗೆ ಕೇವಲ 18% ಮಾತ್ರ ಭರ್ತಿಯಾಗಿತ್ತು.

ಮತ್ತೊಂದು ಪ್ರಮುಖ ವ್ಯತ್ಯಾಸವೆಂದರೆ, ಹುಂಡೈ ಮತ್ತು ಎಲ್‌ಜಿ ಕಂಪನಿಗಳ IPOಗಳು ‘ಆಫರ್ ಫಾರ್ ಸೇಲ್’ (ಒಎಫ್‌ ಎಸ್) ಆಗಿದ್ದವು (ಅಂದರೆ ಹಣ ವಿದೇಶಿ ಮಾತೃಸಂಸ್ಥೆಗೆ ಹೋಗುತ್ತದೆ). ಆದರೆ ಜಿಯೋ ಪ್ಲಾಟ್‌ಫಾರ್ಮ್ಸ್‌ನದ್ದು ಸಂಪೂರ್ಣವಾಗಿ ಹೊಸ ಷೇರುಗಳ ಬಿಡುಗಡೆಯಾಗಿದೆ (100% ಹೊಸ ಬಿಡುಗಡೆ). ಇಲ್ಲಿ ಬರುವ ಪ್ರತಿಯೊಂದು ರೂಪಾಯಿಯೂ ಕಂಪನಿಯ ಅಭಿವೃದ್ಧಿಗೆ, ಅಂದರೆ ಮುಂದಿನ ತಲೆಮಾರಿನ ಡಿಜಿಟಲ್ ನೆಟ್‌ವರ್ಕ್, ಕ್ಲೌಡ್ ತಂತ್ರಜ್ಞಾನ ಮತ್ತು AI ಪ್ಲಾಟ್‌ಫಾರ್ಮ್‌ಗಳ ವಿಸ್ತರಣೆಗೆ ಬಳಕೆಯಾಗಲಿದೆ.

ಮುಖ್ಯ ದಿನಾಂಕಗಳು:

IPO ಮುಕ್ತಾಯ : ಶುಕ್ರವಾರ, ಅಕ್ಟೋಬರ್ 23, 2026
ಷೇರು ಹಂಚಿಕೆ : ಸೋಮವಾರ, ಅಕ್ಟೋಬರ್ 26, 2026
ಡಿಮ್ಯಾಟ್ ಖಾತೆಗೆ ಜಮಾ : ಮಂಗಳವಾರ, ಅಕ್ಟೋಬರ್ 27, 2026
ಮಾರುಕಟ್ಟೆಯಲ್ಲಿ ಲಿಸ್ಟಿಂಗ್ : ಬುಧವಾರ, ಅಕ್ಟೋಬರ್ 28, 2026 (ಬಿಎಸ್‌ ಇ ಮತ್ತು ಎನ್‌ ಎಸ್‌ ಇ)

ಇನ್ನು ಎರಡು ದಿನಗಳ ಬಿಡ್ಡಿಂಗ್ ಬಾಕಿ ಇರುವುದರಿಂದ ಒಟ್ಟು ಹೂಡಿಕೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಈ ಲಿಸ್ಟಿಂಗ್ ಮೂಲಕ ಜಿಯೋ ಪ್ಲಾಟ್‌ಫಾರ್ಮ್ಸ್ ಭಾರತದ ಅಗ್ರ 5 ಅತ್ಯಮೂಲ್ಯ ಕಂಪನಿಗಳ ಸಾಲಿಗೆ ಸೇರಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ShareTweetSendShare
Join us on:

Related Posts

marco-rubio-sergio-gore-visit-reliance-jamnagar-refinery-mukesh-ambani

ಜಾಮ್ ನಗರದಲ್ಲಿನ ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರಕ್ಕೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಭೇಟಿ

by admin
October 26, 2026
0

  ಜಾಮ್‌ನಗರ -  ವಿಶ್ವದ ಅತಿದೊಡ್ಡ ತೈಲ ಸಂಸ್ಕರಣಾಗಾರ ಇರುವಂಥ ಜಾಮ್‌ನಗರಕ್ಕೆ ಆಗಮಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಮತ್ತು ಭಾರತದಲ್ಲಿನ ಅಮೆರಿಕದ ರಾಯಭಾರಿ ಸರ್ಜಿಯೊ...

jio-platforms-ipo-day-one-subscription-20-lakh-applications-2026

ದೇಶದ ಅತಿ ದೊಡ್ಡ ‘ಜಿಯೋ ಐಪಿಒ’ ಅಬ್ಬರದ ಆರಂಭ: ಕೇವಲ 4 ಗಂಟೆಗಳಲ್ಲಿ 1.66 ಪಟ್ಟು ಮುಂಗಡ, 20 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆ!

by admin
October 26, 2026
0

- ಜಿಯೋ ಐಪಿಒಗೆ ಹೂಡಿಕೆದಾರರಿಂದ ಭರ್ಜರಿ ಬೇಡಿಕೆ, ಕ್ಯೂಐಬಿ ವಿಭಾಗವು 3.68 ಪಟ್ಟು ಸಬ್‌ಸ್ಕ್ರೈಬ್ - ಮೊದಲ ದಿನವೇ 10 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆ, ಆಂಕರ್...

jio-platforms-ipo-anchor-investor-bids-2-5-lakh-crore-2026

ಜಿಯೋ ಪ್ಲಾಟ್‌ಫಾರ್ಮ್ಸ್ IPO ಧಮಾಕಾ! ಆಂಕರ್ ಬುಕ್‌ನಲ್ಲಿ ದಾಖಲೆಯ ₹2.5 ಲಕ್ಷ ಕೋಟಿ ಬಿಡ್; ಹೂಡಿಕೆದಾರರ ಭಾರಿ ಪೈಪೋಟಿ!

by admin
October 26, 2026
0

ಹೊಸದಿಲ್ಲಿ   ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ತರಲು ಸಜ್ಜಾಗಿರುವ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಪ್ಲಾಟ್‌ಫಾರ್ಮ್ಸ್ ಸಾರ್ವಜನಿಕ ಚಂದಾದಾರಿಕೆಗೆ ಬಾಗಿಲು ತೆರೆಯುವ ಮುನ್ನವೇ ಷೇರು ಮಾರುಕಟ್ಟೆಯಲ್ಲಿ...

jio-global-expansion-us-germany-12-partnerships-1-5-billion-users

ಅಮೆರಿಕ, ಜರ್ಮನಿಯತ್ತ ಜಿಯೋ ಚಿತ್ತ, 12 ಪಾಲುದಾರರ ಜತೆಗೆ 1.5 ಶತಕೋಟಿ ಗ್ರಾಹಕರನ್ನು ಹೊಂದುವ ಗುರಿ

by admin
October 26, 2026
0

* ಭಾರತದಿಂದ ಜಾಗತಿಕ ಮಾರುಕಟ್ಟೆಗೆ ತಂತ್ರಜ್ಞಾನ ವಿಸ್ತರಣೆಗೆ ಜಿಯೋ ಯೋಜನೆ * ಅಭಿವೃದ್ಧಿ ಹೊಂದಿದ ಆರ್ಥಿಕತೆ, ಪೂರ್ವ ಏಷ್ಯಾ, ದಕ್ಷಿಣ ಅಮೆರಿಕ ಮತ್ತು ಆಫ್ರಿಕಾದ್ಯಂತ ಅವಕಾಶಗಳ ಶೋಧ...

mahela-jayawardene-steps-down-mumbai-indians-head-coach

ಮುಂಬೈ ಇಂಡಿಯನ್ಸ್‌ ಮುಖ್ಯ ಕೋಚ್ ಹುದ್ದೆ ತ್ಯಜಿಸಿದ ಮಹೇಲಾ ಜಯವರ್ಧನೆ

by admin
October 26, 2026
0

ಮುಂಬೈ, 2026 ಅಕ್ಟೋಬರ್ 17: ಐದು ಬಾರಿಯ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಮಹೇಲಾ ಜಯವರ್ಧನೆ ಅವರು ಕೆಳಗಿಳಿದಿದ್ದಾರೆ. ಇದರೊಂದಿಗೆ ಎಂಐ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram