JOB | 778 ಉಪನ್ಯಾಸಕ ಹುದ್ದೆ ಭರ್ತಿಗೆ ಅನುಮತಿ
ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳು
778 ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ
10 ವಿಷಯಗಳ 778 ಹುದ್ದೆಗಳಿಗೆ ನೇರ ನೇಮಕಾತಿ
ಉಪನ್ಯಾಸಕ ಹುದ್ದೆ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್
ಬೆಂಗಳೂರು : ಪಿಯು ಕಾಲೇಜು ಉಪನ್ಯಾಸಕರ ಹುದ್ದೆ ಆಕಾಂಕ್ಷಿಗಳಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ 778 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು 10 ವಿಷಯಗಳಲ್ಲಿ ಖಾಲಿ ಇರುವ 778 ಹುದ್ದೆಗಳ ಭರ್ತಿಗೆ ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿತ್ತು.
ಇದಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರದಲ್ಲಿಯೇ ನೇಮಕಾತಿ ಪಕ್ರಿಯೆಗೆ ಚಾಲನೆ ಸಿಗುವ ಸಾಧ್ಯತೆಗಳಿವೆ.
ವಿಷಯವಾರು ಹುದ್ದೆ ವಿವರಗಳ ವಿವರ ಹೀಗಿದೆ : ಕನ್ನಡ – 100, ಇಂಗ್ಲೀಷ್ 120, ಇತಿಹಾಸ 120, ಅರ್ಥಶಾಸ್ತ್ರ 180, ಭೂಗೋಳಶಾಸ್ತ್ರ 20, ವಾಣಿಜ್ಯಶಾಸ್ತ್ರ 80, ಸಮಾಜಶಾಸ್ತ್ರ 75, ರಾಜ್ಯಶಾಸ್ತ್ರ 75, ಮನಃಶಾಸ್ತ್ರ 2, ಗಣಕ ವಿಜ್ಞಾನ 6 ಸೇರಿದಂತೆ 778 ಹುದ್ದೆಗಳ ಭರ್ತಿಗೆ ಇಲಾಖೆ ಅನುಮತಿ ನೀಡಿದೆ.