job update ಖಾಲಿ ಇರುವ ಆರೋಗ್ಯ ಇಲಾಖೆಯಲ್ಲಿನ 1,048 ಹುದ್ದೆಗಲ ಮಾಹಿತಿ ಇಲ್ಲಿದ್ದೆ.
ಈ ಹುದ್ದೆಗಳು ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಸಂಭಂದಿಸಿರುವುದಗಿದೆ. ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ ಎಂದು ನೋಡುವುದಾದರೆ
ಹಾಸನದಲ್ಲಿ 326 ಹುದ್ದೆ,
ರಾಮನಗರದಲ್ಲಿ 154 ಹುದ್ದೆ
ತುಮಕೂರಿನಲ್ಲಿ 99 ಹುದ್ದೆ
ಶಿವಮೊಗ್ಗದಲ್ಲಿ 72 ಹುದ್ದೆ,
ವಿಜಯಪುರದಲ್ಲಿ 53 ಹುದ್ದೆ
ಚಿಕ್ಕಮಗಳೂರಿನಲ್ಲಿ 51 ಹುದ್ದೆ
ದಕ್ಷಿಣ ಕನ್ನಡದಲ್ಲಿ 39 ಹುದ್ದೆಗಳು
ಬೆಂಗಳೂರು ನಗರದಲ್ಲಿ 32 ಹುದ್ದೆ
ಚಿಕ್ಕಬಳ್ಳಾಪುರದಲ್ಲಿ 22 ಹುದ್ದೆ
ಬೆಳಗಾವಿಯಲ್ಲಿ 20 ಹುದ್ದೆ
ಬಳ್ಳಾರಿಯಲ್ಲಿ 17 ಹುದ್ದೆ
ಮಂಡ್ಯದಲ್ಲಿ 11 ಹುದ್ದೆ
ಬೆಂಗಳೂರು ಗ್ರಾಮಾಂತರದಲ್ಲಿ 9 ಹುದ್ದೆ
ಸೇರಿದಂತೆ ರಾಜ್ಯಾದ್ಯಂತ ಹಲವಾರು ಹುದ್ದೆಗಳು ಖಾಲಿ ಇವೆ. ಹಚ್ಚಿನ ಮಾಹಿತಿಗಾಗಿ
ಸಾಮಾನ್ಯ ಅಭ್ಯರ್ಥಿಗೆ ಕನಿಷ್ಟ18 ವರ್ಷ, ಗರಿಷ್ಟ35 ವರ್ಷ OBC ವರ್ಗದ ಅಭ್ಯರ್ಥಿಗೆ 3 ವರ್ಷ ವಯೋ ಸಡಿಲಿಕೆ ಎಸ್‌ಸಿ/ಎಸ್‌ಟಿ, ಪ್ರವರ್ಗ 1 ಅಭ್ಯರ್ಥಿಗೆ 40 ವರ್ಷದವರೆಗೆ ಅರ್ಜಿ ಸಲ್ಲಿಸ ಬಹುದು .
ವಿದ್ಯಾರ್ಹತೆ ಕನಿಷ್ಟನರ್ಸಿಂಗ್‌ನಲ್ಲಿ ಬಿ.ಎಸ್‌ಸಿ ಪದವಿ ಪಡೆದಿರಬೇಕಿದ್ದು, ನರ್ಸಿಂಗ್ ನಲ್ಲಿ ತತ್ಸಮಾನವಾದ ವಿದ್ರ್ಯಾಹತೆ ಹೊಂದಿರುವವರೂ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಕೆ, ಅಯ್ಕೆ ವಿಧಾನ:
ಕರ್ನಾಟಕ ಆರೋಗ್ಯ ಇಲಾಖೆಗೆ ಸಂಬಂಧಿಸಿದ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ನೋಂದಣಿಯಾಗಿ ಬಳಿಕ ಆನ್‌ಲೈನ್ ಅರ್ಜಿಯನ್ನು ಸರಿಯಾದ ಮಾಹಿತಿಗಳಿಂದ ಭರ್ತಿಮಾಡಬೇಕು.
ಅರ್ಜಿಯೋಂದಿಗೆ ಆಧಾರ್‌ಕಾರ್ಡು, ಪದವಿ ಅಂಕಪಟ್ಟಿಗಳು, sslc ಹಾಗೂ puc ಅಂಕಪಟ್ಟಿ, ಮೀಸಲಾತಿ/ಜಾತಿ ಪ್ರಮಾಣ ಪತ್ರ, ಇತರೆ ಯಾವುದೇ ಪ್ರಮುಖ ದಾಖಲೆಗಳು ಇದ್ದಲ್ಲಿ ಅವುಗಳದ್ದೆಲ್ಲವನ್ನೂ ನಕಲಿ ಪ್ರತಿಗಳನ್ನಾಗಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳನ್ನು ಆನ್‌ಲೈನ್ ಪರೀಕ್ಷೆ ನಡೆಸಿ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ಆಯ್ಕೆಯಾದ ಅಭ್ಯರ್ಥಿಗಳ ವೇತನ ಮಾಸಿಕವಾಗಿ 22,000 ರುಪಾಯಿಯಿಂದ 24,200 ರುಪಾಯಿವರೆಗೆ ನೀಡಲಾಗುತ್ತದೆ. ಕಾರ್ಯಕ್ಷಮತೆ ಆಧರಿಸಿ ಪ್ರೋತ್ಸಾಹಕವಾಗಿ ಹೆಚ್ಚುವರಿಯಾಗಿ 8,000 ಹೆಚ್ಚು ವೇತನ ನೀಡಲಾಗುತ್ತದೆ.
ಇತರೆ ಅರ್ಹತೆಗಳು: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಕರ್ನಾಟಕದ ನಿವಾಸಿಗಳೇ ಆಗಿರಬೇಕು.
ಈ ಕುರಿತು ಕಳೆದ 10 ವರ್ಷಗಳಿಂದ ರಾಜ್ಯದಲ್ಲಿ ವಾಸವಿರುವ ದಾಖಲೆಯನ್ನು ಅರ್ಜಿ ಜೊತೆಗೆ ಲಗತ್ತಿಬಸಬೇಕಿದೆ. ಕನ್ನಡ ಬರೆಯಲು ಹಾಗೂ ಓದುವುದರ ಜೊತೆಗೆ ಕಂಪ್ಯೂಟರ್ ಜ್ಞಾನವೂ ಇರಬೇಕಿದೆ.
*ಆರ್ಜಿ ಸಲ್ಲಿಕೆ ನವೆಂಬರ್ 30ರಂದು ಕೊನೆಯ ದಿನವಾಗಿದೆ.
*ಹೆಚ್ಚಿನ ಮಾಹಿತಿಗಾಗಿ https://karunadu.karnataka.gov.in/hfw/pages/home.aspx
*ಸಾಮಾನ್ಯ ಅಭ್ಯರ್ಥಿಗೆ 550 ಅರ್ಜಿ ಶುಲ್ಕ
* ಕಾರ್ಯಕ್ಷಮತೆ ಆಧರಿಸಿ ವೇತನದೊಂದಿಗೆ ವಿಶೇಷ ಭತ್ಯೆ








