Jobs : ದೇಶಾದ್ಯಂತ 58,000 ಕ್ಕೂ ಹೆಚ್ಚು ಹುದ್ದೆಗಳು ಖಾಲಿ – ಶಿಕ್ಷಣ ಇಲಾಖೆ
ಕೇಂದ್ರ ಶಿಕ್ಷಣ ಸಚಿವಾಲಯದ ರಾಜ್ಯ ಖಾತೆ ಸಚಿವ ಸುಭಾಶ್ ಸರ್ಕಾರ್ ಅವರು ಲೋಕಸಭೆಯಲ್ಲಿ ದೇಶಾದ್ಯಂತ ಕೇಂದ್ರೀಯ ವಿದ್ಯಾಲಯಗಳು , ನವೋದಯ ಶಾಲೆಗಳು ಮತ್ತು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಲಿಖಿತ ುತ್ತರ ನೀಡಿದ್ದಾರೆ..
ಅವರು ನೀಡಿರುವ ಮಾಹಿತಿಯ ಪ್ರಕಾರ ದೇಶಾದ್ಯಂತ 58000 ಕ್ಕೂ ಅಧಿಕ ಬೋಧಕ ಹಾಗೂ ಬೋಧಕೇತ್ತರ ಹುದ್ದೆಗಳು ಖಾಲಿ ಇವೆ.. ಕೇಂದ್ರ ಶಿಕ್ಷಣ ಸಚಿವಾಲಯವು ಈ ಬಗ್ಗೆ ಮಾಹಿತಿ ನೀಡಿದೆ..
ಕೇಂದ್ರೀಯ ವಿದ್ಯಾಲಯಗಳು – ಬೋಧಕ – 12 , 099 , ಬೋಧಕೇತ್ತರ – 1,312
ಜವಾಹರ ನವೋದಯ ವಿದ್ಯಾಲಯಗಳು – ಬೋಧಕ – 3,271 , ಬೋಧಕೇತ್ತರ – 1,756
ಉನ್ನತ ಶಿಕ್ಷಣ ಸಂಸ್ಥೆಗಳ ಪೈಕಿ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಅತಿ ಹೆಚ್ಚು ಹುದ್ದೆಗಳು ಖಾಲಿಯಿವೆ. ಒಟ್ಟು 6,180 ಬೋಧಕ 15,798 ಬೋಧಕೇತರ ಹುದ್ದೆಗಳು ಖಾಲಿಯಿವೆ..
ಭಾರತೀಯ ತಾಂತ್ರಿಕ ಸಂಸ್ಥೆಗಳಲ್ಲಿ 4,425 ಬೋಧಕ ಹಾಗೂ 5,052 ಬೋಧಕೇತರ ಹುದ್ದೆಗಳು ಖಾಲಿಯಿವೆ…
ರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳು ಹಾಗೂ ಭಾರತೀಯ ಎಂಜಿನಿಯರಿಂಗ್ ವಿಜ್ಞಾನ ಮತ್ತು ತಾಂತ್ರಿಕ ಸಂಸ್ಥೆಗಳಲ್ಲಿ 2,089 ಬೋಧಕ ಮತ್ತು 3,773 ಬೋಧಕೇತರ ಹುದ್ದೆಗಳು ಖಾಲಿ ಇವೆ.
ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ 353 ಬೋಧಕ ಮತ್ತು 625 ಬೋಧಕೇತರ ಹುದ್ದೆಗಳು ಭರ್ತಿಯಾಗಬೇಕಿವೆ.
Jobs : more than 58, 000 vacancies Are there all over india in education sector