ಬೈಡನ್ ಆಡಳಿತದಲ್ಲಿ ವಲಸಿಗರಿಗೆ ಆದ್ಯತೆ : ಭಾರತೀಯ ವಲಸಿಗರಿಗೆ ಕಾನೂನಿನ ಸ್ಥಾನಮಾನ..!
ಅಮೆರಿಕಾ : ಅಮೆರಿಕದಲ್ಲಿರುವ ಅನಿವಾಸಿ ಭಾರತೀಯರಿಗೆ ಕಾನೂನಿನ ಸ್ಥಾನಮಾನ ನೀಡಲು ಚುನಾಯಿತ ಅಧ್ಯಕ್ಷರಾದ ಜೋ ಬೈಡೆನ್ ಅವರು ನಿರ್ಧರಿಸಿದ್ದಾರೆ. ಹೌದು ಸುಮಾರು 1.1 ಕೋಟಿ ವಲಸಿಗರಿಗೆ ಕಾನೂನಿನ ಸ್ಥಾನಮಾನ ನೀಡುವಂತೆ ಸಂಸತ್ ಸದಸ್ಯರನ್ನು ಸಹ ಕೋರಲಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಇದೇ ವಿಚಾರವಾಗಿ ಪ್ರಥಮ ಆದ್ಯತೆ ನೀಡಲಿದ್ದಾರೆ ಎನ್ನಲಾಗಿದೆ.
ದೆಹಲಿ: ಕನಿಷ್ಠ ತಾಪಮಾನ 5.7 ಡಿಗ್ರಿ ಸೆಲ್ಸಿಯಸ್ ದಾಖಲು
ಇನ್ನೂ ಮೊದಲ ದಿನದಂದೇ ಲಕ್ಷಾಂತರ ವಲಸಿಗರಿಗೆ ಪೌರತ್ವ ನೀಡುವ ಕುರಿತು ಮಹತ್ವದ ನಿರ್ಧಾರವನ್ನು ಬೈಡನ್ ಪ್ರಕಟಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೇ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಲಸೆ ಮಸೂದೆಯನ್ನು ಸಂಸತ್ಗೆ ಕಳುಹಿಸುವ ಪ್ರಕ್ರಿಯೆಯನ್ನು ಹೊಸ ಅಧ್ಯಕ್ಷರು ಕೈಗೊಳ್ಳಲಿದ್ದಾರೆ ಎಂದು ಬೈಡನ್ ಅವರ ಸಿಬ್ಬಂದಿ ಮುಖ್ಯಸ್ಥ ರೊನ್ ಕ್ಲೈನ್ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








