Joe Biden
ಅಮೆರಿಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಸದ್ಯ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಜೋ ಬಿಡೆನ್ ಅವರು ಭರ್ಜರಿಯಾಗಿ ಜಯ ಸಾಧಿಸಿದ್ದಾರೆ. ಹೀಗಿರುವಾಗ ಗೆದ್ದೇ ಗೆಲ್ಲುವೆ ಎಂಬ ಟ್ರಂಪ್ ವಿಶ್ವಾಸ ಚೂರು ಚೂರಾಗಿದೆ. ಸದ್ಯ ಸೋಲಿನಿಂದ ಶಾಕ್ ಗೆ ಒಳಗಾಗಿರುವ ಟ್ರಂಪ್ ಅವರು ಸೋಲನ್ನ ಒಪ್ಪಿಕೊಂಡಿಲ್ಲ. ಇತ್ತ ಚುನಾಯಿತ ಅಧ್ಯಕ್ಷ ಜೋ ಬಿಡೆನ್ ಅವರು ಆಗಲು ಹಲವು ಮಹತ್ವದ ವಿಚಾರ ತಮ್ಮ ಅಭಿಲಾಶೆಗಳನ್ನ ಹಂಚಿಕೊಂಡಿದ್ದಾರೆ. ಇದೀಗ ಭಾಷಣದಲ್ಲಿ ಮಾತನಾಡಿರುವ ಅವರು ವಿಭಜಿತ ದೇಶವನ್ನ ಒಂದುಗೂಡಿಸಲು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಬಿಡೆನ್ ಮುಡಿಗೆ `ಶ್ವೇತ’ ಕಿರೀಟ : ಭಾರತಕ್ಕಾಗುವ ಲಾಭಗಳೇನು..?
ಹೌದು ಗೆಲುವಿನ ನಗೆ ಬೀರಿರುವ ಬಿಡೆನ್ ಅವರು ‘ಈ ದೇಶದ ಜನ ಮಾತನಾಡಿದ್ದಾರೆ. ಅವರು ನಮಗೆ ಸ್ಪಷ್ಟ ವಾದ ವಿಜಯವನ್ನ ನೀಡಿದ್ದಾರೆ, ಇದು ನಮಗೆ ಮನವರಿಕೆಯಾದ ಜಯವಾಗಿದೆ’ ಎಂದು ಬಿಡೆನ್ ತಮ್ಮ ತವರಾದ ವಿಲ್ಮಿಂಗ್ಟನ್ʼನಲ್ಲಿ ತಮ್ಮ ವಿಜಯೋತ್ಸವ ಭಾಷಣದಲ್ಲಿ ಹೇಳಿದ್ದಾರೆ. ಸದ್ಯ ಬಾರತದ ಮೂಲದ ಕಮಲ ಹ್ಯಾರೀಸ್ ಅವರು ಅಮೆರಿಕಾದ ಉಪಾಧ್ಯೆಕ್ಷೆಯಾಗಿ ಆಯ್ಕೆಯಾಗಿ ಶ್ವೇತ ಭವನ ಪ್ರವೇಶಿಸಿರೋದು ಅಮೆರಿಕಾದಲ್ಲಿನ ಬಾರತೀಯರು ಹಾಗೂ ಭಾರತೀಯರ ಸಂಭ್ರಮಕ್ಕೆ ಕಾರಣವಾಗಿದೆ.
Joe Biden
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel